ದೇಶದಲ್ಲಿ ಶೀಘ್ರವೇ ವಂದೇ ಸ್ಲೀಪರ್ ಮತ್ತು ವಂದೇ ಮೆಟ್ರೋ ಆರಂಭ: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಭುವನೇಶ್ವರ, ಮೇ.19: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಯಶಸ್ಸಿನ ಉತ್ಸಾಹದಲ್ಲಿರುವ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ವಂದೇ ಸ್ಲೀಪರ್ ಮತ್ತು ವಂದೇ ಮೆಟ್ರೋವನ್ನು ಶೀಘ್ರದಲ್ಲೇ ದೇಶದಲ್ಲಿ ಜಾರಿಗೆ ತರಲಾಗುವುದು ಎಂದು ಒಡಿಶಾದಲ್ಲಿ ಮಾಹಿತಿ ನೀಡಿದ್ದಾರೆ.

ಪುರಿ ನಿಲ್ದಾಣದಲ್ಲಿ ಒಡಿಶಾದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡುವ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ವಂದೇ ಸ್ಲೀಪರ್ ಮತ್ತು ವಂದೇ ಮೆಟ್ರೋ ರೈಲುಗಳು ಈಗಾಗಲೇ ಅಭಿವೃದ್ಧಿ ಹಂತದಲ್ಲಿದ್ದು, ಮುಂದಿನ ವರ್ಷದ ಜನವರಿ - ಫೆಬ್ರವರಿ ವೇಳೆಗೆ ಸಿದ್ಧವಾಗಲಿದೆ ಎಂದಿದ್ದಾರೆ.

Vande Sleeper and Vande Metro will soon be rolled out in country: Ashwini Vaishnaw

"ಪುರಿ - ಹೌರಾ ವಂದೇ ಭಾರತ್ ನಂತರ, ತಲ್ಚೆರ್, ಅಂಗುಲ್, ಸಂಬಲ್ಪುರ್ ಮತ್ತು ಝಾರ್ಸುಗುಡಾವನ್ನು ಸಂಪರ್ಕಿಸುವ ಭುವನೇಶ್ವರ - ರೂರ್ಕೆಲಾ ಮಾರ್ಗದಲ್ಲಿ ಎರಡನೇ ರೈಲಿರು ಬೇಕು ಎಂದು ನಾವು ಪ್ರಧಾನಿಯವರಿಗೆ ಮನವಿ ಮಾಡಿದ್ದೇವೆ. ಇದಾದ ನಂತರ ರಾಜ್ಯದಲ್ಲಿ ವಂದೇ ಸ್ಲೀಪರ್ ಮತ್ತು ವಂದೇ ಮೆಟ್ರೋವನ್ನು ಪರಿಚಯಿಸಲಾಗುವುದು. ನಾವು ಜನನಿಬಿಡ ಪುರಿ - ಭುವನೇಶ್ವರ - ಕಟಕ್ ಮಾರ್ಗದಲ್ಲಿ ವಂದೇ ಮೆಟ್ರೋವನ್ನು ಓಡಿಸಲು ಯೋಜಿಸುತ್ತಿದ್ದೇವೆ" ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ವಂದೇ ಭಾರತ್ ರೈಲುಗಳ ಸ್ಲೀಪರ್ ಆವೃತ್ತಿಯನ್ನು ಮಧ್ಯಮ ಮತ್ತು ದೂರದ ಪ್ರಯಾಣಕ್ಕಾಗಿ ನಿಯೋಜಿಸಲಾಗಿದೆ. ವಂದೇ ಮೆಟ್ರೋವನ್ನು ಸ್ಥಳೀಯ ವಂದೇ ಭಾರತ್‌ನ ಕಡಿಮೆ - ದೂರ ಆವೃತ್ತಿಯ 100 ಕಿಮೀಗಿಂತ ಕಡಿಮೆ ದೂರವಿರುವ ನಗರಗಳ ನಡುವೆ ಪರಿಚಯಿಸಲಾಗುವುದು. ಇದು ದಿನಕ್ಕೆ ನಾಲ್ಕರಿಂದ ಐದು ಬಾರಿ ಚಲಿಸುತ್ತದೆ.

Vande Sleeper and Vande Metro will soon be rolled out in country: Ashwini Vaishnaw

ಸಚಿವ ಅಶ್ವಿನಿ ವೈಷ್ಣವ್ ಅವರ ಕ್ಯಾಬಿನೆಟ್ ಸಹೋದ್ಯೋಗಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಉದ್ದೇಶಿತ ಪುರಿ-ಭುವನೇಶ್ವರ್-ಕಟಕ್ ವಂದೇ ಮೆಟ್ರೋವನ್ನು ಧೆಂಕನಾಲ್‌ಗೆ ವಿಸ್ತರಿಸಲು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

ರಥಯಾತ್ರೆಗೆ ಮುನ್ನ ಜಗನ್ನಾಥ ಧಾಮ್ ಪುರಿ ಮತ್ತು ಹೌರಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ದಾಖಲೆ ಸಮಯದಲ್ಲಿ ಪ್ರಾರಂಭಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಪ್ರವಾಸೋದ್ಯಮವನ್ನು ಉತ್ತೇಜಿಸುವ ಜೊತೆಗೆ ಒಡಿಶಾ ಮತ್ತು ಪಶ್ಚಿಮ ಬಂಗಾಳದ ನಡುವೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲಿದೆ ಜೊತೆಗೆ ರೈಲು ಸೇವೆಯು ರಾಜ್ಯಕ್ಕೆ ಹೊಸ ಸಾಧ್ಯತೆಗಳನ್ನು ತರುತ್ತದೆ ಎಂದಿದ್ದಾರೆ.

ಭುವನೇಶ್ವರ ಮತ್ತು ಕಟಕ್ ಸುತ್ತಲೂ ಬೈ-ಪಾಸ್ ಒದಗಿಸಲು ಉದ್ದೇಶಿತ ಕ್ಯಾಪಿಟಲ್ ರಿಂಗ್ ರೋಡ್‌ಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಜಿಲ್ಲೆಯ ಜನರು ಮೆಟ್ರೋ ರೈಲು ಸೇವೆಗಳ ಪ್ರಯೋಜನವನ್ನು ಆನಂದಿಸಲು ಧೆಂಕನಲ್ ಅನ್ನು ಸಂಪರ್ಕಿಸಲು ಕರಾವಳಿ ರಿಂಗ್ ರಸ್ತೆಯ ಉದ್ದಕ್ಕೂ ವಂದೇ ಮೆಟ್ರೋ ರೈಲು ಮಾರ್ಗವನ್ನು ಅಭಿವೃದ್ಧಿ ಪಡಿಸಲು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವರಿಗೆ ವಿನಂತಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+