Vande Sadharan Express Trains: ವಿಶೇಷ ರೈಲಿನ ಕಾರ್ಯಾಚರಣೆ ಯಾವಾಗ? ವಿಶೇಷತೆ, ಮಾರ್ಗಗಳ ಅಪ್ಡೇಟ್ ಮಾಹಿತಿ
ಬೆಂಗಳೂರು, ನವೆಂಬರ್ 15: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯ ಯಶಸ್ಸಿನ ಬಳಿಕ ಭಾರತೀಯ ರೈಲ್ವೆಯು ಇದೀಗ ಮತ್ತೊಂದು ಹೊಸ ರೈಲು 'ವಂದೇ ಸಾಧಾರಣ್ ಎಕ್ಸ್‌ಪ್ರೆಸ್ ರೈಲು' (Vande Bharat Express Rail) ಅನ್ನು ಪರಿಚಯಿಸುತ್ತಿದೆ. ಈ ಮೂಲಕ ದೇಶದ ಪ್ರಯಾಣಿಕರಿಗೆ ಮತ್ತೊಂದು ಸುವ್ಯವಸ್ಥಿತ ಉತ್ತಮ ರೈಲು ಸೇವೆ ಲಭ್ಯವಾಗುವ ಕಾಲ ಸನ್ನಿಹಿತವಾಗಿದೆ.
ಭಾರತದ ಮೊದಲ 'ವಂದೇ ಸಾಧಾರಣ್ ರೈಲು' ಅಕ್ಟೋಬರ್ ಕೊನೆಯ ವಾರವಷ್ಟೇ ಮುಂಬೈನ ವಾಡಿ ರೈಲು ನಿಲ್ದಾಣಕ್ಕೆ ಆಗಮಿಸಿತು. ನಂತರ ಪ್ರಯೋಗಿಕ ಕಾರ್ಯಾಚರಣೆಗೆ ಹಳಿ, ಸಿಗ್ನಲಿಂಗ್ ತಪಾಸಣೆ ಮಾಡಿಕೊಂಡ ರೈಲ್ವೆ ಅಧಿಕಾರಿಗಳು ಮುಂಬೈನಿಂದ ಅಹಮದಾಬಾದ್ ವರೆಗೆ ಯಶಸ್ವಿಯಾಗಿ ಪ್ರಾಯೋಗಿಕ ಕಾರ್ಯಾಚರಣೆ ನಡೆಸಿದರು.

ಹಾಗಾದರೆ ಭಾರತದಲ್ಲಿ ಈ ರೈಲಿನ ಸೇವೆ ಯಾವಾಗ ಮತ್ತು ಯಾವ ಮಾರ್ಗಗಳಲ್ಲಿ ಆರಂಭವಾಗಲಿದೆ?. ಈ ರೈಲಿನ ವಿಶೇಷತೆಗಳೇನು, ವೇಗದ ಮಿತಿ ಎಷ್ಟು, ಭಾರತೀಯ ರೈಲ್ವೆ ಇಲಾಖೆಯ ಯೋಜನೆ ಉದ್ದೇಶವೇನು? ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ವಂದೇ ಸಾಧಾರಣ್ ರೈಲಿನ ವಿಶೇಷತೆಗಳು
ಸಾಮಾನ್ಯ ರೈಲಿಗಿಂತ ಈ ರೈಲು ವಿಶೇಷವಾಗಿದೆ. ಕೆಲವು ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ವಂದೇ ಸಾಧಾರಣ್ ರೈಲಿಗೆ ಒಟ್ಟು 22 ಕೋಚ್‌ಗಳಿರುತ್ತವೆ. ಎರಡು ಲೋಕೋಮೋಟಿವ್ ಬೋಗಿ (ಇಂಜಿನ್) ಇರಲಿದೆ. ಉಳಿದಂತೆ 14 ಸ್ಲೀಪರ್ ಕೋಚ್‌ಗಳು, 08 ಸಾಮಾನ್ಯ ಬೋಗಿಗಳನ್ನು ಈ ರೈಲು ಹೊಂದಿರಲಿದೆ. ಇವುಗಳನ್ನು ಪ್ರಯಾಣಿಕರಿಗೆ ಆರಾಮದಾಯಕ ಸೇವೆ ನೀಡುವಂತೆ ವಿನ್ಯಾಸ ಮಾಡಲಾಗಿದೆ.
India's first Push Pull Train | Vande Sadharan Express | Speed Trail Spotting - Bharatiya Railworld.https://t.co/3FqTWwm9Oj pic.twitter.com/dgqR1AMvSN
— Bhartiya_Railworld (@BhartiRailworld) November 7, 2023
ಈ ರೈಲಿನ ಎಸಿ ಬೋಗಿಗಳ ಇಲ್ಲ. ಜೊತೆಗೆ ಸ್ವಂಚಾಲಿತ ಬಾಗಿಲುಗಳ ಇರದೇ ಮ್ಯಾನುವಲ್ ಬಾಗಿಲುಗಳು ಇವೆ. ಮುಖ್ಯವಾಗಿ ಈ ರೈಲಿನ ಪ್ರತಿ ಕೋಚಿನಲ್ಲಿ ಸಿಸಿಟಿವಿ ಅವಳಡಿಕೆ ಮಾಡಲಾಗಿದೆ. ಹೀಗೆ ಪ್ರತಿ ಹಂತದಲ್ಲಿಯೂ ಪ್ರಯಾಣಿಕರ ಆದ್ಯತೆ, ರಕ್ಷಣೆ ಗುರಿ ಇಟ್ಟುಕೊಂಡು ರೈಲನ್ನು ವಿನ್ಯಾಸ ಮಾಡಲಾಗಿದೆ. ಪ್ರಯಾಣಿಕರಿಗೆ ವಂದೇ ಭಾರತ್ ರೈಲಿನ ಈ ರೈಲು ಸಹ ಅತ್ಯುತ್ತಮ ಪ್ರಯಾಣದ ಅನುಭವ ನೀಡಲಿದೆ. ವೇಗದ ಸುರಕ್ಷ ಪ್ರಯಾಣದ ಮೂಲಕ ಈ ರೈಲು ಮೂಲಕ ಪ್ರಯಾಣಿಕರು ತಮ್ಮ ಗಮ್ಯ ಸ್ಥಳಗಳನ್ನು ತಲುಪಬಹುದಾಗಿದೆ.
ಯೋಜನೆ ಉದ್ದೇಶವೇನು?
ಈ ವಿಶೇಷ ರೈಲು ಸೇವೆ ಆರಂಭವಾದರೆ 130 ಕಿಲೋ ಮೀಟರ್ ದೂರವನ್ನು ಕೇವಲ ಒಂದು ಗಂಟೆಯಲ್ಲಿ ಕ್ರಮಿಸಬಹುದಾಗಿದೆ. ದೇಶದ ಜನರಿಗೆ ಕಡಿಮೆ ಹಣದಲ್ಲಿ ದೂರದ ಊರುಗಳಿಗೆ ಪ್ರಯಾಣ ಸೇವೆ ನೀಡಲು ಈ ರೈಲನ್ನು ಸರ್ಕಾರ ಆರಂಭಿಸುತ್ತಿದೆ.

ಸದ್ಯದ ಮಾಹಿತಿ ಪ್ರಕಾರ, 500 ಕಿಲೋ ಮೀಟರ್ ದೂರದ ಪ್ರದೇಶಗಳಿಗೆ ಮಾತ್ರ ಈ ರೈಲಿನ ಸೇವೆ ಲಭ್ಯವಾಗಲಿದೆ. ಲಕ್ಷಾಂತರ ಪ್ರಯಾಣಿಕರಿಗೆ ಪರ್ಯಾಯ ರೈಲು ಸೇವೆ ಸಿಕ್ಕಂತಾಗುತ್ತದೆ. ಆಯಾ ಭಾಗದ ವ್ಯಾಪಾರ ವಹಿವಾಟು, ಪ್ರವಾಸಿ ತಾಣಗಳ ಅಭಿವೃದ್ಧಿಗೂ ಇದು ಸಹಾಯವಾಗಲಿದೆ.
ವಂದೇ ಸಾಧಾರಣ್ ರೈಲು ಓಡಲಿರುವ ಮಾರ್ಗಗಳು
ಈ ವಂದೇ ಸಾಧಾರಣ್ ಎಕ್ಸ್‌ಪ್ರೆಸ್ ರೈಲುಗಳು ಯಾವಾಗ ಆರಂಭ ಎನ್ನುವುದರ ಕುರಿತು ಆದಷ್ಟು ಶೀಘ್ರವೇ ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ನೀಡಲಿದೆ. ಈ ರೈಲುಗಳ ಸಂಭವನೀಯ ಮಾರ್ಗಗಳನ್ನು ನೋಡುವುದಾದರೆ, ಮುಂಬೈ-ಅಹಮದಾಬಾದ್, ನವದೆಹಲಿ-ಹೌರಾ (ಪಶ್ಚಿಮ ಬಂಗಾಳ), ನವದೆಹಲಿ-ಮುಂಬೈ, ನವದೆಹಲಿ- ಹೈದರಾಬಾದ್ (ತೆಲಂಗಾಣ) ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಈ ರೈಲು ಸಂಚಾರ ನಡೆಸುವ ಸಾಧ್ಯತೆಗಳು ಇವೆ.
ಇನ್ನೂ ಕರ್ನಾಟಕದಲ್ಲಿ ಬೆಂಗಳೂರಿನಿಂದ ಬೆಳಗಾವಿ ಈ ವಿಶೇಷ ರೈಲು ಓಡಿಸುವಂತೆ ಬೇಡಿಕೆ ಇದೆ. ಸದ್ಯ ಸರ್ಕಾರದ ಉದ್ದೇಶಿತ ಯೋಜನೆ ಅಂತಿಮ ಹಂತಕ್ಕೆ ಬಂತು ನಿಂತಿದೆ. ಇದೇ ವರ್ಷವೇ ವಂದೇ ಸಾಧಾರಣ್ ರೈಲಿಗೆ ಚಾಲನೆ ನೀಡುವ ಲಕ್ಷಣಗಳು ಇವೆ.












Click it and Unblock the Notifications