Vande Bharat Sleeper: ಬೆಂಗಳೂರು, ತಿರುಪತಿಗೆ ಬರುತ್ತಾ ವಂದೇ ಭಾರತ್ ಸ್ಲೀಪರ್ ರೈಲು

ವಿಶಾಖಪಟ್ಟಣ: ವಿಶಾಖಪಟ್ಟಣ ಲೋಕಸಭಾ ಕ್ಷೇತ್ರದ ಸಂಸದ ಎಂ. ಶ್ರೀಭರತ್ ಅವರು ವಿಶಾಖಪಟ್ಟಣದಿಂದ ತಿರುಪತಿ ಹಾಗೂ ಬೆಂಗಳೂರಿಗೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಕೇಂದ್ರ ಸಚಿವರಿಗೆ ಪತ್ರ ಬರೆದಿರುವ ಶ್ರೀಭರತ್, ವಿಶಾಖಪಟ್ಟಣದಿಂದ ಬೆಂಗಳೂರಿಗೆ ಪ್ರಯಾಣಿಸುವ ಹೆಚ್ಚಿನ ಪ್ರಯಾಣಿಕರು ಪ್ರಸ್ತುತ ಬಸ್ ಸೇವೆಗಳನ್ನೇ ಅವಲಂಬಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಮಾರ್ಗದಲ್ಲಿ ಪ್ರತಿದಿನ ಸುಮಾರು 30 ಬಸ್‌ಗಳು ಸಂಚರಿಸುತ್ತಿರುವುದು ಪ್ರಯಾಣಿಕರ ಬೇಡಿಕೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

Vande Bharat Sleeper Vizag MP Sribharat seeks Vande Bharat sleeper trains to Tirupati Bengaluru

ಪ್ರಸ್ತುತ ಬಸ್‌ಗಳು ಸಂಜೆ ವೇಳೆಗೆ ವಿಶಾಖಪಟ್ಟಣದಿಂದ ಹೊರಟು ಮರುದಿನ ಬೆಳಿಗ್ಗೆ ಸುಮಾರು 11 ಗಂಟೆಗೆ ಬೆಂಗಳೂರಿಗೆ ತಲುಪುತ್ತವೆ. ಈ ಹಿನ್ನೆಲೆಯಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭವಾದರೆ ಪ್ರಯಾಣಿಕರಿಗೆ ಹೆಚ್ಚು ವೇಗವಾದ, ಆರಾಮದಾಯಕ ಹಾಗೂ ಅನುಕೂಲಕರ ಪ್ರಯಾಣದ ಆಯ್ಕೆ ಲಭ್ಯವಾಗಲಿದೆ ಎಂದು ಸಂಸದರು ಶ್ರೀಭರತ್ ಅವರು ತಿಳಿಸಿದ್ದಾರೆ. ಇದೇ ರೀತಿ, ವಿಶಾಖಪಟ್ಟಣದಿಂದ ತಿರುಪತಿಗೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭವಾದರೆ ಉತ್ತರ ಆಂಧ್ರ ಪ್ರದೇಶದ ಸಾವಿರಾರು ಪ್ರಯಾಣಿಕರಿಗೆ ಮಹತ್ತರ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಸಂಸದ ಶ್ರೀಭರತ್ ಅವರ ಮನವಿಯ ಆಧಾರದ ಮೇಲೆ ದಕ್ಷಿಣ ಕರಾವಳಿ ರೈಲ್ವೆ ವಲಯ (South Coast Railway Zone) ಅಧಿಕಾರಿಗಳು ಅಗತ್ಯ ಪ್ರಸ್ತಾವನೆಯನ್ನು ಸಿದ್ಧಪಡಿಸಿ ರೈಲ್ವೆ ಸಚಿವಾಲಯಕ್ಕೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ವಿಶಾಖಪಟ್ಟಣಕ್ಕೆ ಶೀಘ್ರದಲ್ಲೇ ತಿರುಪತಿ ಮತ್ತು ಬೆಂಗಳೂರಿಗೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಮಂಜೂರಾಗುವ ವಿಶ್ವಾಸವಿದೆ ಎಂದು ಸಂಸದ ಶ್ರೀಭರತ್ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.

ಈ ಯೋಜನೆ ಜಾರಿಯಾದರೆ ಉತ್ತರ ಆಂಧ್ರದ ಜನರ ಪ್ರಯಾಣ ಮತ್ತಷ್ಟು ಸುಲಭ ಮತ್ತು ಆರಾಮದಾಯಕವಾಗಲಿದೆ. ವಿಶಾಖಪಟ್ಟಣದಿಂದ ತಿರುಪತಿ ಮತ್ತು ಬೆಂಗಳೂರಿಗೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭವಾದರೆ, ಉತ್ತರ ಆಂಧ್ರ ಪ್ರದೇಶದ ಸಾವಿರಾರು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+