Vande Bharat Sleeper Train: 'ವಿಬಿ' ಸ್ಲೀಪರ್ ರೈಲು ಕಾರ್ಯಾಚರಣೆಯ ಅಪ್ಡೇಟ್ ಮಾಹಿತಿ
ಬೆಂಗಳೂರು, ಜನವರಿ 09: ವಂದೇ ಭಾರತ್ ಎಕ್ಸ್‌ಪ್ರೆಸ್‌ನ (Vande Bharat Express Train) ಸ್ಲೀಪರ್ ಆವೃತ್ತಿಯ ಒಟ್ಟು 16 ಕೋಚುಗಳ ಈ ಎಸಿ ಸ್ಲೀಪರ್ 'ವಿಬಿ' ರೈಲನ್ನು ಬೆಂಗಳೂರಿನ ಭಾರತ್ ಅರ್ಥ್ ಮೂವರ್ ಲಿಮಿಟೆಡ್ (BRML) ಚೆನ್ನೈನ ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿ ಸಹಯೋಗದೊಂದಿಗೆ ವಿನ್ಯಾಸಗೊಳಿಸಿ ತಯಾರಿಸುತ್ತಿದೆ. ಇದೀಗ ಈ ರೈಲು ಕಾರ್ಯಾಚರಣೆ ಅಪ್ಡೇಟ್ ಮಾಹಿತಿ ಸಿಕ್ಕಿದೆ.
ವಂದೇ ಭಾರತ್ ಎಕ್ಸಪ್ರೆಸ್ ಸೆಮಿ ಹೈ ಸ್ಪೀಡ್ ರೈಲಿನ ಕಾರ್ಯಾಚರಣೆ ಇನ್ನೂ ಕೆಲವೇ ತಿಂಗಳಲ್ಲಿ ಆರಂಭವಾಗಲಿದೆ. ಅಂದರೆ ಇದೇ ವರ್ಷ 2024ರಲ್ಲಿ ವಾಣಿಜ್ಯ ಸೇವೆ ಆರಂಭಲಿಸಿದ್ದು, ಈ ಕುರಿತು ರೈಲ್ವೆ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಅತ್ಯುತ್ತಮ ಐಶಾರಾಮಿ ಬೋಗಿ ಒಳಗೊಂಡ ಸೆಮಿ ಹೈಸ್ಪೀಡ್ ವಂದೇ ಭಾರತ್ ನ ಸ್ಲೀಪರ್ ಆವೃತ್ತಿಯ ಒಳಭಾಗವೂ ಸಾಕಷ್ಟು ಆಕರ್ಷಕವಾಗಿ ನಿರ್ಮಿಸಲಾಗಿದೆ. ಇದು 2024 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು 16 ಕೋಚ್‌ಗಳಿದ್ದು, ಅದರಲ್ಲಿ ಒಂದು ಕೋಚ್ ಫಸ್ಟ್ ಎಸಿ ಆಗಿದ್ದರೆ, 4 ಬೋಗಿಗಳು ಸೆಕೆಂಡ್ ಕ್ಲಾಸ್ ಎಸಿ ವ್ಯವಸ್ಥೆ ಹೊಂದಿವೆ. ಇನ್ನೂ 11 ಕೋಚ್‌ಗಳು ಥರ್ಡ್ ಎಸಿ ಆಸನ ಹೊಂದಿದ ಬೋಗಿಗಳಾಗಿವೆ.
ರೈಲ್ವೆ ಸಚಿವಾಲಯದಿಂದ ಅಗತ್ಯ ಸಿದ್ಧತೆ
ವೇಗದ ರೈಲಿನ ಸಾಲಿಗೆ ಸೇರಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬಗ್ಗೆ ನಿಮಗೆ ಗೊತ್ತೇ ಇದೆ. ಆದರೆ ಇದರಲ್ಲಿ ಆಸನ ವ್ಯವಸ್ಥೆ ಮಾತ್ರ ಇದ್ದು, ಸ್ಲೀಪಿಂಗ್ ವ್ಯವಸ್ಥೆ ಇಲ್ಲ. ಹೀಗಾಗಿ ಸ್ಲೀಪರ್ ರೈಲುಗಳನ್ನು ಟ್ರ್ಯಾಕ್‌ಗೆ ಇಳಿಸುವ ಸಿದ್ಧತೆ ರೈಲ್ವೆ ಸಚಿವಾಲಯ ಮಾಡಿಕೊಳ್ಳುತ್ತಿದೆ.
2024 ರ ವೇಳೆಗೆ ಸ್ಲೀಪರ್ ವ್ಯವಸ್ಥೆ ಸಹಿತ ವಂದೇ ಭಾರತ್ ರೈಲನ್ನು ಪ್ರಾರಂಭಿಸಬಹುದು ಎನ್ನಲಾಗುತ್ತಿದೆ. ಭಾರತವು ಈ ಸ್ಲೀಪರ್ ವಂದೇ ಭಾರತ್ ತಯಾರಿಸಲು ರಷ್ಯಾದ ಕಂಪನಿಗಳ ಜೊತೆಗೆ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ಜಂಟಿ ಉದ್ಯಮವಾದ ಕೈನೆಟ್ ರೈಲ್ವೇ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಸ್ಲೀಪರ್ 'ವಿಬಿ' ರೈಲಿನ ವಿಶೇಷತೆ
ಪ್ರಮುಖವಾದ ಅಂಶವೇಂದರೆ ಈ ಸ್ಲೀಪರ್ ವ್ಯವಸ್ಥೆಯ ವಂದೇ ಭಾರತ್ ರೈಲನ್ನು ಬೆಂಗಳೂರಿನ ಭಾರತ್ ಅರ್ಥ್ ಮೂವರ್ ಲಿಮಿಟೆಡ್ (BEML) ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿ, ಚೆನ್ನೈ ಸಹಯೋಗದಲ್ಲಿ ತಯಾರಿಸುತ್ತಿದೆ. ಇದು ಪ್ರತಿ ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲಿದೆ.
ವಂದೇ ಭಾರತ್ ಸ್ಲೀಪರ್ ರೈಲು 16 ಬೋಗಿಗಳನ್ನು ಹೊಂದಿರುತ್ತದೆ. ಹವಾನಿಯಂತ್ರಿತ ಬೋಗಿಳಿವೆ. ಐಶಾರಾಮಿ ವ್ಯವಸ್ಥೆ, ಆರಾಮದಾಯಕ ಪ್ರಯಾಣ ಸೇವೆ ನೀಡಲಿದೆ. ಸಿಸಿ ಕ್ಯಾಮೆರಾಗಳು ಒಳಗಡೆ ಇರಲಿವೆ. ಆಧುನಿಕ ವಿನ್ಯಾಸದಲ್ಲಿ ಈ ರೈಲುನ್ನು ತಯಾರಿಸಲಾಗಿದೆ. ಪ್ರಯಾಣಿಕರ ಆದ್ಯತೆಗಳನ್ನು ಪರಿಗಣಿಸಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಮತ್ತೆ ಮತ್ತೆ ಪ್ರಯಾಣಿಸಬೇಕೆನ್ನುವ ಅನುಭವ
ಈ ರೈಲುಗಳು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿರುತ್ತದೆ. ಇವು ಸಂವಹನದ ಬಾಗಿಲುಗಳಾಗಿವೆ. ರೈಲಿನಲ್ಲಿ ವ್ಯಾಕ್ಯೂಮ್ ಟಾಯ್ಲೆಟ್ ಇರಲಿದೆ. ಅತ್ಯುತ್ತಮ ಲೈಟಿಂಗ್ ಸಿಸ್ಟಮ್ ಇದೆ. ಬೋಗಿ ಏರಲು ಪ್ರಯಾಣಿಕರ ಸ್ನೇಹಿ ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗಿದೆ. ಸೀಟುಗಳಿಗೆ ಬಳಸುವ ಫೋಮ್ ಮತ್ತು ಕವರ್‌ಗಳು ಉತ್ತಮ ಗುಣಮಟ್ಟದ್ದಾಗಿದೆ. ಪ್ರಯಾಣಿಕರು ಈ ರೈಲಿನಲ್ಲಿ ಒಮ್ಮೆ ಪ್ರಯಾಣಿಸಿದರೆ ಮತ್ತೆ ಮತ್ತೆ ಪ್ರಯಾಣಿಸಬೇಕು ಎಂಬಂತಹ ಅನುಭವ ನೀಡಲಿದೆ ಎಂದು ರೈಲ್ವೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications