Vande Bharat Express: ಈ ಹೊಸ ಮಾರ್ಗಗಳಲ್ಲಿ ಮಾರ್ಚ್‌ 12ರಿಂದ ವಂದೇ ಭಾರತ್‌ ರೈಲುಗಳ ಸಂಚಾರ, ಸಮಯ, ಮಾರ್ಗಗಳ ವಿವರ ತಿಳಿಯಿರಿ

ಆಂಧ್ರಪ್ರದೇಶ, ಮಾರ್ಚ್‌, 10: ಐಸ್ಪೀಡ್‌ ಐಷಾರಾಮಿ ರೈಲು ವಂದೇ ಭಾರತ್‌ ರೈಲು ಈಗಾಗಲೇ ದೇಶದ ಬಹುತೇಕ ಭಾಗಗಳಲ್ಲಿ ಸಂಚಾರ ಮಾಡುತ್ತಿದೆ. ಈ ರೈಲು ದಿನದಿಂದ ದಿನಕ್ಕೆ ಜನಮನ್ನಣೆಯನ್ನು ಪಡೆಯುತ್ತಲೇ ಇದ್ದು, ಇನ್ನೂ ಬೇರೆ ಬೇರೆ ಕಡೆ ವಿಸ್ತರಣೆ ಆಗುತ್ತಲೇ ಇದೆ. ಹಾಗೆಯೇ ರೈಲ್ವೆ ಮಂಡಳಿಯು ಇತ್ತೀಚೆಗೆ ಎರಡು ಹೊಚ್ಚಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಅನುಮೋದಿಸಿದೆ. ಒಂದು ವಿಶಾಖಪಟ್ಟಣಂ, ಆಂಧ್ರಪ್ರದೇಶದ ಪುರಿ, ಒಡಿಶಾ ಮತ್ತು ಇನ್ನೊಂದು ವಿಶಾಖಪಟ್ಟಣವನ್ನು ತೆಲಂಗಾಣದ ಸಿಕಂದರಾಬಾದ್‌ನೊಂದಿಗೆ ಸಂಪರ್ಕಿಸುತ್ತದೆ. ಸಮಯ, ದರಗಳ ವಿವರವನ್ನು ಇಲ್ಲಿ ತಿಳಿಯಿರಿ.

ಪುರಿ-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್: ರೈಲ್ವೆ ಸಚಿವಾಲಯದಿಂದ ಅನುಮೋದಿಸಲಾದ ಈ ಹೈಸ್ಪೀಡ್ ರೈಲು ಶನಿವಾರ ಹೊರತುಪಡಿಸಿ ವಾರದ ಪ್ರತಿ ದಿನವೂ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿದೆ. ನಿಖರವಾದ ಪ್ರಾರಂಭದ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ. ಆದರೂ, ಎರಡೂ ಕಡೆಗಳಿಗೆ ನಿರ್ಗಮನ ಮತ್ತು ಆಗಮನದ ವಿವರಗಳು ಇಲ್ಲಿವೆ ತಿಳಿಯಿರಿ.

Vande Bharat Express trains will run on these new routes of India from March 12 Know Timings routes details

ರೈಲು ಸಂಖ್ಯೆ 20841 (ಪುರಿ-ವಿಶಾಖಪಟ್ಟಣ)

* ಪುರಿ ನಿಲ್ದಾಣದಿಂದ ಬೆಳಗ್ಗೆ 5:15ಕ್ಕೆ ಹೊರಡುತ್ತದೆ
* ಖುರ್ದಾ ರಸ್ತೆ (5:57 am), ಬ್ರಹ್ಮಪುರ (7:40 am), ಪಲಾಸ (8:48 am), ಶ್ರೀಕಾಕುಲಂ ರಸ್ತೆ (ಬೆಳಗ್ಗೆ 9:33), ಮತ್ತು ವಿಜಯನಗರಂ (ಬೆಳಗ್ಗೆ 10:18),
ಇನ್ನು ಬೆಳಗ್ಗೆ 11:30ಕ್ಕೆ ವಿಶಾಖಪಟ್ಟಣಂ ತಲುಪುತ್ತದೆ.

ರೈಲು ಸಂಖ್ಯೆ 20842 (ವಿಶಾಖಪಟ್ಟಣ-ಪುರಿ)

* ವಿಶಾಖಪಟ್ಟಣಂ ನಿಲ್ದಾಣದಿಂದ ಮಧ್ಯಾಹ್ನ 3:40ಕ್ಕೆ ನಿರ್ಗಮಿಸುತ್ತದೆ
* ವಿಜಯನಗರಂ (ಸಂಜೆ 4:30), ಶ್ರೀಕಾಕುಲಂ ರಸ್ತೆ (ಸಂಜೆ 5:28), ಪಲಾಸ (ಸಂಜೆ 6:20), ಬ್ರಹ್ಮಪುರ (ಸಂಜೆ 7:00), ಮತ್ತು ಖುರ್ದಾ ರಸ್ತೆ (8:55pm)
ಇನ್ನು ರಾತ್ರಿ 9:55ಕ್ಕೆ ಪುರಿ ತಲುಪುತ್ತದೆ.

ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್: ರೈಲ್ವೆ ಸಚಿವಾಲಯದಿಂದ ಅನುಮೋದಿಸಲ್ಪಟ್ಟ ಈ ರೈಲು ಗುರುವಾರ ಹೊರತುಪಡಿಸಿ ವಾರದ ಪ್ರತಿ ದಿನವೂ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿದೆ. ವಿಶಾಖಪಟ್ಟಣದಿಂದ ಸಿಕಂದರಾಬಾದ್‌ಗೆ ಪ್ರಯಾಣಿಸುವ ಮೂಲ ವಂದೇ ಭಾರತ್ ಮೊದಲು ಕಾರ್ಯನಿರ್ವಹಿಸುತ್ತಿದ್ದಾಗ, ಈ ಅನುಮೋದನೆಯು ಸಿಕಂದರಾಬಾದ್‌ನಿಂದ ವೈಜಾಗ್‌ಗೆ ಹೊಸ ರಿವರ್ಸ್ ಎಕ್ಸ್‌ಪ್ರೆಸ್ ಅನ್ನು ಘೋಷಿಸಿತು. ಮತ್ತೊಮ್ಮೆ, ನಿಖರವಾದ ಪ್ರಾರಂಭದ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ. ಇನ್ನು ಎರಡೂ ಕಡೆಗಳಿಗೆ ನಿರ್ಗಮನ ಮತ್ತು ಆಗಮನದ ವಿವರಗಳು ಇಲ್ಲಿವೆ.

ರೈಲು ಸಂಖ್ಯೆ 20707 (ಸಿಕಂದರಾಬಾದ್‌-ವಿಶಾಖಪಟ್ಟಣ)

* ಸಿಕಂದರಾಬಾದ್ ನಿಲ್ದಾಣದಿಂದ ಬೆಳಗ್ಗೆ 5:05ಕ್ಕೆ ಹೊರಡುತ್ತದೆ
* ವಾರಂಗಲ್ (6:39 am), ಖಮ್ಮಂ (7:43 am), ವಿಜಯವಾಡ (9:05 am), ರಾಜುಮಂಡ್ರಿ (11:00 am), ಮತ್ತು ಸಮಲ್ಕೋಟ್ (11: 43am) ಇನ್ನು ಮಧ್ಯಾಹ್ನ 1:50ಕ್ಕೆ ವಿಶಾಖಪಟ್ಟಣವನ್ನು ತಲುಪುತ್ತದೆ.

ರೈಲು ಸಂಖ್ಯೆ 20708 (ವಿಶಾಖಪಟ್ಟಣ-ಸಿಕಂದರಾಬಾದ್‌)

* ವಿಶಾಖಪಟ್ಟಣಂ ನಿಲ್ದಾಣದಿಂದ ಮಧ್ಯಾಹ್ನ 2:35ಕ್ಕೆ ಹೊರಡುತ್ತದೆ
* ಸಮಲ್ಕೋಟ್ (4:03 pm), ರಾಜಮಂಡ್ರಿ (4:38 pm), ವಿಜಯವಾಡ (6:40 pm), ಖಮ್ಮಂ (8:03 pm), ಮತ್ತು ವಾರಂಗಲ್ (9: 03 pm) ಇನ್ನು ರಾತ್ರಿ 11:20ಕ್ಕೆ ಸಿಕಂದರಾಬಾದ್ ತಲುಪುತ್ತದೆ

ಈ ರೈಲು ಸಂಪರ್ಕಗಳು ಪ್ರಕೃತಿ ಸೌಂದರ್ಯವನ್ನು ಒಳಗೊಂಡಿರುವ ಸುಂದರ ನಗರಗಳ ನಡುವೆ ಅನುಕೂಲ ಮತ್ತು ಸಂಪರ್ಕ ಕಲ್ಪೊಸುತ್ತವೆ. ಈ ರೈಲುಗಳನ್ನು ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಬಹುದು ಎಂದು ತಾತ್ಕಾಲಿಕವಾಗಿ ಘೋಷಿಸಲಾಗಿದೆ. ಈ ದಿನಾಂಕವನ್ನು ಇನ್ನೂ ದೃಢೀಕರಿಸಬೇಕಾಗಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+