ಪ್ರೇಮಿಗಳ ದಿನ; ನಿತ್ಯಾನಂದ ಸ್ವಾಮಿ ವಿಡಿಯೋ ವೈರಲ್!

Recommended Video

      ಮತ್ತೆ ಟ್ರೋಲ್ ಆಯ್ತು ನಿತ್ಯಾನಂದ ವಿಡಿಯೋ | Nintananda's Valentines day | Oneindia

      ಬೆಂಗಳೂರು, ಫೆಬ್ರವರಿ 14 : ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿ ಎಲ್ಲಿದ್ದಾರೆ? ಎಂಬುದು ಸದ್ಯಕ್ಕೆ ಪೊಲೀಸರಿಗೂ ಗೊತ್ತಿಲ್ಲ. ಆದರೆ, ಪ್ರೇಮಿಗಳ ದಿನದಂದು ಸ್ವಾಮೀಜಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

      ಫೇಸ್ ಬುಕ್, ಹಲೋ, ವಾಟ್ಸಪ್ ಸ್ಟೇಟಸ್‌ಗಳಲ್ಲಿ ಶುಕ್ರವಾರ ನಿತ್ಯಾನಂದ ಸ್ವಾಮಿಯ ವಿಡಿಯೋವೊಂದು ಹರಿದಾಡುತ್ತಿದೆ. ಕೇವಲ 24 ಸೆಕೆಂಡ್‌ಗಳ ವಿಡಿಯೋದಲ್ಲಿ ನಿತ್ಯಾನಂದ ಹೇಳಿದ ಮಾತುಗಳು ಪ್ರೇಮಿಗಳ ದಿನದಂದು ಜನರ ಹೃದಯಕ್ಕೆ ಲಗ್ಗೆ ಇಟ್ಟಿದೆ.

      ಇಂದು ಪ್ರೇಮಿಗಳ ದಿನ, ಶಿವರಾತ್ರಿಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಸಮಯದಲ್ಲಿ ಎರಡನ್ನೂ ಹೋಲಿಕೆ ಮಾಡಿ ನಿತ್ಯಾನಂದ ಸ್ವಾಮಿ ಆಡಿರುವ ಮಾತುಗಳು ವಿಡಿಯೋದಲ್ಲಿವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

      Valentines Day Swami Nithyananda Video Viral

      ತಮ್ಮ ಭಕ್ತರಿಗೆ ಪ್ರವಚನ ನೀಡುವ ಸಂದರ್ಭದಲ್ಲಿ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿ ಹೇಳಿರುವ ಮಾತುಗಳಿವು. ಇಂದು ಏಕೆ ವೈರಲ್ ಆಗುತ್ತಿದೆ?, ಎಲ್ಲರ ಸ್ಟೇಟಸ್‌ಗೆ ಏಕೆ ಸೇರುತ್ತಿದೆ? ಎಂಬುದಕ್ಕೆ ಬಿಡದಿ ಧ್ಯಾನಪೀಠದ ಸ್ವಾಮಿ ಉತ್ತರ ಕೊಡಬೇಕು.

      Valentines Day Special ಎಂಬ ಟ್ಯಾಗ್ ಲೈನ್ ಹೊಂದಿರುವ ವಿಡಿಯೋ ಇದಾಗಿದೆ. ಟ್ವಿಟರ್, ವಾಟ್ಸಪ್, ಫೇಸ್ ಬುಕ್ ಸ್ಟೇಟಸ್‌ಗಳಲ್ಲಿ ವಿಡಿಯೋ ಸೇರಿಕೊಂಡಿದೆ.

      ವೈರಲ್ ಆಗಿರುವ ವಿಡಿಯೋ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+