ವೈಷ್ಣೋದೇವಿ ಹುಂಡಿಯಲ್ಲಿ ನಕಲಿ ಚಿನ್ನ ಬೆಳ್ಳಿ ಆಭರಣ

ಜಮ್ಮು ಮತ್ತು ಕಾಶ್ಮೀರದಲ್ಲಿರುವ ವೈಷ್ಣೋದೇವಿ ದೇವಾಲಯಕ್ಕೆ ಭಕ್ತರು ಕಳೆದ ಐದು ವರ್ಷಗಳಲ್ಲಿ 193.5 ಕೆಜಿ ಚಿನ್ನ ಮತ್ತು 81,635 ಕೆಜಿ ಬೆಳ್ಳಿಯನ್ನು ನೀಡಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸದವರಿಗೆ ಮಾಹಿತಿ ನೀಡಿದೆ. ಹೀಗೆ ದೇವಾಲಯದ ಹುಂಡಿ ಸೇರಿದ ಆಭರಣಗಳಲ್ಲಿ ನಕಲಿಯೂ ಇದೆ.
ದೇವಾಲಯಕ್ಕೆ ಒಟ್ಟು 43 ಕೆಜಿ ಚಿನ್ನ ಮತ್ತು 57,815 ಕೆಜಿ ಬೆಳ್ಳಿ ನಕಲಿ ಎಂದು ದೇವಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೆ.ಭಂಡಾರಿ ಮಾಹಿತಿ ನೀಡಿದ್ದಾರೆ. ಚಿನ್ನ ಮತ್ತು ಬೆಳ್ಳಿಯನ್ನು ಸರ್ಕಾರಕ್ಕೆ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಈ ಬಗ್ಗೆ ದೇವಾಲಯಕ್ಕೆ ಮಾಹಿತಿ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.
ಕೆಲವು ಭಕ್ತರು ಚಿನ್ನ ಮತ್ತು ಬೆಳ್ಳಿಯ ಶುದ್ಧತೆಯ ಬಗ್ಗೆ ಪರಿಶೀಲನೆ ನಡೆಸದರೆ ಅವುಗಳನ್ನು ಕೊಂಡುಕೊಳ್ಳುತ್ತಾರೆ. ಅದನ್ನು ಹಾಗೆಯೇ ದೇವಾಲಯಕ್ಕೆ ಸಮರ್ಪಿಸುವುದಿಂದ ಇಂತಹ ಅಚಾತುರ್ಯ ನಡೆದಿರಬಹುದು ಎಂದು ಎಂ.ಕೆ.ಭಂಡಾರಿ ತಿಳಿಸಿದ್ದಾರೆ. ಅಂದಹಾಗೆ ಕಳೆದ ವರ್ಷ ವೈಷ್ಣೋದೇವಿ ದೇಗುಲಕ್ಕೆ ಒಂದು ಕೋಟಿಗೂ ಅಧಿಕ ಭಕ್ತರು ಭೇಟಿ ನೀಡಿದ್ದರು.












Click it and Unblock the Notifications