ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಉತ್ಪಾದನೆ ಹೆಚ್ಚುತ್ತಿದ್ದಂತೆ ಲಸಿಕೆ ಪ್ರಕ್ರಿಯೆಯೂ ಚುರುಕಾಗಲಿದೆ"

|
Google Oneindia Kannada News

ನವದೆಹಲಿ, ಮೇ 25: ಕೊರೊನಾ ಲಸಿಕೆಗಳಿಗೆ ಜಾಗತಿಕವಾಗಿ ಕೊರತೆ ಎದುರಾಗಿದೆ. ಚೀನಾ ಹಾಗೂ ರಷ್ಯಾ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಗಳ ಖರೀದಿ ಕುರಿತು ಭಾರತ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಸೋಂಕು ತಜ್ಞೆ ಹಾಗೂ ವೈದ್ಯಕೀಯ ಆಮ್ಲಜನಕ ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ನೇಮಕ ಸಮಿತಿ ಸದಸ್ಯೆ ಗಗನ್ ದೀಪ್ ಕಾಂಗ್ ಹೇಳಿದ್ದಾರೆ.

ಭಾರತೀಯ ಲಸಿಕಾ ಕಂಪನಿಗಳು ಉತ್ಪಾದನೆ ಆರಂಭಿಸುವವರೆಗೆ ಬೇರೆ ದೇಶಗಳಿಂದ ಲಸಿಕೆ ಖರೀದಿ ಮಾಡುವ ಕುರಿತು ಭಾರತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇಲ್ಲಿ ಕಂಪನಿಗಳು ಉತ್ಪಾದನೆ ಹೆಚ್ಚಿಸಿದ ಕೂಡಲೇ ಲಸಿಕಾ ಪ್ರಕ್ರಿಯೆಯೂ ಚುರುಕುಗೊಳ್ಳುತ್ತದೆ ಎಂದು ಹೇಳಿದ್ದಾರೆ.

ಲಸಿಕೆ ಕೊರತೆ: ದೇಶದಲ್ಲಿ ವ್ಯಾಕ್ಸಿನೇಷನ್‌ ವೇಗ ಶೇ 35 ಕ್ಕೆ ಕುಸಿತಲಸಿಕೆ ಕೊರತೆ: ದೇಶದಲ್ಲಿ ವ್ಯಾಕ್ಸಿನೇಷನ್‌ ವೇಗ ಶೇ 35 ಕ್ಕೆ ಕುಸಿತ

"ಜಾಗತಿಕವಾಗಿ ಕೊರೊನಾ ಲಸಿಕೆ ಕೊರತೆ ಇದ್ದು, ಈ ಸಮಯದಲ್ಲಿ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಸದ್ಯಕ್ಕೆ ಚೀನಾ ಹಾಗೂ ರಷ್ಯಾ ಲಸಿಕೆಗಳು ಮಾತ್ರ ಲಭ್ಯವಿವೆ. ಹೀಗಾಗಿ ಭಾರತೀಯ ಕಂಪನಿಗಳು ಲಸಿಕೆ ಉತ್ಪಾದನೆ ಹೆಚ್ಚಿಸುವವರೆಗೂ ಯಾವ ಲಸಿಕೆ ಖರೀದಿ ಮಾಡಬೇಕು ಎಂಬುದರ ಕುರಿತು ಆಲೋಚಿಸಬೇಕಿದೆ" ಎಂದು ತಿಳಿಸಿದ್ದಾರೆ.

Vaccination Rate Go Up As Companies Ramp Up Production Says Dr Gagandeep Kang

ಈ ಬೇಸಿಗೆಯಲ್ಲಿ ರಷ್ಯಾದ ಸ್ಫುಟ್ನಿಕ್ ವಿ ಲಸಿಕೆ ಉತ್ಪಾದನೆ ಆರಂಭಿಸಲಾಗುವುದು ಎಂದು ಸೋಮವಾರ ಭಾರತದ ಪೆನಾಷಿಯಾ ಬಯೋಟೆಕ್ ಹಾಗೂ ರಷ್ಯಾದ ಆರ್‌ಡಿಐಎಫ್ ಘೋಷಿಸಿವೆ. ಭಾರತದಲ್ಲಿ ವರ್ಷಕ್ಕೆ 850 ಮಿಲಿಯನ್ ಡೋಸ್‌ ಲಸಿಕೆಗಳ ಉತ್ಪಾದನೆ ಗುರಿ ಹೊಂದಿವೆ. ಚೀನಾದೊಂದಿಗೆ ಭಾರತ ಇದುವರೆಗೂ ಲಸಿಕೆ ಸಂಬಂಧ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ.

ಸಾಕಷ್ಟು ದಾಸ್ತಾನು ಇಲ್ಲದ ಕಾರಣ ಲಸಿಕಾ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ. ಆದರೆ ಕಂಪನಿಗಳು ಉತ್ಪಾದನೆ ಆರಂಭಿಸಿದ ತಕ್ಞಣ ಲಸಿಕಾ ಪ್ರಕ್ರಿಯೆಯೂ ವೇಗ ಪಡೆಯಲಿದೆ ಎಂದಿದ್ದಾರೆ.

ಕೊರೊನಾ ಲಸಿಕೆ ಕೊರತೆಯಿಂದಾಗಿ ಹಲವು ರಾಜ್ಯಗಳು ಲಸಿಕಾ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿವೆ. ಭಾರತದಲ್ಲಿ ಇದುವರೆಗೂ 196 ಮಿಲಿಯನ್ ಜನರಿಗೆ ಲಸಿಕೆ ನೀಡಲಾಗಿದೆ. 43.1 ಮಿಲಿಯನ್ ಜನರಿಗೆ ಎರಡೂ ಡೋಸ್‌ಗಳ ಲಸಿಕೆ ನೀಡಲಾಗಿದೆ.

English summary
Vaccination rates will go up in india as companies ramp up production, says Virologist and member of Supreme Court-appointed committee on allocation of medical oxygen Gagandeep Kang
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X