ಶೀಘ್ರದಲ್ಲೇ 2ನೇ ಹಂತದ ಲಸಿಕೆ ಕಾರ್ಯಕ್ರಮ; ಎಲ್ಲರಿಗೂ ಲಸಿಕೆ ಉಚಿತವಿಲ್ಲ
ನವದೆಹಲಿ, ಫೆಬ್ರವರಿ 22: ಕೊರೊನಾ ಸೋಂಕಿನ ವಿರುದ್ಧ ಭಾರತದಾದ್ಯಂತ ಜನವರಿ 16ರಿಂದ ಲಸಿಕಾ ಅಭಿಯಾನ ಆರಂಭಗೊಂಡಿದ್ದು, ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆಗಳನ್ನು ನೀಡಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರ ನಂತರ ಮುಂದಿನ ಹಂತದ ಕೊರೊನಾ ಲಸಿಕೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ.
ಈ ಹಂತದಲ್ಲಿ 50 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದ್ದು, 27 ಕೋಟಿ ಮಂದಿಗೆ ಲಸಿಕೆ ನೀಡುವ ಉದ್ದೇಶವಿದೆ. ಆದರೆ ಈ ಹಂತದಲ್ಲಿಯೂ ಎರಡು ವರ್ಗಗಳನ್ನು ಮಾಡಲಾಗಿದ್ದು, ಉಚಿತವಾಗಿ ಲಸಿಕೆ ಪಡೆಯುವವರು ಹಾಗೂ ಹಣ ನೀಡಿ ಲಸಿಕೆ ಪಡೆಯಬೇಕಾದವರು ಎಂದು ವರ್ಗೀಕರಣ ಮಾಡಲಾಗಿದೆ.
ಮಾರ್ಚ್ ಆರಂಭದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆಗಳನ್ನು ನೀಡಲು ಆರಂಭಿಸಲಾಗುತ್ತಿದ್ದು, ಅದರಲ್ಲಿಯೂ 60 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುತ್ತದೆ. ಜೊತೆಗೆ ಈ ಬಾರಿ ಯಾರಿಗೆ ಉಚಿತ ಲಸಿಕೆಗಳನ್ನು ನೀಡಬೇಕು ಹಾಗೂ ಯಾರು ಹಣ ನೀಡಿ ಲಸಿಕೆ ಪಡೆಯಬೇಕು ಎಂಬುದರ ಕುರಿತು ಇನ್ನು ಕೆಲವೇ ದಿನಗಳಲ್ಲಿ ಸರ್ಕಾರ ಅಂತಿಮ ವಿವರಗಳನ್ನು ನೀಡಲಿರುವುದಾಗಿ ತಿಳಿದುಬಂದಿದೆ.

ಈ ಎರಡನೇ ಹಂತದ ಲಸಿಕಾ ಕಾರ್ಯಕ್ರಮದಲ್ಲಿ ಒಂದು ರಾಜ್ಯದವರು ಬೇರೆ ರಾಜ್ಯದಲ್ಲಿಯೂ ಲಸಿಕೆ ಪಡೆದುಕೊಳ್ಳುವ ಅವಕಾಶವನ್ನು ಒದಗಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications