• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

WFH ಬದಲಿಗೆ ಬಂಪರ್: ಪರ್ವತಗಳ ಮೇಲೆ ಕುಳಿತು ಮಾಡಬಹುದು ಉದ್ಯೋಗ!

|

ಡೆಹ್ರಾಡೂನ್, ಅಕ್ಟೋಬರ್.06: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಕಾಣಿಸಿಕೊಂಡಾಗಿನಿಂದಲೂ ದೇಶಾದ್ಯಂತ ಬಹುತೇಕ ಕಂಪನಿಯ ಉದ್ಯೋಗಿಗಳು ಮನೆಯಲ್ಲಿದ್ದುಕೊಂಡೇ (ವರ್ಕ್ ಫ್ರಾಮ್ ಹೋಮ್) ಕಚೇರಿ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.

ಮನೆಗಳಿಂದ ಹೊರ ಬಾರಲಾಗದೇ ಪಂಜರದ ಗಿಣಿಗಳಂತೆ ಆಗಿರುವ ಉದ್ಯೋಗಿಗಳಿಗೋಸ್ಕರ ಸರ್ಕಾರವು ಬಂಪರ್ ಕೊಡುಗೆಯನ್ನೇ ಕೊಟ್ಟಿದೆ. ಉತ್ತರಾಖಂಡ್ ನಲ್ಲಿ ಉದ್ಯೋಗಿಗಳ ಮನೋಸ್ಥೈರ್ಯ ಹೆಚ್ಚಿಸುವುದರ ಜೊತೆಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತೆ ಯೋಜನೆಯನ್ನು ರೂಪಿಸಿದೆ. 'ವರ್ಕ್ ಫ್ರಾಮ್ ಮೌಂಟೇನ್'ಗೆ ಅಗತ್ಯವಿರುವ ಇಂಟರ್ ನೆಟ್, ಸುರಕ್ಷಿತ ಹೋಟೆಲ್, ರೆಸಾರ್ಟ್ ಮತ್ತು ಹೋಮ್ ಸ್ಟೇಗಳು, ಇದರ ಜೊತೆ ವಾಸಕ್ಕೆ ಯೋಗ್ಯವಾದ ಪವರ್ ಬ್ಯಾಂಕ್, ಪ್ರಾಥಮಿಕ ಚಿಕಿತ್ಸೆಗೆ ಯೋಗ್ಯವಾದ ವೈದ್ಯಕೀಯ ಸೌಲಭ್ಯ, ಆರೋಗ್ಯಕರ ಆಹಾರವನ್ನು ನೀಡುವ ಉದ್ದೇಶವನ್ನು ಹೊಂದಲಾಗಿದೆ.

ಕೊರೊನಾವೈರಸ್ ನಿಯಂತ್ರಣಕ್ಕೆ ಈ ನಿಯಮಗಳ ಪಾಲನೆ ಕಡ್ಡಾಯ

"ವರ್ಕ್ ಫ್ರಾಮ್ ಹೋಮ್" ಬದಲಿಗೆ "ವರ್ಕ್ ಫ್ರಾಮ್ ಮೌಂಟೇನ್" ಯೋಜನೆಯನ್ನು ಪರಿಚಯಿಸಲು ಉತ್ತರಾಖಂಡ್ ಸರ್ಕಾರವು ಮುಂದಾಗಿದೆ. ಪರ್ವತಗಳ ಮೇಲೆ ಕುಳಿತು ಕಾರ್ಯ ನಿರ್ವಹಿಸುವ ಯೋಜನೆ ಉದ್ದೇಶ ಮತ್ತು ಯೋಜನೆ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ ಇಲ್ಲಿದೆ ನೋಡಿ.

"ವರ್ಕ್ ಫ್ರಾಮ್ ಮೌಂಟೇನ್" ಜಾರಿಗೊಳಿಸಿದ್ದೇಕೆ?

ಮನೆಯಲ್ಲೇ ಕುಳಿತು ಕೆಲಸ ಮಾಡುವ ಮಾದರಿಯು ಉದ್ಯೋಗಿಗಳಿಗೆ ಬೇಸರವನ್ನು ತರಿಸಿದೆ. ಕುಟುಂಬದ ಜೊತೆಗಿದ್ದೀವಿ ಎನ್ನುವ ಭಾವನೆಯೊಂದನ್ನು ಹೊರತುಪಡಿಸಿದಂತೆ ಮನರಂಜನೆಗೆ ಅವಕಾಶವೇ ಇರಲಿಲ್ಲ. ಈ ಬಗ್ಗೆ ಅರಿತುಕೊಂಡ ಉತ್ತರಾಖಂಡ್ ಸರ್ಕಾರವು ವರ್ಕ್ ಪ್ರಾಮ್ ಹೋಮ್ ಉದ್ಯೋಗಿಗಳು ಮತ್ತು ಕುಟುಂಬಗಳಿಗೆ ಬಂಪರ್ ಕೊಡುಗೆ ನೀಡಿದೆ. ತಮಗಿಷ್ಟವಾದ ಸುಂದರ ವಾತಾವರಣದ ನಡುವೆ ಪ್ರಕೃತಿಯ ಮಡಿಲಿನಲ್ಲಿ ಕುಳಿತು ಕಾರ್ಯ ನಿರ್ವಹಿಸುವುದಕ್ಕೆ ಅಗತ್ಯವಿರುವ ಯೋಜನೆಯನ್ನು ಪರಿಚಯಿಸಿದೆ. ಮನಮೋಹಕ ಪ್ರಾಕೃತಿಕ ಸೌಂದರ್ಯದ ಮಧ್ಯ ರುಚಿ ರುಚಿಯಾದ ಆಹಾರ ಸವಿಯುವುದಕ್ಕೆ ಅವಕಾಶ ಕಲ್ಪಿಸಿ ಕೊಡಲಾಗುತ್ತಿದೆ.

"ವರ್ಕ್ ಫ್ರಾಮ್ ಮೌಂಟೇನ್" ಯೋಜನೆ ಅಡಿ ಪ್ರವಾಸಿ ತಾಣಗಳಲ್ಲಿ ಕುಳಿತು ಕಾರ್ಯ ನಿರ್ವಹಿಸುವ ಉದ್ಯೋಗಿಗಳು ತಮ್ಮ ಬಿಡುವಿನ ಸಂದರ್ಭದಲ್ಲಿ ಟ್ರಕ್ಕಿಂಗ್, ಬೈಕ್ ರೈಡಿಂಗ್, ಹಕ್ಕಿಗಳ ವೀಕ್ಷಣೆ, ಸುಂದರ ನಕ್ಷತ್ರಗಳ ಮಧ್ಯೆ ಸವಿನಿದ್ರೆಗೆ ಜಾರುವುದಕ್ಕೆ ಅಗತ್ಯವಿರುವ ಎಲ್ಲ ರೀತಿಯ ವ್ಯವಸ್ಥೆಗಳನ್ನು ಈ ಯೋಜನೆಯಿಂದ ಪಡೆದುಕೊಳ್ಳಬಹುದಾಗಿದೆ.

"ವರ್ಕ್ ಫ್ರಾಮ್ ಮೌಂಟೇನ್"ಗೆ ಹೇಳಿ ಮಾಡಿಸಿದ ತಾಣ

ಉತ್ತರಾಖಂಡ್ ನಲ್ಲಿ ವರ್ಕ್ ಫ್ರಾಮ್ ಮೌಂಟೇನ್ ಯೋಜನೆ ಜಾರಿಗೊಳಿಸುವುದಕ್ಕೂ ಮಹತ್ವದ ಕಾರಣವಿದೆ. ಭವ್ಯ ಪರ್ವತ ಶ್ರೇಣಿಗಳಿಂದ ಕೂಡಿದ ರಮಣೀಯ ತಾಣಗಳಿಗೆ ತೆರಳುವುದಕ್ಕೆ ಪ್ರವಾಸಿಗರಿಗೆ ಸಾಕಷ್ಟು ಅವಕಾಶಗಳಿವೆ. ಪ್ರಕೃತಿ ಮಡಿಲಿನಲ್ಲೇ ನಿರ್ಮಿಸಲಾದ ರಮಣೀಯ ಹೋಟೆಲ್, ರೆಸಾರ್ಟ್ ಮತ್ತು ಹೋಮ್ ಸ್ಟೇಗಳಿವೆ. ಪ್ರವಾಸಿಗರಿಗೆ ಜಿಮ್ ಕೊರ್ಬೆಟ್, ಲ್ಯಾನ್ಸ್ ಡೋನ್, ಮುಸ್ಸೂರಿಯಾ, ಕೌಸಾನಿ, ಡೆಹ್ರಾಡೂನ್, ನೈನಿತಲ್, ಅಲ್ಮೋರಾದಂತಾ ಸ್ಥಳಗಳ ಹೆಚ್ಚು ಉಪಯುಕ್ತವಾಗಲಿವೆ. ವರ್ಕ್ ಫ್ರಾಮ್ ಹೋಮ್ ನಿಂದ ಬೇಸರಗೊಂಡ ಉದ್ಯೋಗಿಗಳು ತಮ್ಮ ಕಾರ್ಯದ ಜೊತೆಗೆ ರಜೆಯ ಮಜಾವನ್ನು ಅನುಭವಿಸಲು ಇದೊಂದು ಉತ್ತಮ ಯೋಜನೆಯಾಗಿದೆ ಎಂದು ಉತ್ತರಾಖಂಡ್ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ದಿಲೀಪ್ ಜವಾಲ್ಕರ್ ತಿಳಿಸಿದ್ದಾರೆ.

ಕೊವಿಡ್-19 ಶಿಷ್ಟಾಚಾರ ಪಾಲಿಸುವುದು ಕಡ್ಡಾಯ

ಕೊವಿಡ್-19 ಶಿಷ್ಟಾಚಾರ ಪಾಲಿಸುವುದು ಕಡ್ಡಾಯ

ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕೆ ಅಗತ್ಯವಿರುವ ಸರ್ಕಾರದ ಮಾರ್ಗಸೂಚಿ ಮತ್ತು ಶಿಷ್ಟಾಚಾರಗಳನ್ನು ಪ್ರತಿಯೊಬ್ಬ ಪ್ರವಾಸಿಗರು ಪಾಲನೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಉತ್ತರಾಖಂಡ್ ಸರ್ಕಾರ ಈಗಾಗಲೇ ರಾಜ್ಯದೊಳಗಿನ ಸಂಚಾರಕ್ಕಿದ್ದ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿದೆ. ಉತ್ತರಾಖಂಡ್ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದ್ದಕ್ಕೆ ಕೊವಿಡ್-19 ನೆಗಟಿವ್ ರಿಪೋರ್ಟ್ ಅಗತ್ಯವಿಲ್ಲ. ಬದಲಿಗೆ ಸ್ಮಾರ್ಟ್ ಸಿಟಿ ಪೋರ್ಟಲ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರೆ ಸಾಕು.

ಪ್ರವಾಸೋದ್ಯಮದ ಪ್ರೋತ್ಸಾಹಕ್ಕೆ 3000 ವಿನಾಯಿತಿ

ಪ್ರವಾಸೋದ್ಯಮದ ಪ್ರೋತ್ಸಾಹಕ್ಕೆ 3000 ವಿನಾಯಿತಿ

ಉತ್ತರಾಖಂಡದ ಪ್ರವಾಸಿ ತಾಣಗಳಲ್ಲಿ ಕುಳಿತು ಕಾರ್ಯ ನಿರ್ವಹಿಸಲು ಬಯಸುವ ಉದ್ಯೋಗಿಗಳು ಮತ್ತು ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ "ಪ್ರವಾಸಿಗರ ಪ್ರೋತ್ಸಾಹಕ ಕೂಪನ್" ಯೋಜನೆಯನ್ನು ಕೂಡಾ ಜಾರಿಗೊಳಿಸಲಾಗಿದೆ. ಈ ಯೋಜನೆ ಅಡಿ ಹೋಟೆಲ್, ಹೋಮ್ ಸ್ಟೇ ಮತ್ತು ಕನಿಷ್ಠ 3 ದಿನಗಳ ಬುಕ್ಕಿಂಗ್ ಗೆ 3000 ರೂಪಾಯಿ ವಿನಾಯಿತಿ ನೀಡಲಾಗುತ್ತದೆ ಎಂದು ಉತ್ತರಾಖಂಡ್ ಸರ್ಕಾರವು ತಿಳಿಸಿದೆ.

English summary
Uttarakhand Tourism Plans To Give Employees To Work From Mountains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X