ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡದಲ್ಲಿ ಮಹಾಮಳೆ ಮರುಕಳಿಸುವ ಲಕ್ಷಣ

By Srinath
|
Google Oneindia Kannada News

Uttarakhand Kedarnath - Heavy rains lashed High alert issued
ನವದೆಹಲಿ, ಜೂನ್ 19: ಚಾರ್ ಧಾಮಗಳಲ್ಲಿ ಒಂದಾದ ಕೇದಾರನಾಥ ಕ್ಷೇತ್ರದಲ್ಲಿ ಕಳೆದ ವರ್ಷ ಭೀಕರವಾಗಿ ಕಾಡಿದ ಸುನಾಮಿ ಈ ಬಾರಿಯೂ ಮರುಕಳಿಸುವ ಸೂಚನೆಗಳು ಗೋಚರವಾಗುತ್ತಿವೆ.

ನಿನ್ನೆ ಬುಧವಾರದಿಂದ ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಭಾರೀ ಮಳೆಯಾಗ್ತಿದೆ. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ. ಉತ್ತರಕಾಶಿಯಲ್ಲಿಯೂ ಹೈ ಅಲರ್ಟ್​ ಘೋಷನೆಯಾಗಿದೆ. ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಕ್ಕೆ ಯುದ್ಧಸನ್ನದ್ಧವಾಗಿದ್ದು, 24x7 ಮಾದರಿ ಉಸ್ತುವಾರಿಯಲ್ಲಿ ನಿರತವಾಗಿದೆ. (ಕೇದಾರನಾಥ ದುರಂತ: ಅಂತ್ಯಕ್ರಿಯೆ ಕಾಣದ ಶವಗಳ ಪತ್ತೆ)

ಎರಡು ದಿನಗಳಿಂದಲೂ ಇಲ್ಲಿ ವರುಣನ ಆರ್ಭಟ ಇದೆ. ಭಾಗೀರತಿ ನದಿ ತುಂಬಿ ಹರಿಯುತ್ತಿದ್ದಾಳೆ. ಇನ್ನು 2 ಮೀಟರ್ ತುಂಬಿದರೆ (ಒಟ್ಟು ಎತ್ತರ 1102 ಮೀಟರ್) ಅಪಾಯದ ಮಟ್ಟ ಮೀರಲಿದೆ. ಹಾಗಾಗಿ ಈ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

2013ರ ಜೂನ್ ತಿಂಗಳಲ್ಲಿ ಮೇಘಸ್ಫೋಟವಾಗಿ ಉತ್ತರಾಖಂಡ ಪ್ರಳಯಸದೃಶವಾಗಿತ್ತು. ಸಾವಿರಾರು ಮಂದಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದರು. (ಈ ಬಾರಿ ವಿಚಿತ್ರ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ)

English summary
Uttarakhand Kedaranath - Heavy rains lashed High alert issued. "It has rained heavily in the district over the past two days and the Bhagirathi river is flowing just two meters down the danger mark at 1102 meters. So an alert has been sounded and authorities have been asked to keep a watch," said Uttarkashi District Magistrate Shridhar Babu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X