ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾರ್‌ಧಾಮ್ ಯಾತ್ರೆಗೆ ಅನುಮತಿ, ಆದರೆ ಈ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು

|
Google Oneindia Kannada News

ನೈನಿತಾಲ್, ಸೆಪ್ಟೆಂಬರ್ 17: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಉತ್ತರಾಖಂಡದ ಚಾರ್‌ಧಾಮ್ ಯಾತ್ರೆ ಮೇಲಿನ ನಿರ್ಬಂಧವನ್ನು ನೈನಿತಾಲ್ ಹೈಕೋರ್ಟ್ ತೆರವುಗೊಳಿಸಿದೆ. ಹಾಗೆಯೇ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ತಿಳಿಸಲಾಗಿದೆ.

ಉತ್ತರಾಖಂಡ ಹೈಕೋರ್ಟ್ ಗುರುವಾರ ಚಾರ್ಧಾಮ್ ಯಾತ್ರೆಯ ಮೇಲಿನ ತನ್ನ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದು, ಕೋವಿಡ್ -19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಯಾತ್ರೆ ನಡೆಸಬಹುದು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

 ಕೋವಿಡ್ 19 ಭೀತಿ ನಡುವೆ ಚಾರ್ ಧಾಮ್ ಯಾತ್ರೆ, ಹೈಕೋರ್ಟ್ ಕಳವಳ ಕೋವಿಡ್ 19 ಭೀತಿ ನಡುವೆ ಚಾರ್ ಧಾಮ್ ಯಾತ್ರೆ, ಹೈಕೋರ್ಟ್ ಕಳವಳ

ಚಾರ್‌ಧಾಮ್‌ ಯಾತ್ರೆಗೆ ಅವಕಾಶ ನೀಡಿದ್ದ ರಾಜ್ಯ ಸಚಿವ ಸಂಪುಟ ತೀರ್ಮಾನಕ್ಕೆ ಜು.28ರಂದು ಹೈಕೋರ್ಟ್‌ ತಡೆ ನೀಡಿತ್ತು. ಯಾತ್ರೆಯ ಮೇಲಿನ ನಿಷೇಧವನ್ನು ತೆರವುಗೊಳಿಸಿದ ಮುಖ್ಯ ನ್ಯಾಯಮೂರ್ತಿ ಆರ್ ಎಸ್ ಚೌಹಾಣ್ ಮತ್ತು ನ್ಯಾಯಮೂರ್ತಿ ಅಲೋಕ್ ಕುಮಾರ್ ವರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠ, ದೇವಾಲಯಗಳಿಗೆ ಭೇಟಿ ನೀಡುವ ದೈನಂದಿನ ಭಕ್ತರ ಸಂಖ್ಯೆಗೆ ಮಿತಿ ಇರಬೇಕು ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಹೇಳಿದೆ.

Uttarakhand High Court Allows Char Dham Yatra, What Are The Covid Guidelines

*ಯಾತ್ರೆಗೆ ಬರುವ ಭಕ್ತರು ಕೋವಿಡ್ ನೆಗಟಿವ್ ವರದಿ ಮತ್ತು ಎರಡೂ ಡೋಸ್ ಲಸಿಕೆ ಪಡೆದ ಪ್ರಮಾಣಪತ್ರ ಹೊಂದುವುದು ಕಡ್ಡಾಯ ಎಂದು ನ್ಯಾಯಾಲಯ ಹೇಳಿದೆ.
ಚಾರ್​ಧಾಮ್​ ಯಾತ್ರೆ ಯಾತ್ರಾರ್ಥಿಗಳಿಗೆ ಎಷ್ಟು ಮುಖ್ಯವೋ, ಹಾಗೇ, ಅದನ್ನು ನೆಚ್ಚಿಕೊಂಡು ಬದುಕು ಸಾಗಿಸುವವರೂ ಅನೇಕರು ಇದ್ದಾರೆ.

ಈ ಕಾರಣಕ್ಕಾಗಿ ಯಾತ್ರೆಯನ್ನು ಅನುಮತಿಸಬೇಕು ಎಂದು ಮನವಿ ಮಾಡಿತ್ತು. ಸದ್ಯ ಉತ್ತರಾಖಂಡ್​ನಲ್ಲಿ 296 ಮಾತ್ರ ಕೊವಿಡ್​ ಸಕ್ರಿಯ ಪ್ರಕರಣಗಳಿವೆ. ಪರಿಸ್ಥಿತಿಗಳನ್ನು ಪರಿಶೀಲಿಸಿದ ನಂತರ ಉತ್ತರಾಖಂಡ್ ಹೈಕೋರ್ಟ್ ಇದೀಗ ಯಾತ್ರೆಗೆ ಅನುಮತಿ ನೀಡಿದೆ.

ಮೇ.14ರಿಂದ ಆರಂಭವಾಗಬೇಕಿದ್ದ ಚಾರ್ ಧಾಮ್ ಯಾತ್ರೆಯನ್ನು ಈ ಮುಂಚೆ ಕೋವಿಡ್ ಕಾರಣಕ್ಕಾಗಿ ರದ್ದುಗೊಳಿಸಲಾಗಿತ್ತು. ಆದರೆ, ರುದ್ರಪ್ರಯಾಗ ಜಿಲ್ಲೆಯಲ್ಲಿ ಕೇದಾರನಾಥ ದೇಗುಲ, ಚಮೋಲಿಯಲ್ಲಿ ಬದ್ರಿನಾಥ್ ಹಾಗೂ ಉತ್ತರಕಾಶಿಯಲ್ಲಿನ ಯಮುನೋತ್ರಿ, ಗಂಗೋತ್ರಿ ದೇಗುಲಗಳಿಗೆ ತೆರಳಲು ಸರ್ಕಾರ ಅನುಮತಿ ನೀಡಿದೆ

ಕೊವಿಡ್​ 19 ಮೂರನೇ ಅಲೆ ಶುರುವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಚಾರ್​ಧಾಮ್​ ಯಾತ್ರೆಗೆ ಅವಕಾಶ ನೀಡಲು ಉತ್ತರಾಖಂಡ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು. ವಿಜ್ಞಾನಿಗಳ ಸಮುದಾಯ ನೀಡಿದ ಎಚ್ಚರಿಕೆ ಅನ್ವಯ ತನ್ನ ತೀರ್ಪು ಪ್ರಕಟಿಸಿತ್ತು. ಅವಕಾಶ ಕೊಡಲು ಸರ್ಕಾರ ಮುಂದಾಗಿದ್ದರೂ ಅವಕಾಶ ನೀಡುವುದಿಲ್ಲ ಎಂದು ಹೇಳಿತ್ತು. ಇದೀಗ ಮತ್ತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಉತ್ತರಾಖಂಡ್​ ಸರ್ಕಾರ, ಕೊವಿಡ್​ 19 ಪರಿಸ್ಥಿತಿ ಇದೀಗ ಸುಧಾರಿಸಿದೆ.

*ಚಾರ್‌ಧಾಮ್ ಎಂದು ಕರೆಯಲ್ಪಡುವ ಪ್ರಸಿದ್ಧ ಹಿಮಾಲಯನ್ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ದೈನಂದಿನ ಸಂಖ್ಯೆಗೆ ಮಿತಿ ವಿಧಿಸಿರುವ ಹೈಕೋರ್ಟ್ ಕೇದಾರನಾಥ ಧಾಮದಲ್ಲಿ 800, ಬದರಿನಾಥ ಧಾಮದಲ್ಲಿ 1200, ಗಂಗೋತ್ರಿಯಲ್ಲಿ 600 ಮತ್ತು ಯಮುನೋತ್ರಿಯಲ್ಲಿ 400 ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದೆ.

*ಈ ಧಾರ್ಮಿಕ ಸ್ಥಳಗಳಿಗೆ ತೆರಳುವ ಪ್ರಯಾಣಿಕರು ಸಂಪೂರ್ಣ ಲಸಿಕೆ ತೆಗೆದುಕೊಂಡಿರುವ ಪ್ರಮಾಣಪತ್ರವನ್ನು ಕೂಡ ಹೊಂದಿರಬೇಕು
*ಚಮೋಲಿ, ರುದ್ರಪ್ರಯಾಗ್, ಉತ್ತರಕಾಶಿ ಜಿಲ್ಲೆಗಳಲ್ಲಿ ಪೊಲೀಸರ ಕಣ್ಗಾವಲು ಇರಲಿದೆ.

*ಯಾತ್ರಾರ್ಥಿಗಳು ದೇವಾಲಯಗಳ ಸುತ್ತಲಿನ ಯಾವುದೇ ಕೊಳದಲ್ಲಿ ಸ್ನಾನ ಮಾಡಲು ಅನುಮತಿಸಲಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಚಾರ್‌ಧಾಮ್‌ ಯಾತ್ರೆಗೆ ಷರತ್ತುಬದ್ಧ ಅನುಮತಿ ನೀಡಿ ಉತ್ತರಾಖಂಡ ಹೈಕೋರ್ಟ್‌ ಗುರುವಾರ ಆದೇಶ ಹೊರಡಿಸಿದೆ.

English summary
The Uttarakhand High Court on Thursday lifted its stay on the Char Dham Yatra, allowing the state government to hold the pilgrimage under a strict Covid-19 protocol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X