ಕ್ರಿಕೆಟಿಗ ರಿಷಬ್ ಪಂತ್ ರಕ್ಷಿಸಿದ ಬಸ್ ಸಿಬ್ಬಂದಿಗೆ ಸರ್ಕಾರಿ ಸನ್ಮಾನ

ಡೆಹರಾಡೂನ್‌, ಜನವರಿ 1: ಇತ್ತೀಚೆಗೆ ರಸ್ತೆ ಅಪಘಾತಕ್ಕೀಡಾದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಅವರ ಜೀವ ಉಳಿಸಿದ ಹರಿಯಾಣ ರೋಡ್‌ವೇಸ್‌ನ ಚಾಲಕ ಮತ್ತು ನಿರ್ವಾಹಕರನ್ನು ಗಣರಾಜ್ಯೋತ್ಸವದಂದು ತಮ್ಮ ಸರ್ಕಾರ ಗೌರವಿಸಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭಾನುವಾರ ಘೋಷಿಸಿದ್ದಾರೆ.

ಈ ವೇಳೆ ಮಾತನಾಡಿದ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ, ಜನವರಿ 26ರಂದು ಕ್ರಿಕೆಟಿಗ ರಿಷಬ್ ಪಂತ್ ಅವರ ಜೀವವನ್ನು ಉಳಿಸಿದ ಹರಿಯಾಣ ರೋಡ್‌ವೇಸ್‌ನ ಚಾಲಕ ಮತ್ತು ನಿರ್ವಾಹಕರನ್ನು ಉತ್ತರಾಖಂಡ ಸರ್ಕಾರ ಗೌರವಿಸುತ್ತದೆ ಎಂದು ಹೇಳಿದರು.

ರಿಷಬ್ ಪಂತ್ ಅವರ ಜೀವ ಉಳಿಸಲು ಚಾಲಕ ಮತ್ತು ನಿರ್ವಾಹಕರು ತಮ್ಮ ಮಾನವೀಯ ಗುಣದಿಂದ ಬದುಕಿಸುವ ಪ್ರಯತ್ನ ಮಾಡಿದರು. ಅಪಘಾತವಾದಾಗ ಕ್ರಿಕೆಟಿಗನ ಕಾರು ಅವರ ಕಣ್ಣುಗಳ ಮುಂದೆಯೇ ಒಂದೆರಡು ಬಾರಿ ಉರುಳಿತು (ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ನಂತರ). ತುರ್ತು ಪರಿಸ್ಥಿತಿಯನ್ನು ನಿಭಾಯಿಸಿದ ಹರಿಯಾಣ ರೋಡ್‌ವೇಸ್ ಸಿಬ್ಬಂದಿ ತಮ್ಮ ಮಾನವೀಯ ಗುಣ ಮೆರೆದರು.

Uttarakhand government honors the bus driver who saved cricketer Rishabh Pant

ರಿಷಬ್ ಪಂತ್ ಈಗ ಉತ್ತರಾಖಂಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸೆಂಬರ್ 30ರಂದು ಮುಂಜಾನೆ 5.30 ರ ಸುಮಾರಿಗೆ ರಿಷ್ಯಬ್‌ ಪಂತ್ ದೆಹಲಿಯಿಂದ ರೂರ್ಕಿಗೆ ತನ್ನ ತಾಯಿ ನೋಡಲು ಬರುತ್ತಿದ್ದಾಗ ಗಂಭೀರ ಅಪಘಾತಕ್ಕೆ ಒಳಗಾದರು. ಅವರ ಕಾರು ಶುಕ್ರವಾರ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು.

25 ವರ್ಷದ ಯುವಕ ರಿಷಬ್ ಪಂತ್ ಕಾರಿನಲ್ಲಿ ಒಬ್ಬಂಟಿಯಾಗಿದ್ದು, ಆತನ ಬೆನ್ನು, ಹಣೆ ಮತ್ತು ಕಾಲಿಗೆ ಗಾಯಗಳಾದವು. ಅವರ ಕಾರು ಸುಟ್ಟು ಹೋಗಿತು ಮತ್ತು ಅಪಘಾತಕ್ಕೆ ಒಳಗಾದಾಗ ಪಂತ್ ಕಾರಿನ ಚಕ್ರದ ಬಳಿ ಸಿಲುಕಿಕೊಂಡಿದ್ದರು. ಪಂತ್ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹರಿದ್ವಾರ ಎಸ್‌ಪಿ (ಗ್ರಾಮೀಣ) ಸ್ವಪನ್ ಕಿಶೋರ್ ಶುಕ್ರವಾರ ತಿಳಿಸಿದ್ದಾರೆ.

ಕ್ರಿಕೆಟಿಗ ಪಂತ್‌ ಚಾಲಕ ಸಿಬ್ಬಂದಿಯ ನೆರವಿನಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿರುವ ಇತರ ಸುಟ್ಟಗಾಯಗಳಾಗಿದೆ. ಪುಣ್ಯಕ್ಕೆ ಪಂತ್ ಮಾರಣಾಂತಿಕ ಅಪಘಾತದಿಂದ ಪಾರಾಗಿದ್ದಾರೆ. ಅಗತ್ಯವಿದ್ದರೆ ಅವರನ್ನು ದೆಹಲಿಗೆ ವಿಮಾನದಲ್ಲಿ ಸಾಗಿಸಬಹುದು ಎಂದು ಡಿಡಿಸಿಎ ಅಧಿಕಾರಿ ತಿಳಿಸಿದ್ದಾರೆ.

Uttarakhand government honors the bus driver who saved cricketer Rishabh Pant

ಬಸ್ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ಪರಂಜೀತ್ ಅವರು ಗುರುಕುಲ ನರ್ಸನ್ ಬಳಿ ಡಿವೈಡರ್ ಮೇಲೆ ಪಂತ್ ಅವರ ಕಾರ್ ಅನ್ನು ಗುರುತಿಸಿದರು. ಅವರು ಅಪಘಾತವಾದಾಗ ಸಹಾಯ ಮಾಡಲು ಕಾರಿನ ಕಡೆಗೆ ಓಡಿ ನೆರವಾದರು ಎಂದು ಪಾಣಿಪತ್ ಬಸ್ ಡಿಪೋ ಜನರಲ್ ಮ್ಯಾನೇಜರ್ ಕೆ ಜಾಂಗ್ರಾ ಅವರು ಡಿಸೆಂಬರ್ 30 ರಂದು ಮಾನವೀಯತೆಯ ಸೇವೆಗಾಗಿ ಹರ್ಯಾಣ ಸರ್ಕಾರ ಅವರನ್ನು ಗೌರವಿಸಿದ ನಂತರ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+