ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರೆಬರೆ ಹರಿದ ಜೀನ್ಸ್‌ ತೊಟ್ಟ ಮಹಿಳೆ ಏನು ಸಂದೇಶ ನೀಡಬಲ್ಲಳು?; ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆ

|
Google Oneindia Kannada News

ಉತ್ತರಾಖಂಡ, ಮಾರ್ಚ್ 17: "ಅರೆಬರೆ ಹರಿದ ಜೀನ್ಸ್ ತೊಟ್ಟ ಮಹಿಳೆಯೊಬ್ಬರು ಎನ್‌ಜಿಒ ನಡೆಸುವುದನ್ನು ನೋಡಿ ನನಗೆ ಶಾಕ್ ಆಯಿತು. ಆಕೆ ಸಮಾಜಕ್ಕೆ, ಮಕ್ಕಳಿಗೆ ಯಾವ ರೀತಿ ಸಂದೇಶ ನೀಡಬಲ್ಲಳು ಎಂಬ ಕುರಿತು ಚಿಂತೆಯಾಗುತ್ತಿದೆ" ಎಂದು ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಡೆಹ್ರಾಡೂನ್‌ನಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಉತ್ತರಾಖಂಡ ಆಯೋಗ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ರಾವತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕೆಲವೇ ದಿನಗಳ ಹಿಂದೆ ಸಿಎಂ ಆಗಿ ಆಯ್ಕೆಯಾಗಿರುವ ತೀರಥ್ ರಾವತ್ ಅವರು ಮಹಿಳೆಯ ಕುರಿತು ಈ ರೀತಿ ಹೇಳಿಕೆ ನೀಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಯುವ ಕಾಂಗ್ರೆಸ್ ಮುಖಂಡ ಸಂಜಯ್ ಜಾ ಈ ಹೇಳಿಕೆ ಟೀಕಿಸಿದ್ದಾರೆ. ಮುಂದೆ ಓದಿ...

"ನಮ್ಮ ಮಕ್ಕಳಿಗೆ ಯಾವ ರೀತಿ ಸಂದೇಶ ನೀಡುತ್ತಿದ್ದೇವೆ"

ಅರೆಬರೆ ಹರಿದ ಜೀನ್ಸ್ ತೊಟ್ಟ ಮಹಿಳೆಯೊಬ್ಬರು ಸ್ವಯಂ ಸೇವಕ ಸಂಘ ನಡೆಸುತ್ತಿರುವುದನ್ನು ನೋಡಿ ನನಗೆ ಶಾಕ್ ಆಯಿತು. ಈಕೆ ಸಮಾಜಕ್ಕೆ ಯಾವ ರೀತಿಯ ಉದಾಹರಣೆಯಾಗಬಲ್ಲಳು ಎಂಬ ಆತಂಕ ಉಂಟಾಯಿತು. ಈ ರೀತಿಯ ಮಹಿಳೆಯರು ಸಮಾಜದಲ್ಲಿ ಹಲವು ಜನರನ್ನು ಭೇಟಿ ಆಗಿ, ಅವರ ಸಮಸ್ಯೆಗಳನ್ನು ಬಗೆಹರಿಸಲು ಹೋಗುತ್ತಾರೆ ಎಂದರೆ ನಮ್ಮ ಸಮಾಜಕ್ಕೆ, ನಮ್ಮ ಮಕ್ಕಳಿಗೆ ಯಾವ ರೀತಿಯ ಸಂದೇಶ ನೀಡುತ್ತಿದ್ದೇವೆ ಎಂಬ ಕುರಿತು ನಾವು ಯೋಚಿಸಬೇಕಿದೆ. ನಾವು ಏನನ್ನು ಮಾಡುತ್ತೇವೋ ಅದನ್ನೇ ನಮ್ಮ ಮಕ್ಕಳು ಅನುಸರಿಸುತ್ತಾರಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮಕ್ಕಳನ್ನು ಹೆರುವುದು ನೀವು, ಖರ್ಚನ್ನೇಕೆ ಸರ್ಕಾರ ಭರಿಸಬೇಕು?; ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆಮಕ್ಕಳನ್ನು ಹೆರುವುದು ನೀವು, ಖರ್ಚನ್ನೇಕೆ ಸರ್ಕಾರ ಭರಿಸಬೇಕು?; ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

"ನಮ್ಮ ಸಂಸ್ಕೃತಿ ಕತ್ತರಿ ನಡುವೆ ಸಿಲುಕಿದೆ"

ಮನೆಯಲ್ಲಿ ಉತ್ತಮ ಸಂಸ್ಕೃತಿ ಕಲಿತ ಮಕ್ಕಳು, ತಾವು ಎಷ್ಟೇ ಆಧುನಿಕವಾದರೂ ತಮ್ಮ ಜೀವನದಲ್ಲಿ ಸೋಲುವುದಿಲ್ಲ. ಆದರೆ ಮನೆಯಲ್ಲಿಯೇ ಮಕ್ಕಳಿಗೆ ಸಂಸ್ಕೃತಿ ಕಲಿಸದೇ ಇದ್ದರೆ ಮುಂದಿನ ಕಥೆಯೇನು? ಈಗ ಮಕ್ಕಳು ಕೂಡ ಮೊಣಕಾಲುಗಳನ್ನು ತೋರುವ ಬಟ್ಟೆಗಳನ್ನು ತೊಡುತ್ತಿದ್ದಾರೆ. ಪಾಶ್ಚಿಮಾತ್ಯರು ಭಾರತವನ್ನು ನೋಡಿ ತಮ್ಮ ದೇಹ ಮುಚ್ಚಿಕೊಳ್ಳುವುದನ್ನು ಕಲಿಯುತ್ತಿದ್ದರೆ, ಇಲ್ಲಿನವರು ನಗ್ನತೆಯನ್ನು ಕಲಿತುಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

ಮೊಣಕಾಲು ಕಾಣುವಂಥ ಬಟ್ಟೆ ತೊಡುವುದು, ಹರಿದ ಜೀನ್ಸ್ ಧರಿಸುವುದು-ಇವೆಲ್ಲವನ್ನು ಶ್ರೀಮಂತಿಕೆ ಎಂಬಂತೆ ತೋರಿಸಿ ಇಂಥವನ್ನೇ ಮೌಲ್ಯವೆಂದು ಬಿಂಬಿಸಲಾಗುತ್ತಿದೆ. ನಮ್ಮ ಸಂಸ್ಕೃತಿ ಕತ್ತರಿ ನಡುವೆ ಸಿಲುಕಿದೆ. ಇವೆಲ್ಲವೂ ಬರುತ್ತಿರುವುದು ಎಲ್ಲಿಂದ? ಮನೆಯಿಂದಲೇ? ಅಥವಾ ಇದು ನಮ್ಮ ಶಾಲೆ, ಶಿಕ್ಷಕರ ದೋಷವೇ? ನಮ್ಮ ಮಕ್ಕಳನ್ನು ನಾವು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇವೆ? ಇದೆಲ್ಲಾ ಒಳ್ಳೆಯದೇ ಎಂದು ಪ್ರಶ್ನಿಸಿದ್ದಾರೆ.

"ಮಕ್ಕಳು, ಕುಟುಂಬ ಮಹಿಳೆಯರ ಆದ್ಯತೆಯಾಗಿರಬೇಕು"

ಗಣೇಶ್ ಜೋಶಿ ಎಂಬ ನೂತನ ಸಚಿವ ಕೂಡ ಸಿಎಂ ಮಾತಿಗೆ ದನಿಗೂಡಿಸಿದ್ದು, ತಮ್ಮ ಮಕ್ಕಳನ್ನು ಉತ್ತಮ ರೀತಿ ಬೆಳೆಸಲು ಮಹಿಳೆಯರು ಆದ್ಯತೆ ನೀಡಬೇಕು. ಮಹಿಳೆಯರು ತಮಗೆ ಜೀವನದಲ್ಲಿ ಏನೆಲ್ಲಾ ಬೇಕು ಎಂಬುದರ ಕುರಿತು ಮಾತನಾಡುತ್ತಾರೆ. ಆದರೆ ತಮ್ಮ ಕುಟುಂಬ ಹಾಗೂ ಮಕ್ಕಳೆಡೆಗೆ ಗಮನ ನೀಡುವ ಬಹುಮುಖ್ಯ ಸಂಗತಿಯನ್ನೇ ಮರೆಯುತ್ತಾರೆ ಎಂದು ಹೇಳಿದ್ದಾರೆ.

ಅಧಿಕಾರಿಗಳು ಮಾತು ಕೇಳಿಲ್ಲವೆಂದರೆ ಬಾರುಕೋಲಿನಿಂದ ಬಾರಿಸಿ; ಬಿಜೆಪಿ ನಾಯಕನ ಹೇಳಿಕೆಅಧಿಕಾರಿಗಳು ಮಾತು ಕೇಳಿಲ್ಲವೆಂದರೆ ಬಾರುಕೋಲಿನಿಂದ ಬಾರಿಸಿ; ಬಿಜೆಪಿ ನಾಯಕನ ಹೇಳಿಕೆ

Recommended Video

Modi's best 3 advise to avoid covid 19 | Oneindia Kannada

ಸಿಎಂ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ಮುಖಂಡನ ಟೀಕೆ

ಸಿಎಂ ತೀರಥ್ ಸಿಂಗ್ ರಾವತ್ ಹೀಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಂತೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಮುಖಂಡ ಸಂಜಯ್ ಜಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹರಿದ ಜೀನ್ಸ್ ತೊಡುವುದರಿಂದ ನಮ್ಮ ಸಂಸ್ಕೃತಿ ನಾಶವಾಗುತ್ತದೆ ಎಂದು ಉತ್ತರಾಖಂಡ ಸಿಎಂ ಹೇಳಿಕೆ ನೀಡಿದ್ದಾರೆ. ಪ್ರಿಯ ಬಿಜೆಪಿ, ಇವರು ನಿಮ್ಮ ಮುಖ್ಯಮಂತ್ರಿ. ಇದನ್ನು ಬಿಜೆಪಿ ಒಪ್ಪುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ. ಇದು ಸಿಎಂ ಮಾನಸಿಕತೆಯೇ? ಈ ಆಧುನಿಕ ಭಾರತದಲ್ಲಿ ನಾವು ಎಲ್ಲಿಗೆ ಸಾಗುತ್ತಿದ್ದೇವೆ" ಎಂದು ಕೇಳಿದ್ದಾರೆ.

English summary
Uttarakhand CM Tirath Singh Rawat statement on woman wearing ripped jeans create controversy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X