ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ: ವರ್ಗಾವಣೆ ಕೇಳಿದ್ದಕ್ಕೆ ಶಿಕ್ಷಕಿ ಬಂಧನ, ಅಮಾನತು!

|
Google Oneindia Kannada News

ಡೆಹ್ರಾಡೂನ್, ಜೂನ್ 29: ಜನತಾ ದರ್ಬಾರ್ ಕಾರ್ಯಕ್ರಮದ ವೇಳೆ ತನ್ನ ವರ್ಗಾವಣೆಯನ್ನು ವಿರೋಧಿಸಿದಕ್ಕೆ ಶಿಕ್ಷಕಿಯೊಬ್ಬರನ್ನು ಬಂಧಿಸುವಂತೆ ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ಸೂಚನೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.

ಕುಗ್ರಾಮವೊಂದರಲ್ಲಿ ಕೆಲಸ ಮಾಡುತ್ತಿರುವ ತಮ್ಮನ್ನು ಬೇರೆಡೆ ವರ್ಗಾಯಿಸುವಂತೆ ಕೇಳಲು ಬಂದಿದ್ದ ಶಿಕ್ಷಕಿ, ಅವಾಚ್ಯ ಪದಗಳನ್ನು ಬಳಸಿದರು ಮತ್ತು ಅಶಿಸ್ತಿನಿಂದ ವರ್ತಿಸಿದರು ಎಂದು ಆರೋಪಿಸಿ ಅವರ ಅಮಾನತಿಗೂ ರಾವತ್ ಆದೇಶಿಸಿದ್ದಾರೆ.

ಚುನಾವಣೆ ಸಮಯದಲ್ಲಿ ಎಫ್‌ಬಿ ಜಾಹಿರಾತಿಗೂ ಬ್ರೇಕ್‌ ಹಾಕಲು ಚಿಂತನೆ ಚುನಾವಣೆ ಸಮಯದಲ್ಲಿ ಎಫ್‌ಬಿ ಜಾಹಿರಾತಿಗೂ ಬ್ರೇಕ್‌ ಹಾಕಲು ಚಿಂತನೆ

ಉತ್ತರ ಬಹುಗುಣ ಎಂಬ ಶಿಕ್ಷಕಿ ತಮ್ಮನ್ನು 25 ವರ್ಷಗಳಿಂದ ಕುಗ್ರಾಮಗಳಿಗೆ ನಿಯೋಜಿಸಲಾಗುತ್ತಿದೆ ಎಂದು ಆರೋಪಿಸಿದ್ದರು.

ಈ ಘಟನೆಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದು, ಶಿಕ್ಷಕಿಯ ಮನವಿಯನ್ನು ರಾವತ್ ತಿರಸ್ಕರಿಸಿದಾಗ ಆಕೆ ಅವರ ಜತೆ ವಾದ ಮಾಡುವುದು ಕಂಡುಬಂದಿದೆ.

uttarakhand cm orders arrest. suspension of teacher on seeking transfer

ಇದರಿಂದ ತಾಳ್ಮೆ ಕಳೆದುಕೊಂಡ ರಾವತ್, 'ಅವರನ್ನು ಕೂಡಲೇ ಅಮಾನತುಮಾಡಿ. ಪೊಲೀಸ್ ವಶಕ್ಕೆ ತೆಗೆದುಕೊಳ್ಳಿ' ಎಂದು ಸೂಚಿಸಿದರು.

ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಉತ್ತರ ಅವರನ್ನು ಸಂಜೆ ವೇಳೆ ಬಿಡುಗಡೆ ಮಾಡಲಾಯಿತು ಎನ್ನಲಾಗಿದೆ.

ಈ ಘಟನೆಯನ್ನು ಖಂಡಿಸಿರುವ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಶಿಕ್ಷಕಿಯ ಅಮಾನತನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಮ್ಮ ವ್ಯವಸ್ಥೆ ಎಷ್ಟ ಅಸೂಕ್ಷ್ಮವಾಗಿದೆ ಎಂದರೆ ವಿಧವೆ ಶಿಕ್ಷಕಿಯೊಬ್ಬರು 25 ವರ್ಷಗಳಿಂದ ಯಾವುದೋ ಕುಗ್ರಾಮದಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ನೋವನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ' ಎಂದು ಹರೀಶ್ ರಾವತ್ ಹೇಳಿದ್ದಾರೆ.

English summary
Controversy over Uttarakhand chief minister Trivendra Rawat after he directed the police to arrest a school teacher who was seeking transfer from a remote village during Janata Darbar session
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X