Uttarakhand blizzard: ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ ಸಾವು
ಕಾರವಾರ: ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯದಿಂದ ಈಗಾಗಲೇ ಚಾರಣಕ್ಕೆ ತರೆಳಿದ್ದ ಕರ್ನಾಟಕದ ಬೆಂಗಳೂರಿನ ನಾಲ್ವರು ಸಾವನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಇನ್ನುಳಿದವರಿಗಗಾಗಿ ಶೋಧಕಾರ್ಯ ಮುಂದುವರೆದಿತ್ತು.
ಇದೀಗ ಹಿಮಪಾತದಿಂದ ನಾಪತ್ತೆಯಾಗಿದ್ದ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇವರ ಮೂಲ ಯಾವುದು ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಹಿಮಪಾತದಿಂದ ನಾಪತ್ತೆಯಾಗಿದ್ದ ಚಾರಣಿಗರಲ್ಲಿ ಶಿರಸಿ ತಾಲೂಕಿನ ಜಾಗನಹಳ್ಳಿಯ ಯುವತಿ ಪದ್ಮಿನಿ ಸಹ ಇದ್ದು, ಅವರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಟ್ರೆಕ್ಕಿಂಗ್ ಗೈಡ್‌ಗಳಾಗಿ ಉತ್ತರ ಕಾಶಿಯ ಮೂವರು ನಿವಾಸಿಗಳ ಜೊತೆ ಬೆಂಗಳೂರಿನಿಂದ 18 ಜನ ಮತ್ತು ಪುಣೆಯಿಂದ ಒಬ್ಬರ ಜೊತೆ ತೆರಳಿದ್ದು, ಜೊತೆಗೆ ಜಾಗನಹಳ್ಳಿ ಮೂಲದ ಬೆಂಗಳೂರು ನಿವಾಸಿ, ಗೂಗಲ್ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದ ಪದ್ಮಿನಿ ಹೆಗಡೆ (35) ಅವರು ಓರ್ವರಾಗಿದ್ದರು.
ಪದ್ಮಿನಿ ಹೆಗಡೆ ಅವರು ಕೆಲವು ವರ್ಷಗಳಿಂದ ಚಾರಣದಲ್ಲಿ ಆಸಕ್ತಿ ಹೊಂದಿರುವವರಾಗಿದ್ದರು ಎನ್ನಲಾಗಿದೆ. ಮೇ 29ರಿಂದ ಜೂನ್ 7ರವರೆಗೆ ಭಟವಾಡಿ ಮಲ್ಲಾ-ಸಿಲ್ಲಾ ಕುಶಕಲ್ಯಾಣ ಸಹಸ್ರತಾಲ್ ಟ್ರೆಕ್ಕಿಂಗ್‌ಗೆ ಅನುಮತಿ ಪಡೆದ ತಂಡದೊಂದಿಗೆ ಪದ್ಮಿನಿ ಅವರು ಹೊಂದಿದ್ದರು.
ಜೂನ್ 4ರಂದು ಮಧ್ಯಾಹ್ನದ ವೇಳೆಗೆ ಹವಾಮಾನದಲ್ಲಿ ಏರುಪೇರಾಗಿತ್ತು ಎನ್ನುವುದಾಗಿ ಪದ್ಮಿನಿ ಅವರು ತಮ್ಮ ತಾಯಿಗೆ ಸಂದೇಶ ಹಾಕಿದ್ದು, ಅವರು ನಾಪತ್ತೆ ಆಗಿದ್ದಾರೆ ಎನ್ನುವ ಮಾಹಿತಿ ಇದೆ. ಅವರಿಗೆ ಯಾವುದೇ ಅವಘಡ ಆಗಿದೆ ಎನ್ನುವುದಾಗಿ ನಮಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ ಎನ್ನುವುದಾಗಿ ಪದ್ಮಿನಿ ಅವರ ಕುಟುಂಬದವರು ನಿನ್ನೆ ಮಾಹಿತಿ ನೀಡಿದ್ದರು ಅಂತಾ ಮೂಲಗಳಿಂದ ತಿಳಿದುಬಂದಿದೆ.
ಇನ್ನು ಪದ್ಮಿನಿ ಅವರು ಸದ್ಯ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಇಂದು (ಜೂನ್ 06) ಸಾವನ್ನಪ್ಪಿರುವ ಬಗ್ಗೆ ಮಾಹಿತಿಯನ್ನು ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ನೀಡಿದ್ದು, ಅವರ ಮೃತ ದೇಹ ಪತ್ತೆಯಾಗಬೇಕಿದೆ.












Click it and Unblock the Notifications