ಉತ್ತರಾಖಂಡ್ ನಲ್ಲಿ ಸಂವಿಧಾನದ ಅಪಹಾಸ್ಯ: ಮತ್ತೆ ರಾಷ್ಟ್ರಪತಿ ಆಳ್ವಿಕೆ

Posted By:
Subscribe to Oneindia Kannada

ಗುರುವಾರದ ಹೈಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ಬೆಂಬಲಿಗರು ಸಿಹಿಹಂಚಿ ಸಂಭ್ರಮಿಸಿದ್ದರು, ಶುಕ್ರವಾರದ (ಏ 22) ಸುಪ್ರೀಂಕೋರ್ಟ್ ತೀರ್ಪಿನ ನಂತರ ಈಗ ಬಿಜೆಪಿಯ ಸರದಿ. ಒಟ್ಟಿನಲ್ಲಿ ಉತ್ತರಾಖಂಡ್ ನಲ್ಲಿ ಎರಡು ಪಕ್ಷಗಳ ನಡುವಿನ ರಾಜಕೀಯ ಮೇಲಾಟಕ್ಕೆ ಅಪಹಾಸ್ಯಗೊಂಡಿದ್ದು ಸಂವಿಧಾನ.

ರಾಜಕೀಯ ಅಸ್ಥಿರತೆಯಿಂದಾಗಿ ಕೇಂದ್ರ ಸರಕಾರದ ಶಿಫಾರಸಿನಂತೆ ಉತ್ತರಾಖಾಂಡ್ ನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿತ್ತು. ಕೇಂದ್ರದ ನಿರ್ಧಾರದ ವಿರುದ್ದ ಉತ್ತರಾಖಂಡ್ ಹೈಕೋರ್ಟ್ (ನೈನಿತಾಲ್) ಮೆಟ್ಟಲೇರಿದ್ದ ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿ, ರಾಷ್ಟ್ರಪತಿ ಆಳ್ವಿಕೆ ರದ್ದು ಪಡಿಸಿತ್ತು.

ಇದರಿಂದ ತೀವ್ರ ಮುಖಭಂಗಕ್ಕೊಳಗಾದ ಕೇಂದ್ರ ಸರಕಾರ ನೈನಿತಾಲ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಸರ್ವೋಚ್ಚ ನ್ಯಾಯಾಲಯ ಈಗ ನೈನಿತಾನ್ ಕೋರ್ಟಿನ ತೀರ್ಪಿಗೆ ತಡೆಯಾಜ್ಞೆ ನೀಡಿದೆ.

ಇದರಿಂದಾಗಿ ರಾಜ್ಯದಲ್ಲಿ ಮತ್ತೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿದೆ. ಆ ಮೂಲಕ ಮಾರ್ಚ್ 27ರಿಂದ ಆರಂಭವಾದ ರಾಜಕೀಯ ಅನಿಶ್ಚಿತತೆ ಮತ್ತೆ ಮುಂದುವರಿದಿದೆ.

ನೈನಿತಾಲ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನೈನಿತಾಲ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ, ವಿಚಾರಣೆಯನ್ನು ಏಪ್ರಿಲ್ 27ಕ್ಕೆ ಮುಂದೂಡಿದೆ.

ರಾಷ್ಟಪತಿಗಳಿಗೂ ಬುದ್ದಿಮಾತು ಹೇಳಿದ್ದ ಉತ್ತರಾಖಂಡ್ ನ್ಯಾಯಾಲಯ, ಮುಂದೆ ಓದಿ..

ಪ್ರಧಾನಿ ಮೋದಿ ಕ್ಷಮೆಗೆ ಪಟ್ಟು ಹಿಡಿದಿದ್ದ ಕಾಂಗ್ರೆಸ್

ಪ್ರಧಾನಿ ಮೋದಿ ಕ್ಷಮೆಗೆ ಪಟ್ಟು ಹಿಡಿದಿದ್ದ ಕಾಂಗ್ರೆಸ್

ಉತ್ತರಾಖಂಡ್ ಉಚ್ಚ ನ್ಯಾಯಾಲಯ (ನೈನಿತಾಲ್) ತೀರ್ಪಿನ ನಂತರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದ ಕಾಂಗ್ರೆಸ್, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕ್ಷಮೆಯಾಚಿಸ ಬೇಕೆಂದು ಪಟ್ಟು ಹಿಡಿದಿತ್ತು.

ರಾಷ್ಟಪತಿಗಳೂ ತಪ್ಪು ಮಾಡಬಹುದು

ರಾಷ್ಟಪತಿಗಳೂ ತಪ್ಪು ಮಾಡಬಹುದು

ಎಲ್ಲಾ ನಿರ್ಧಾರಗಳು ಅಂತಿಮವಾಗಿ ನ್ಯಾಯಾಲಯದ ಪರಿಶೀಲನೆಗೆ ಒಳಪಟ್ಟಿರುತ್ತದೆ ಎನ್ನುವುದನ್ನು ಯಾವುದೇ ರಾಜಕೀಯ ಪಕ್ಷಗಳು ಮರೆಯಬಾರದು. ರಾಷ್ಟಪತಿಗಳೂ ತಪ್ಪು ಮಾಡಬಹುದು, ಸಂವಿಧಾನಕ್ಕೆ ವಿರುದ್ದವಾಗುವ ನಿಲುವನ್ನು ತಾಳಬೇಡಿ ಎಂದು ಕೇಂದ್ರ ಸರಕಾರಕ್ಕೆ ನೈನಿತಾಲ್ ಕೋರ್ಟ್ ಕಿವಿಹಿಂಡಿತ್ತು.

ಸುಪ್ರೀಂಕೋರ್ಟ್ ಹೇಳಿದ್ದು

ಸುಪ್ರೀಂಕೋರ್ಟ್ ಹೇಳಿದ್ದು

ರಾಷ್ಟ್ರಪತಿಗಳ ನಿರ್ಧಾರವನ್ನು ಪ್ರಶ್ನಿಸುವ ಅಧಿಕಾರ ಹೈಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ. ಆದುದರಿಂದ ನೈನಿತಾಲ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕು ಎಂದು ಕೇಂದ್ರ ಸರಕಾರದ ಪರವಾಗಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಸುಪ್ರೀಂಕೋರ್ಟ್ ನಲ್ಲಿ ಮನವಿ ಮಾಡಿದ್ದರು.

ಏಪ್ರಿಲ್ 27ಕ್ಕೆ ಮುಂದೂಡಿಕೆ

ಏಪ್ರಿಲ್ 27ಕ್ಕೆ ಮುಂದೂಡಿಕೆ

ಕೇಂದ್ರ ಸರಕಾರದ ಮನವಿಯನ್ನು ವಿಚಾರಣೆಗೆ ಪುರಸ್ಕರಿಸಿದ ಸುಪ್ರೀಂಕೋರ್ಟ್ ನೈನಿತಾಲ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ, ವಿಚಾರಣೆಯನ್ನು ಏಪ್ರಿಲ್ 27ಕ್ಕೆ ಮುಂದೂಡಿದೆ. ಜೊತೆಗೆ, ಹೈಕೋರ್ಟ್ ಆದೇಶದ ಪ್ರತಿಯನ್ನು ಸಲ್ಲಿಸುವಂತೆ ಸೂಚಿಸಿದೆ.

ಏಪ್ರಿಲ್ 29ರಂದು ಬಹುಮತ ಸಾಬೀತು ಪಡಿಸಲು

ಏಪ್ರಿಲ್ 29ರಂದು ಬಹುಮತ ಸಾಬೀತು ಪಡಿಸಲು

ಕೇಂದ್ರದ ಕ್ರಮಕ್ಕೆ ಶಾಕ್ ನೀಡಿದ್ದ ಹೈಕೋರ್ಟ್, ಏಪ್ರಿಲ್ 29ರಂದು ಬಹುಮತ ಸಾಬೀತು ಪಡಿಸಲು ಆದೇಶ ನೀಡಿತ್ತು. ವಿಶ್ವಾಸಮತದ ವೇಳೆ, ಪಕ್ಷೇತರರ ಬೆಂಬಲ ಪಡೆದು ಸರಕಾರ ರಚನೆಗೆ ಹಕ್ಕು ಮಂಡನೆ ಮಾಡುವ ಮೂಲಕ ಬಿಜೆಪಿ ಪ್ರತಿತಂತ್ರ ರೂಪಿಸಿತ್ತು.

ಉತ್ತರಾಖಂಡ್ ಅಸೆಂಬ್ಲಿಯಲ್ಲಿ ಪಕ್ಷಗಳ ಸದ್ಯದ ಬಲ

ಉತ್ತರಾಖಂಡ್ ಅಸೆಂಬ್ಲಿಯಲ್ಲಿ ಪಕ್ಷಗಳ ಸದ್ಯದ ಬಲ

ಒಟ್ಟು ಸ್ಥಾನ : 71
(ಇದರಲ್ಲಿ ಕಾಂಗ್ರೆಸ್ಸಿನ 9 ಬಂಡುಕೋರ ಸದಸ್ಯರಿಗೆ ಮತ ಚಲಾಯಿಸಲು ಅವಕಾಶವಿಲ್ಲ)

ಕಾಂಗ್ರೆಸ್: 36 -9= 27
ಬಿಜೆಪಿ: 27
ಬಿಎಸ್ಪಿ: 02
ಪಕ್ಷೇತರರು: 06
ಸರಳ ಬಹುಮತಕ್ಕೆ ಬೇಕಾಗಿರುವುದು: 31

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The political crisis in Uttarakhand continues, after Supreme Court said that till its next hearing on Wednesday (Apr 27), Uttarakhand will remain under President's Rule and quashed Nainital High Court Order.
Please Wait while comments are loading...