
ಉತ್ತರಾಖಂಡ ಹಿಮಕುಸಿತದಲ್ಲಿ ಇಬ್ಬರು ಕನ್ನಡಿಗರ ದುರ್ಮರಣ, ಮೃತದೇಹ ಪತ್ತೆ
ಉತ್ತರಾಖಂಡ, ಅಕ್ಟೋಬರ್ 10: ಉತ್ತರಾಖಂಡದ ಹಿಮಕುಸಿತ ಸಂಭವಹಿಸಿರುವ ದುರಂತದಲ್ಲಿ ಇಬ್ಬರು ಕರ್ನಾಟಕದ ಬೆಂಗಳೂರಿಗರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಅಕ್ಟೋಬರ್ 4ರಂದು ಉತ್ತರಕಾಶಿಯ ಗಂಗೋತ್ರಿ ಶ್ರೇಣಿಯ ಎರಡು ಶಿಖರಗಳಲ್ಲಿ ಒಂದಾದ ದ್ರೌಪದಿ ಕಾ ದಾಂಡಾ-2ಕ್ಕೆ ಪರ್ವತ ದಂಡಯಾತ್ರೆಗೆ ಹೊರಟವರ 29 ಸದಸ್ಯರ ಗುಂಪಿನಲ್ಲಿ ಕನ್ನಡಿಗರಾದ ಡಾ. ರಕ್ಷಿತ್ ಕೆ ಮತ್ತು ವಿಕ್ರಮ್ ಎಂ ಬೆಂಗಳೂರು ಮೂಲದವರು ಭಾಗಿಯಾಗಿದ್ದ ಇವರಿಬ್ಬರು ಹಿಮಕುಸಿತ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರ್ವತಕ್ಕೆ ತೆರಳಿದ ಗುಂಪಿನಲ್ಲಿ 27 ಪ್ರಶಿಕ್ಷಣಾರ್ಥಿಗಳು ಮತ್ತು ಇಬ್ಬರು ಬೋಧಕರು ಇದ್ದರು. ತರಬೇತಿ ಪಡೆದವರಲ್ಲಿ ಕನ್ನಡಿಗರಾದ ಡಾ.ರಕ್ಷಿತ್ ಮತ್ತು ವಿಕ್ರಮ್ ಕೂಡ ಇದ್ದರು. ಶಿಬಿರ ಪ್ರದೇಶಕ್ಕೆ ತಲುಪಿದ ನಂತರ ಪರ್ವತಾರೋಹಿಗಳು 8.45ರ ಸುಮಾರಿಗೆ ಹಿಮಪಾತವು ಪರ್ವತವನ್ನು ಅಪ್ಪಳಿಸಿದ್ದರಿಂದ ಭಾರಿ ಹಿಮ ಕುಸಿತದಿಂದ ಜಾರಿ ಬಿದ್ದಿದ್ದಾರೆ ಈ ಕ್ಷಣ ಈ ಇಬ್ಬರನ್ನು ಮತ್ತೆ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಹಾಗೂ ಈ ಇಬ್ಬರು ಕನ್ನಡಿಗರು ಹಿಮಕುಸಿತದ ದುರಂತದಲ್ಲಿ ಮೃತಪಟ್ಟಿದ್ದಾರೆ.
ರಕ್ಷಿತ್ ಮತ್ತು ವಿಕ್ರಮ್ ಮೃತದೇಹಗಳನ್ನು ಗುರುತಿಸಲಾಗಿದೆ
ಉತ್ತರಕಾಶಿಯಲ್ಲಿ ಸಂಭವಿಸಿದ ಈ ಹಿಮಪಾತ ದುರಂತದಲ್ಲಿ ಈ ಇಬ್ಬರು ಕನ್ನಡಿಗರು ಮೃತಪಟ್ಟಿದ್ದಾರೆ. ಈ ಇಬ್ಬರು ಕರ್ನಾಟಕದ ಮೂಲದವರಾಗಿದ್ದು, ಬೆಂಗಳೂರಿನ ಮೂಲದವರು ಕಳೆದ ಮಂಗಳವಾರ ಹಿಮಪಾತ ಕುಸಿತ ಸಂಭವಿಸಿದ ಬಳಿಕ ಈ ಇಬ್ಬರು ನಾಪತ್ತೆಯಾಗಿದ್ದರು ರಕ್ಷಣಾ ಇಲಾಖೆ ಕಾರ್ಯಚರಣೆ ವೇಳೆ ಈ ಇಬ್ಬರ ಮೃತದೇಹಗಳು ಪತ್ತೆಯಾಗಿವೆ ಎಂದು ಐಎಎಫ್ ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯ ವಾಯುಪಡೆಯು ಚೀತಾ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿ ಹಿಮಕುಸಿತದಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸಲು ಮತ್ತು ಶವಗಳನ್ನು ರಕ್ಷಣಾ ಕಾರ್ಯಾಚರಣೆಯ ಮೂಲಕ ಹೊರತೆಗೆಯಲು ನಿಯೋಜಿಸಿತು. ಒಂದೇ ದಿನ ನಾಲ್ಕು ಶವಗಳು ಪತ್ತೆಯಾದವು ನಂತರ ಅಕ್ಟೋಬರ್ 6ರಂದು 15 ಹೀಗೆ ಅಕ್ಟೋಬರ್ 7ರಂದು 8 ಮೃತದೇಹವನ್ನು ಹೊರತೆಗೆಯಲಾಯಿತು.ಕಳೆದ ಅಕ್ಟೋಬರ್ 9 ಭಾನುವಾರ ಕನ್ನಡಿಗರಾದ ಡಾ ರಕ್ಷಿತ್ ಮತ್ತು ವಿಕ್ರಮ್ ಅವರ ಮೃತದೇಹಗಳನ್ನು ಗುರುತಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹಾಗೂ ಅಧಿಕಾರಿ ಹೇಳಿದ್ದಾರೆ.
ಡಾ ರಕ್ಷಿತ್ ಮತ್ತು ವಿಕ್ರಮ್ ಎನ್‌ಐಎಂನಲ್ಲಿ 28 ದಿನಗಳ ಅಡ್ವಾನ್ಸ್ ಮೌಂಟೇನಿಯರಿಂಗ್ ಕೋರ್ಸ್‌ಗೆ (ಎಎಮ್‌ಸಿ) ಸೇರಿಕೊಂಡಿದ್ದರು. ಅದಕ್ಕೂ ಮೊದಲು, ಅವರು 28 ದಿನಗಳ ಅವಧಿಯ ಬೇಸಿಕ್ ಮೌಂಟೇನಿಯರಿಂಗ್ ಕೋರ್ಸನ್ನು ಕೂಡ ಪೂರ್ಣಗೊಳಿಸಿದ್ದರು. ಬೆಂಗಳೂರಿನ ಶ್ರೀನಗರದ ನಿವಾಸಿ ಡಾ ರಕ್ಷಿತ್ ಅವರು ಮುಂದಿನ ವರ್ಷ ಮೇ ತಿಂಗಳಲ್ಲಿ ಮೌಂಟ್ ಎವರೆಸ್ಟ್‌ಗೆ ದಂಡಯಾತ್ರೆಯನ್ನು ಕೈಗೊಳ್ಳುವ ಗುರಿ ಹೊಂದಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.

ಕರ್ನಾಟಕ ಪರ್ವತಾರೋಹಣ ಸಂಘದ ಸದಸ್ಯರಾಗಿದ್ದರು
ವಿಕ್ರಮ್ ವೈಟ್‌ಫೀಲ್ಡ್ ನಿವಾಸಿಯಾಗಿದ್ದು, ರಕ್ಷಿತ್ ಶ್ರೀನಗರದಲ್ಲಿ ವಾಸಿಸುತ್ತಿದ್ದರು. "ನನಗೆ ರಕ್ಷಿತ್ ವೈಯಕ್ತಿಕವಾಗಿ ಗೊತ್ತು. ಅವರು ಪರ್ವತಾರೋಹಣದ ಬಗ್ಗೆ ಒಲವು ಹೊಂದಿದ್ದರು ಮತ್ತು ಅವರು ಕರ್ನಾಟಕ ಪರ್ವತಾರೋಹಣ ಸಂಘದ ಸದಸ್ಯರಾಗಿದ್ದರು," ಎಂದು ಪರ್ವತಾರೋಹ ಶಿಬಿರಕ್ಕೆ ಸೇರಿಸಿದರು ಲೋಕೇಶ್ ಹೇಳಿದ್ದಾರೆ.
ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಈ ವಾರದ ಆರಂಭದಲ್ಲಿ ದ್ರೌಪದಿ ಕಾ ದಂಡಾ ಪರ್ವತದ ಶಿಖರದಲ್ಲಿ ಆಯೋಜಿಸಿದ್ದ ಅಡ್ವಾನ್ಸ್ ಮೌಂಟೇನಿಯರಿಂಗ್ ಕೋರ್ಸ್‌ನಲ್ಲಿ ಹಿಮಪಾತಕ್ಕೆ ಸಿಲುಕಿದ ಜನರು ಭಾಗವಹಿಸುತ್ತಿದ್ದರು. ಸೆಪ್ಟೆಂಬರ್ 14ರಿಂದ ತರಬೇತಿ ಪಡೆದವರು, ಬೋಧಕರು ಮತ್ತು ನರ್ಸಿಂಗ್ ಸಹಾಯಕರು ಸೇರಿದಂತೆ ಒಟ್ಟು 61 ಜನರು ವ್ಯಾಯಾಮದಲ್ಲಿ ಭಾಗವಹಿಸಿದ್ದರು.
ತರಬೇತಿ ಕಾರ್ಯಕ್ರಮದ ಪ್ರಕಾರ, ಭಾಗವಹಿಸುವವರು ಕ್ಯಾಂಪ್ -1 ನಲ್ಲಿ ಎತ್ತರದ ತರಬೇತಿಗೆ ತೆರಳಿದರು. ಅಕ್ಟೋಬರ್ 4ರಂದು ತರಬೇತಿ ವೇಳಾಪಟ್ಟಿಯಂತೆ ಕೋರ್ಸ್ ಹೈ ಆಲ್ಟಿಟ್ಯೂಡ್ ನ್ಯಾವಿಗೇಷನ್‌ಗೆ ಸ್ಥಳಾಂತರಗೊಂಡಿತು ಮತ್ತು ಎತ್ತರವು ದ್ರೌಪದಿ ಕಾ ದಂಡಾ-II ಪರ್ವತಕ್ಕೆ (5,670 ಮೀ) ತಲುಪಿತು. ಪರ್ವತ ಶಿಖರದಿಂದ ಹಿಂತಿರುಗುತ್ತಿದ್ದಾಗ, ಭಾಗವಹಿಸುವವರು ಹಿಮಕುಸಿತಕ್ಕೆ ಕುಸಿದರು.