ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಉತ್ತರ ಪ್ರದೇಶ ರಸ್ತೆಗಳು ಸಿದ್ಧ

ಲಕ್ನೋ, ಮೇ 29: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ನಾಗರಿಕರ ಅನುಕೂಲಕ್ಕಾಗಿ ಹಾಗೂ ಪರಿಸರ ಸಂರಕ್ಷಣೆಗಾಗಿ ಎಲೆಕ್ಟ್ರಿಕ್ ವಾಹನಗಳ ಕಾರ್ಯಾಚರಣೆಗೆ ಒತ್ತು ನೀಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರಸ್ತೆಮಾರ್ಗಗಳು ಎಲೆಕ್ಟ್ರಿಕ್ ಬಸ್‌ಗಳನ್ನು ಪ್ರಾರಂಭಿಸಲು ಸಿದ್ಧವಾಗಿವೆ.

ಈಗಾಗಲೇ ನಗರಾಭಿವೃದ್ಧಿ ಇಲಾಖೆ ಮೂಲಕ ರಾಜ್ಯದ ನಗರ ಪ್ರದೇಶಗಳಲ್ಲಿ ನೂರಾರು ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರಾಯೋಗಿಕ ಯೋಜನೆಯ ಭಾಗವಾಗಿ ಪ್ರಸ್ತುತ ಲಕ್ನೋ ಮತ್ತು ಗಾಜಿಯಾಬಾದ್‌ನ ಆಯ್ದ ಮಾರ್ಗಗಳಲ್ಲಿ 100 ಎಲೆಕ್ಟ್ರಿಕ್ ಬಸ್‌ಗಳನ್ನು ನಿರ್ವಹಿಸುವ ಯೋಜನೆ ಇದೆ.

Chief Minister Yogi Adityanaths emphasis

ಈ ಬಗ್ಗೆ ಉತ್ತರ ಪ್ರದೇಶದ ಸಾರಿಗೆ ಖಾತೆ ರಾಜ್ಯ ಸಚಿವ ದಯಾಶಂಕರ್ ಸಿಂಗ್ ಮಾತನಾಡಿ, ಸಾರಿಗೆ ನಿಗಮವು ಲಕ್ನೋ ಮತ್ತು ಗಾಜಿಯಾಬಾದ್‌ನ ಆಯ್ದ ಮಾರ್ಗಗಳಲ್ಲಿ 100 ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ಯೋಜಿಸಿದೆ. ಮೊದಲ ಹಂತದಲ್ಲಿ, ಈ ಬಸ್‌ಗಳನ್ನು ಪ್ರಾಯೋಗಿಕ ಆಧಾರದ ಮೇಲೆ ಓಡಿಸಲಾಗುತ್ತದೆ. ನಂತರ ರಾಜ್ಯದ ಇತರ ಜಿಲ್ಲೆಗಳಲ್ಲೂ ಇದನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಶೀಘ್ರದಲ್ಲೇ ರಾಜ್ಯದ ಜನತೆಗೆ ಅತ್ಯುತ್ತಮ ಮತ್ತು ಕೈಗೆಟುಕುವ ಸಾರಿಗೆ ಸೇವೆಗಳು ಲಭ್ಯವಾಗಲಿವೆ. ಇಲ್ಲಿಯವರೆಗೆ, ಎಸಿ ಬಸ್‌ಗಳಿಗೆ 2X2 ಆಸನ ವ್ಯವಸ್ಥೆ ಬಸ್‌ಗಳಿಗೆ ಅನುಮೋದನೆ ನೀಡಲಾಯಿತು, ಆದರೆ ಈಗ ಬಸ್ ಸೇವೆಯನ್ನು ಒಪ್ಪಂದ ಮಾಡಿಕೊಳ್ಳುವ ಯೋಜನೆ ಇದೆ. ಹೊಸ ಗುತ್ತಿಗೆ ಬಸ್ ಯೋಜನೆಯಡಿಯಲ್ಲಿ ಆಸನಗಳ ಹೊಸ 3X2 ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

"3X2 ಆಸನ ಸಾಮರ್ಥ್ಯದ ಬಸ್‌ಗಳ ದರವು ಪ್ರತಿ ಕಿಮೀಗೆ 1.63 ರೂ ಆಗಿರುತ್ತದೆ. ಆದರೆ 2X2 ಆಸನ ವ್ಯವಸ್ಥೆ ಬಸ್‌ಗಳ ದರವು ಕಿಮೀಗೆ ರೂ 1.93 ಆಗಿದೆ. ಇದು ಪ್ರತಿ ಕಿಮೀಗೆ ಒಟ್ಟು 30 ಪೈಸೆ ವ್ಯತ್ಯಾಸವನ್ನು ಮಾಡುತ್ತದೆ ಮತ್ತು ಕೈಗೆಟುಕುವ ದರದಲ್ಲಿ ಜನರಿಗೆ ಎಸಿ ಬಸ್ ಸೇವೆ ಲಭ್ಯವಿರುತ್ತದೆ. ಆರ್ಡಿನರಿ ಮತ್ತು ಎಸಿ ಬಸ್‌ಗಳು ಸೇರಿದಂತೆ 1235 ಬಸ್‌ಗಳಿಗೆ ಇಂಟೆಂಟ್‌ ಪತ್ರ ನೀಡಲಾಗಿದ್ದು, ಈ ಪೈಕಿ 770 ಬಸ್‌ಗಳು ಈಗಾಗಲೇ ಸಂಚಾರ ಆರಂಭಿಸಿವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+