ಡಾನ್ಸ್ ಬಾರ್ ಆದ ಸರ್ಕಾರಿ ಶಾಲೆ: ವೈರಲ್ ಆಯ್ತು ವಿಡಿಯೋ
ಮಿರ್ಝಾಪುರ(ಉತ್ತರ ಪ್ರದೇಶ), ಆಗಸ್ಟ್ 9: ಭಾರತೀಯ ಸಂಸ್ಕೃತಿಯಲ್ಲಿ ಶಾಲೆ ಎಂದರೆ ದೇವಿ ಸರಸ್ವತಿಯ ನೆಲೆ ಎಂಬ ನಂಬಿಕೆಯಿದೆ. ಆದರೆ ಉತ್ತರ ಪ್ರದೇಶದ ಮಿರ್ಝಾಪುರದ ಜಮಲ್ಪುರ್ ಎಂಬ ಸರ್ಕಾರಿ ಶಾಲೆಯೊಂದನ್ನು ಕೆಲವರು ಡಾನ್ಸ್ ಬಾರ್ ಆಗಿ ಬಳಸಿಕೊಂಡ ಘಟನೆ ನಡೆದಿದ್ದು, ಯುವತಿಯರು ಡಾನ್ಸ್ ಮಾಡುತ್ತಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.
ಆಗಸ್ಟ್ 7 ರ ರಕ್ಷಾಬಂಧನದಂದು ಹಳ್ಳಿಯ ಮುಖ್ಯಸ್ಥರೇ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಯುವತಿಯರು ಭೋಜ್ಪುರಿ ನೃತ್ಯ ಮಾಡುತ್ತಿದ್ದರೆ ಕೆಲ ಯುವಕರೂ ಅವರೊಂದಿಗೆ ಹೆಜ್ಜೆ ಹಾಕಲು ಪ್ರಯತ್ನಿಸುತ್ತಿದ್ದರು.

ಅಷ್ಟೇ ಅಲ್ಲ, ಆ ಯುವತಿಯರ ಮೇಲೆ ನೋಟನ್ನೂ ಎಸೆಯಲಾಗುತ್ತಿತ್ತು! ಇಂಥ ಕೆಲಸಗಳಿಗೆ ಸರ್ಕಾರಿ ಶಾಲೆಗಳನ್ನು ಬಳಸಿಕೊಂಡೂ ಸರಸ್ವತಿಯ ನೆಲೆಯ ಪಾವಿತ್ರ್ಯವನ್ನು ಹಾಳು ಮಾಡುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ.
#WATCH: Government primary school in Uttar Pradesh's Mirzapur turned into a 'dance bar' by locals on the night of #RakshaBandhan pic.twitter.com/NGz8YypQCc
— ANI UP (@ANINewsUP) August 9, 2017
ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಉತ್ತರ ಪ್ರದೇಶದ ಪ್ರಾಥಮಿಕ ಶಿಕ್ಷಣ ಸಚಿವ ಪ್ರವಿಣ್ ಕುಮಾರ್ ತಿವಾರಿ ಹೇಳಿದ್ದಾರೆ.












Click it and Unblock the Notifications