ಯೋಗಿ ನಾಡು ಉತ್ತರ ಪ್ರದೇಶದಲ್ಲಿ ಪ್ರತಿದಿನ ಕರೆಂಟ್ ಕಣ್ಣಾಮುಚ್ಚಾಲೆ!

ಲಖನೌ: ಹಿಂದುತ್ವದ ಫೈರ್ ಬ್ರ್ಯಾಂಡ್ ಅಂತಾನೆ ಗುರುತಿಸಿಕೊಂಡಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ತಮ್ಮ ಖಡಕ್ ನಿರ್ಧಾರದ ಮೂಲಕ ಸದ್ದು ಮಾಡ್ತಿದ್ದಾರೆ. ಅದರಲ್ಲೂ ಕ್ರಿಮಿನಲ್‌ಗಳ ವಿರುದ್ಧ ಯೋಗಿ ಕಠಿಣ ಕ್ರಮ ಕೈಗೊಳ್ಳುವುದರಲ್ಲಿ ನಂಬರ್ 1 ಅನ್ನೋದು ಅಭಿಮಾನಿಗಳ ಮಾತು. ಇಂತಿಪ್ಪ ಉತ್ತರ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆಯ ಬಗ್ಗೆ ನಿಮಗೆ ಗೊತ್ತಾ? ಬನ್ನಿ ತಿಳಿಯೋಣ.

ಹೌದು, ಸಿಎಂ ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ಈ ಬಾರಿ ಬೇಸಿಗೆ ಅತಿ ಕಷ್ಟಕರವಾಗಿತ್ತು. ಒಂದು ಕಡೆ ಅತಿಯಾದ ತಾಪಮಾನ ಏರಿಕೆ ಜನರನ್ನ ಕಾಡುತ್ತಿದ್ರೆ, ಈ ಹೊತ್ತಲ್ಲಿ ಉತ್ತರ ಪ್ರದೇಶ ರಾಜ್ಯದಾದ್ಯಂತ ವಿದ್ಯುತ್ ಕಡಿತ ಕೂಡ ಸಾಕಷ್ಟು ಸಮಸ್ಯೆಯನ್ನ ನೀಡಿತ್ತು. ಈ ಕುರಿತು ಸಮೀಕ್ಷೆ ವರದಿಯೊಂದು ಹೊರಬಿದ್ದಿದ್ದು ಸ್ವತಃ ಉತ್ತರ ಪ್ರದೇಶದ ಜನ ಅಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಜುಲೈ ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ವಿದ್ಯುತ್ ವ್ಯತ್ಯಯ ಆಗಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿರುವುದಾಗಿ ವರದಿ ಪ್ರಕಟವಾಗಿದೆ.

Uttar Pradesh power crisis is another burden in Summer

ಕರೆಂಟ್ ಕೈಕೊಡಲು ಕಾರಣ ಏನು?

ಅಂದಹಾಗೆ ಸಮುದಾಯ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆ ಲೋಕಲ್ ಸರ್ಕಲ್ ಈ ಸಮೀಕ್ಷೆ ನಡೆಸಿದೆ. ಈ ವರದಿ ಪ್ರಕಾರ 2023ರ ಜುಲೈ ತಿಂಗಳಲ್ಲಿ ಉತ್ತರ ಪ್ರದೇಶದ ಜನ ಬಹುತೇಕ ಪ್ರತಿದಿನ ವಿದ್ಯುತ್ ಸಮಸ್ಯೆ ಎದುರಿಸಿದ್ದಾರಂತೆ. 4,206 ಜನರು ಸಮೀಕ್ಷೆಯಲ್ಲಿ ಉತ್ತರ ನೀಡಿದ್ದು, ಶೇಕಡಾ 74ರಷ್ಟು ಜನರು ವಿದ್ಯುತ್ ಸಮಸ್ಯೆ ಎದುರಾಗಿದೆ ಎಂಬುದನ್ನ ಒಪ್ಪಿಕೊಂಡಿದ್ದಾರೆ. ಹೀಗೆ ಬೇಸಿಗೆ ಸಮಯದಲ್ಲಿ, ಭಾರಿ ಬಿಸಿಲಿನ ಪರಿಣಾಮ ನರಳುವಾಗ ಕರೆಂಟ್ ಕೂಡ ಕೈಕೊಟ್ಟು ಆಟ ನೋಡಿದೆ. ಹಾಗಾದರೆ ಈ ಸಮಸ್ಯೆಗೆ ಪ್ರಮುಖ ಕಾರಣ ಏನು? ಉತ್ತರ ಪ್ರದೇಶ ವಿದ್ಯುತ್ ನಿಗಮಗಳ ಸ್ಥಿತಿ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ಆರ್ಥಿಕವಾಗಿ ನರಳುತ್ತಿದೆಯಾ ವಿದ್ಯುತ್ ನಿಗಮ?

ಅಷ್ಟಕ್ಕೂ ದೇಶದ ಬಹುದೊಡ್ಡ ರಾಜ್ಯ ಉತ್ತರ ಪ್ರದೇಶ. ಆದ್ರೆ ಈ ಬಹುದೊಡ್ಡ ರಾಜ್ಯದ ವಿದ್ಯುತ್ ನಿಗಮ ನಷ್ಟದಲ್ಲಿದೆಯಂತೆ. ಉತ್ತರ ಪ್ರದೇಶ ಪವರ್ ಕಾರ್ಪೊರೇಷನ್ ಲಿಮಿಟೆಡ್ (UPPCL)ನ ಮುಖ್ಯಸ್ಥ ದೇವರಾಜ್ ಅವರ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬರೋಬ್ಬರಿ ಒಂದು ಲಕ್ಷ ಕೋಟಿ ರೂಪಾಯಿ ನಷ್ಟ ಉತ್ತರ ಪ್ರದೇಶದ ವಿದ್ಯುತ್ ನಿಗಮಕ್ಕೆ ಬರ ಸಿಡಿಲಿನಂತೆ ಬಡಿದಿದೆ. ಹೀಗಾಗಿ ನಷ್ಟವನ್ನು ಸರಿಪಡಿಸಲು ಹಾಗೂ ವಿದ್ಯುತ್ ಕಳ್ಳತನ ನಡೆಯದಂತೆ ನೋಡಿಕೊಳ್ಳಲು ವ್ಯವಸ್ಥೆ ಬದಲಿಸುವ ಲೆಕ್ಕಾಚಾರ ಕೂಡ ಇದೆ. ಆದರೆ ಈ ಎಲ್ಲಾ ಸಮಸ್ಯೆಯ ಪರಿಣಾಮ ಎದುರಿಸುತ್ತಿರುವುದು ಅಲ್ಲಿನ ಜನಸಾಮಾನ್ಯರು.

Uttar Pradesh power crisis is another burden in Summer

ಒಟ್ನಲ್ಲಿ ಉತ್ತರ ಪ್ರದೇಶದಲ್ಲಿ ವಿದ್ಯುತ್ ಕಡಿತ ದೊಡ್ಡ ಸಮಸ್ಯೆ ತಂದೊಡ್ಡಿದೆ. ಈ ಕುರಿತು ಜನರು ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಆದರೂ ಸಮಸ್ಯೆ ಬಗೆಹರಿದಿಲ್ಲ ಎಂಬ ಬೇಸರ ಇದೆ. ಇಷ್ಟೆಲ್ಲದರ ನಡುವೆ ಉತ್ತರ ಪ್ರದೇಶ ವಿದ್ಯುತ್ ನಿಗಮದಲ್ಲಿರುವ ಲೋಪಗಳನ್ನು ಸರಿ ಮಾಡಬೇಕು ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ. ಆದರೆ ಈ ಸಮಸ್ಯೆ ಯಾವಾಗ ಬಗೆಹರಿಯುತ್ತೆ? ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಇದರ ಜೊತೆಗೆ ವಿದ್ಯುತ್ ಕಳ್ಳತನ ಕೂಡ ಉತ್ತರ ಪ್ರದೇಶದ ವಿದ್ಯುತ್ ನಿಗಮಕ್ಕೆ ದೊಡ್ಡ ತಲೆನೋವು ತಂದೊಡಿದ್ದು, ಇನ್ನಾದ್ರೂ ಇದೆಲ್ಲಾ ಬಗೆಹರಿಯುತ್ತಾ? ಅನ್ನೋದನ್ನ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+