ಉತ್ತರಪ್ರದೇಶ ಚುನಾವಣೆ: ಇಂಡಿಯಾ ಟುಡೆ ಸಮೀಕ್ಷೆ ಹೇಳೋದೇ ಬೇರೆ

Posted By:
Subscribe to Oneindia Kannada

ದೇಶದ ಅತಿಹೆಚ್ಚು ಅಸೆಂಬ್ಲಿ ಕ್ಷೇತ್ರವನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಚುನಾವಣೆಗೆ ಆಖಾಡ ಸಿದ್ದವಾಗಿದೆ. ಈಗಾಗಲೇ ರಂಗೇರಿದ್ದ ಚುನಾವಣಾ ಕಣ, ಇಲೆಕ್ಷನ್ ದಿನಾಂಕ ಘೋಷಣೆಯಾದ ನಂತರ ಮತ್ತಷ್ಟು ಕಳೆಗಟ್ಟಿದೆ.

ಬುಧವಾರ (ಜ 4) ಪ್ರಕಟವಾಗಿದ್ದ ಎಬಿಪಿ ನ್ಯೂಸ್ ಮತ್ತು ಲೋಕನೀತಿ ಸಿಎಸ್ ಡಿಎಸ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ಮೊದಲ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. (ಎಬಿಪಿ ಸಮೀಕ್ಷೆ)

ಆದರೆ, ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ ನಂತರ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ ಮೊದಲ ಸ್ಥಾನ ಸಿಗಲಿದೆ ಎಂದು ತನ್ನ ಸರ್ವೇಯಲ್ಲಿ ತಿಳಿಸಿದೆ.

ಆಕ್ಸಿಸ್ ಮತ್ತು ಮೈಇಂಡಿಯಾ ಜಂಟಿಯಾಗಿ ಇಂಡಿಯಾ ಟುಡೆಗಾಗಿ ನಡೆಸಿದ ಸಮೀಕ್ಷೆಯಲ್ಲಿ, ಉತ್ತರಪ್ರದೇಶದಲ್ಲಿ ಹದಿನಾಲ್ಕು ವರ್ಷಗಳ ವನವಾಸ ಬಿಜೆಪಿಗೆ ಮುಗಿಯಲಿದೆ ಎಂದು ಹೇಳಿದೆ. (ಬಿಜೆಪಿಗೆ ಮುನ್ನಡೆ, ವಿಡಿಯೋ)

ಅಪನಗದೀಕರಣ ಮತ್ತು ಪ್ರಧಾನಿ ಮೋದಿಯ ವರ್ಚಸ್ಸು ಉತ್ತರಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಲಾಭ ತಂದು ಕೊಡಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಉತ್ತರಪ್ರದೇಶ ಸೇರಿದಂತೆ ಇತರ ಮೂರು ರಾಜ್ಯಗಳಲ್ಲಿ ಇಂಡಿಯಾ ಟುಡೇ ನಡೆಸಿದ ಫಲಿತಾಂಶ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಮಣಿಪುರ

ಮಣಿಪುರ

ಒಟ್ಟು ಸ್ಥಾನಗಳು : 60
ಬಿಜೆಪಿ : 31-35
ಕಾಂಗ್ರೆಸ್ : 19-24

ಉತ್ತರಾಖಂಡ

ಉತ್ತರಾಖಂಡ

ಒಟ್ಟು ಸ್ಥಾನಗಳು : 70
ಬಿಜೆಪಿ : 38-43
ಕಾಂಗ್ರೆಸ್ : 26-31

ಪಂಜಾಬ್

ಪಂಜಾಬ್

ಒಟ್ಟು ಸ್ಥಾನಗಳು : 117
ಬಿಜೆಪಿ ಮೈತ್ರಿಕೂಟ : 50-58
ಕಾಂಗ್ರೆಸ್ : 41-49
ಆಮ್ ಆದ್ಮಿ : 18

ಉತ್ತರಪ್ರದೇಶ

ಉತ್ತರಪ್ರದೇಶ

ಬಿಜೆಪಿ: ಶೇ. 33
ಬಿಎಸ್ಪಿ: ಶೇ. 26
ಎಸ್ಪಿ: ಶೇ. 26
ಕಾಂಗ್ರೆಸ್: ಶೇ. 06
ಇತರರು: ಶೇ. 09

 ಉ.ಪ್ರದೇಶದಲ್ಲಿ ಜನಪ್ರಿಯ ಸಿಎಂ ಆಯ್ಕೆ

ಉ.ಪ್ರದೇಶದಲ್ಲಿ ಜನಪ್ರಿಯ ಸಿಎಂ ಆಯ್ಕೆ

ಅಖಿಲೇಶ್ ಯಾದವ್ - ಶೇ. 33
ಮಾಯಾವತಿ : ಶೇ. 25
ಯೋಗಿ ಆದಿತ್ಯನಾಥ್ - ಶೇ. 20
ರಾಜನಾಥ್ ಸಿಂಗ್ - ಶೇ.18
ಪ್ರಿಯಾಂಕ ಗಾಂಧಿ ವಾಧ್ರಾ - ಶೇ. 01
ಮುಲಾಯಂ ಸಿಂಗ್ - ಶೇ. 01

 ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ

ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ

ಒಟ್ಟು ಸ್ಥಾನ: 403
ಬಿಜೆಪಿ: 206-215
ಎಸ್ಪಿ: 92-97
ಬಿಎಸ್ಪಿ: 79-85
ಕಾಂಗ್ರೆಸ್: 09
ಇತರರು: 10-15

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Uttar Pradesh, Manipur, Punjab, Uttarakhand - done by Axis-My-India for the India Today Group.
Please Wait while comments are loading...