ಪತ್ನಿ ಮೇಲಿನ ಕೋಪಕ್ಕೆ ಮಗುವನ್ನು ತುಳಿದು ಕೊಂದ ತಂದೆ!
ಸಂಭಾಲ್, ಜೂನ್ 23: ಇತ್ತೀಚೆಗಷ್ಟೇ ತಂದೆಯರ ದಿನ ಆಚರಿಸಿ ಸಂಭ್ರಮಿಸಿದ್ದೇವೆ. ಆದರೆ ಅಪ್ಪಂದಿರ ದಿನಕ್ಕೆ ಅವಮಾನ ಮಾಡುವಂಥ ಘಟನೆಯೊಂದು ಉತ್ತರ ಪ್ರದೇಶದ ಸಂಭಾಲ್ ಎಂಬಲ್ಲಿ ನಡೆದಿದೆ.
ಪತ್ನಿಯ ಮೇಲೆ ಕೋಪಿಸಿಕೊಂಡಿದ್ದ ಪತಿ ತನ್ನ ಒಂದು ತಿಂಗಳ ಮಗುವನ್ನು ಕಾಲಿನಲ್ಲಿ ತುಳಿದುಕೊಂದ ಘಟನೆ ಶುಕ್ರವಾರ ನಡೆದಿದೆ. ಯಾವುದೋ ವಿಷಯಕ್ಕಾಗಿ ಪತಿ-ಪತ್ನಿಯ ಮಧ್ಯೆ ಮಾತಿನ ಚಕಮಕಿ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಕೋಪಗೊಂಡ ಪತಿ, ತನ್ನ ಕೋಪವನ್ನು ಮಲಗಿದ್ದ ಒಂದು ತಿಂಗಳ ಪುಟ್ಟ ಕಂದನ ಮೇಲೆ ತೋರಿಸಿದ್ದಾನೆ.
ಆ ಮಗುವನ್ನು ಕಾಲಿನಿಂದ ತುಳಿದು ಕೊಂದು ನಂತರ ಪರಾರಿಯಾಗಲು ಯತ್ನಿಸಿದ್ದಾನೆ.

ಆರೋಪಿ ತಂದೆಯನ್ನು ಅರ್ಷದ್ ಎಂಬ ಹೆಸರಿನವನೆಂದು ಗುರುತಿಸಲಾಗಿದ್ದು, ಆತನನ್ನು ಚಾಂಡೌಸಿ ಕೊಟ್ವಾಲಿ ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಪತ್ನಿ ಮಾಡಿದ ಅಡುಗೆ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಆರಂಭವಾದ ಜಗಳವೇ ನಂತರ ವಿಪರಿತಕ್ಕೆ ತೆರಳಿ, ಮುಗ್ಧ ಮಗುವಿನ ಸಾವಿನೊಂದಿಗೆ ದುರಂತ ಅಂತ್ಯ ಕಂಡಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications