ವಿಧಾನಸಭೆ ಅಧಿವೇಶನದಲ್ಲಿ ಶಾಸಕರಿಗೆ ಟಫ್ ರೂಲ್ಸ್ ಜಾರಿ: ಮೊಬೈಲ್, ಪತ್ರಿಕಾ ಕಟಿಂಗ್ಸ್ ಇನ್ನಿತರ ವಸ್ತು ನಿಷೇಧ
ಲಖನೌ, ಆಗಸ್ಟ್ 10: ಉತ್ತರ ಪ್ರದೇಶ ಸರ್ಕಾರ ಕೈಗೊಳ್ಳುವ ಕ್ರಮ, ಯೋಜನೆಗಳು ಸೇರಿದಂತೆ ಹಲವು ವಿಚಾರಗಳು ದೇಶಾದ್ಯಂತ ಚರ್ಚೆಯಾಗುತ್ತವೆ. ಇದೀಗ ಅಲ್ಲಿನ ವಿಧಾನಸಭೆಯಲ್ಲಿ ಜಾರಿಗೆ ತಂದ ನಿಯಮಗಳು ಎಲ್ಲೆಡೆ ಸದ್ದು ಮಾಡುತ್ತಿವೆ.
ಯುಪಿ ವಿಧಾನಸಭೆಯಲ್ಲಿ ಶಾಸಕ ಕೆಲವು ಕೆಲಸಗಳಿಗೆ ಮೂಗುದಾರ ಬಿದ್ದಿದ್ದು, ಕೆಲವು ವಸ್ತುಗಳಿಗೂ ನಿರ್ಬಂಧ ವಿಧಿಸಲಾಗಿದೆ.

ಹೌದು, ಸಿಎಂ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಇತ್ತೀಚೆಗೆ ಮಸೂದೆಯೊಂದನ್ನು ಮಂಡಿಸಿದೆ. ಆ ಮಸೂದೆ ಪ್ರಕಾರ, ಅಲ್ಲಿನ ವಿಧಾನಸಭೆಯಲ್ಲಿ ಹೊಸ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಅದರನ್ವಯ ಶಾಸಕರು ತಮ್ಮ ಮೊಬೈಲ್ ಫೋನ್‌ಗಳನ್ನು ಕಲಾಪಕ್ಕೆ ತರಕೂಡದೂ ಎಂದು ನಿಷೇಧ ವಿಧಿಸಲಾಗಿದೆ.
ತೆಗೆದುಕೊಂಡು ಹೋಗುವುದರ ಮೇಲೆ ನಿಷೇಧ ಹೇರಲಾಗುತ್ತದೆ. ಇದಲ್ಲದೆ, ದಾಖಲೆಗಳನ್ನು ಹರಿದು ಹಾಕುವಂತಿಲ್ಲ ಮುಖ್ಯವಾಗಿ ಸಭಾಧ್ಯಕ್ಷರಿಗೆ ಶಾಸಕರು ಬೆನ್ನು ತೋರಿಸುವಂತಿಲ್ಲ ಎಂಬ ನಿಯಮಗಳು ಇತ್ತೀಚೆಗೆ ಮಂಡಿಸಲಾಗಿರುವ ಮಸೂದೆಯಲ್ಲಿ ಇವೆ. ಇದು ಅಂಗೀಕಾರವಾಗಬೇಕಿದೆ. ಬಳಿಕ ಹಾಲಿ ಸುಮಾರು ಏಳು ದಶಕದ ನಿಯಮಗಳು ಅಂತ್ಯಗೊಳ್ಳಲಿವೆ.
ಶಾಸಕರಿಂದ ಕಲಾಪದ FB ಲೈವ್ ಸ್ಟ್ರೀಮ್, ಬ್ಯಾನ್
ಈ ಹಿಂದಿನ ಅಧಿವೇಶನದಲ್ಲಿ ಶಾಸಕರೊಬ್ಬರು ಕಲಾಪಗಳ ವಿಡಿಯೋ ಅನ್ನು ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಂ ಮಾಡಿದ್ದರು. ಇದು ಸದನಕ್ಕೆ ಧಕ್ಕೆ ತರುವ ಸಾಧ್ಯತೆ ಹಿನ್ನೆಲೆಯಲ್ಲಿ ಶಾಸಕ ಮೊಬೈಲ್‌ಗೆ ನಿರ್ಬಂಧ ವಿಧಿಸಲಾಗಿದೆ.

ಇನ್ನೂ ಕಲಾಪಕ್ಕೆ ಹಾಜರಾಗುವ ಶಾಸಕರು ಸದನದದಲ್ಲಿ ಯಾವುದೇ ದಾಖಲೆಗಳನ್ನು ಹರಿದು ಹಾಕುವಂತಿಲ್ಲ. ಇನ್ನೂ ಅವರು ಭಾಷಣ ಮಾಡುವ ವೇಳೆ ಗ್ಯಾಲರಿಯಲ್ಲಿ ಕೂತವರತ್ತ ಬೊಟ್ಟು ಮಾಡಿ ಯಾರನ್ನಾದರೂ ತೋರಿಸುವುದು ಇಲ್ಲವೇ ಹೊಗಳುವುದು ಮಾಡುವಂತಿಲ್ಲ. ಸ್ಪೀಕರ್ ಗೆ ಬೆನ್ನು ಮಾಡಿ ಕೂರುವುದು, ಇಲ್ಲವೇ ನಿಲ್ಲುವುದನ್ನು ಸಹ ನಿಷೇಧಿಸಲಾಗಿದೆ.
ಮುಖ್ಯವಾಗಿ ಕಲಾಪದ ಸಂದರ್ಭದಲ್ಲಿ ಸದನದಲ್ಲಿ ಪ್ರದರ್ಶನಕ್ಕೆಂದು ಶಸ್ತ್ರಾಸ್ತ್ರಗಳನ್ನು ತರುವಂತಿಲ್ಲ. ಸದಸ್ಯರು ಲಾಬಿಯೊಳಗೆ ಧೂಮಪಾನ ಮಾಡುವುದುಉ, ಜೋರು ಮಾತನಾಡುವುದಕ್ಕೆ ಸರ್ಕಾರ ಮಸೂದೆ ಮಂಡನೆ ಮೂಲಕ ಬ್ರೇಕ್ ಹಾಕಿದೆ. ಶಾಸಕರು ಸಭಾಧ್ಯಕ್ಷರ ಪೀಠಕ್ಕೆ ನಮಸ್ಕರಿಸಿ ಗೌರವ ತೋರಬೇಕು. ಬದಲಾಗಿ ಎಂತದ್ದೆ ಸಂದರ್ಭಲ್ಲಿ ಪೀಠಕ್ಕೆಬೆನ್ನು ತೋರಿಸಬಾರದು ಎಂದು ರೂಪಿಸಿರುವ ನಿಯಮಗಳು ಹೇಳುತ್ತವೆ.
ಅಧಿವೇಶನದಲ್ಲಿ ಪಕ್ಷದ ಧ್ವಜಗಳು, ಚಿಹ್ನೆಗಳು ಅಥವಾ ಪತ್ರಿಕಾ ವರದಿಗಳ ಪ್ರದರ್ಶನ, ಸಾಹಿತ್ಯ, ಪ್ರಶ್ನಾವಳಿ, ಪುಸ್ತಕಗಳ ಪ್ರವೇಶಕ್ಕೆ, ಕಲಾಪಕ್ಕೆ ಸಂಬಂಧಿಸದ ಸ್ಲಿಪ್‌ಗಳ ವಿತರಣೆಗೆ ಇನ್ನುಮುಂದೆ ಅನುಮತಿ ಇರುವುದಿಲ್ಲ. ಯುಪಿ ಸರ್ಕಾರವು ರಾಜ್ಯ ವಿಧಾನಸಭೆಯ ಅಧಿವೇಶನ ಕರೆಯುವ ಅವಧಿಯನ್ನು 14 ದಿನಗಳಿಂದ 07 ದಿನಗಳಿಗೆ ಇಳಿಕೆ ಮಾಡಲಾಗಿದೆ.
ನಾಲ್ಕು ಗೆಸ್ಟ್ ಹೌಸ್ ಸ್ಥಾಪನೆಗೆ ಯೋಗಿ ಘೋಷಣೆ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇಶ ನಾಲ್ಕು ನಗರಗಳಲ್ಲಿ ಗೆಸ್ಟ್ ಹೌಸ್ (ಅತಿಥಿ ಗೃಹ) ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಅದರಲ್ಲಿ ಎರಡು ಉತ್ತರ ಪ್ರದೇಶದಲ್ಲಿ ಹಾಗೂ ಇನ್ನೆರಡಲ್ಲಿ ಒಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಮತ್ತೊಂದು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪನೆ ಆಗಲಿವೆ ಎಂದು ಸರ್ಕಾರ ತಿಳಿಸಿದೆ.












Click it and Unblock the Notifications