ಮೋದಿ, ಯೋಗಿಯನ್ನು ಮದುವೆಗೆ ಆಹ್ವಾನಿಸಿದ 2.3 ಅಡಿ ಎತ್ತರದ ವ್ಯಕ್ತಿ

ಅಹಮದಾಬಾದ್, ಅ.30: ತಮ್ಮ ಎತ್ತರದಿಂದಲೇ ಪ್ರಸಿದ್ಧವಾಗಿರುವ ಉತ್ತರ ಪ್ರದೇಶದ 2.3 ಅಡಿ ಎತ್ತರದ ವ್ಯಕ್ತಿ ತಮ್ಮ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಹ್ವಾನಿಸಿದ್ದಾರೆ.

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ನಿವಾಸಿ 2.3 ಅಡಿ ಎತ್ತರದ ವ್ಯಕ್ತಿ ಅಜೀಂ ಮನ್ಸೂರಿ ಈ ವರ್ಷದ ನವೆಂಬರ್‌ನಲ್ಲಿ ಮದುವೆಯಾಗಲಿದ್ದು, ತಮ್ಮ ಮದುವೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇರಬೇಕು ಎಂದು ಬಯಸಿದ್ದಾರೆ.

"ನಾನು ನವೆಂಬರ್‌ನಲ್ಲಿ ಮದುವೆಯಾಗಲಿದ್ದೇನೆ. ನನ್ನ ಮದುವೆಯ ಆಮಂತ್ರಣ ಪತ್ರಗಳನ್ನು ದೆಹಲಿಗೆ ಹೋಗಿ ಪ್ರಧಾನಿ ಮೋದಿ ಅವರಿಗೆ ನೀಡಿ ಆಹ್ವಾನಿಸುತ್ತೇನೆ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರಿಗೂ ಆಹ್ವಾನಿಸುತ್ತೇನೆ" ಎಂದು ಅಜೀಂ ಮನ್ಸೂರಿಗೆ ತಿಳಿಸಿದ್ದಾರೆ.

Uttar Pradesh: 2.3 Foot Tall Man Invited PM, CM To His Wedding

ಅಜೀಂ ಮನ್ಸೂರಿ ಅವರು ಹಲವಾರು ವರ್ಷಗಳಿಂದ ಮದುವೆಯಾಗಲು ವಧುವನ್ನು ಹುಡುಕುತ್ತಿದ್ದರು. ಅವರು 2.3 ಅಡಿ ಎತ್ತರವಿರುವ ಕಾರಣ ಸಂಗಾತಿಯನ್ನು ಹುಡುಕುವುದು ಕಷ್ಟಕರವಾಗಿತ್ತು. ಅವರು ತಮ್ಮ ಮದುವೆಗೆ ಸಂಬಂಧಿಸಿದಂತೆ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. 2019 ರಲ್ಲಿ, ಅವರು ವಧುವನ್ನು ಹುಡುಕಲು ಸಹಾಯ ಮಾಡುವಂತೆ ಅಂದಿನ ಯುಪಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಸಂಪರ್ಕಿಸಿದ್ದರು.

ಅಜೀಂ ಮನ್ಸೂರಿಗೆ ಮದುವೆಯಾಗಲು ವಧುವನ್ನು ಹುಡುಕುವುದು ಸವಾಲಾಗಿತ್ತು. ಸದ್ಯ ಹಾಪುರದಿಂದ ವಧುವನ್ನು ಹುಡುಕಿದ್ದು ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ.

ಮನ್ಸೂರಿ ಅವರ ಕನಸಿನ ಹುಡುಗಿಯನ್ನು ಮಾರ್ಚ್ 2021 ರಲ್ಲಿ ಭೇಟಿಯಾಗಿದ್ದಾರೆ. ಹಾಪುರ್‌ನ 3 ಅಡಿ ಎತ್ತರದ ಬುಷಾರಾ ಅವರೊಂದಿಗೆ ಏಪ್ರಿಲ್ 2021 ರಲ್ಲಿ ಅಜೀಮ್ ಮನ್ಸೂರಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಯುವತಿ ಬುಷಾರಾ ತನ್ನ ಪದವಿಯನ್ನು ಪೂರ್ಣಗೊಳಿಸಿದ್ದು, ಈ ನವೆಂಬರ್ 7 ರಂದು ಮದುವೆ ನಡೆಯಲಿದೆ.

Uttar Pradesh: 2.3 Foot Tall Man Invited PM, CM To His Wedding

ಕಾಸ್ಮೆಟಿಕ್ ಅಂಗಡಿಯನ್ನು ನಡೆಸುತ್ತಿರುವ ಅಜೀಂ ಮನ್ಸೂರಿ ಅವರು ವಿಶೇಷವಾದ ಶೆರ್ವಾನಿ ಮತ್ತು ಸೂಟ್ ಅನ್ನು ಸ್ವತಃ ಹೊಲಿಯುತ್ತಾರೆ. ಕೈರಾನಾ ಮೂಲದ ಕುಟುಂಬದಿಂದ ಬಂದ ಇವರು ಆರು ಒಡಹುಟ್ಟಿದವರಲ್ಲಿ ಕಿರಿಯವರಾಗಿದ್ದಾರೆ. ಶಾಲೆಯಲ್ಲಿ ಅಪಹಾಸ್ಯ ಮತ್ತು ಅವಮಾನಗಳನ್ನು ಎದುರಿಸಿ 5 ನೇ ತರಗತಿಯಿಂದಲೇ ಶಾಲೆಯಿಂದ ಹೊರಗುಳಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+