• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವಿಡ್‌-19 : ಭಾರತಕ್ಕೆ ವೆಂಟಿಲೇಟರ್ಸ್‌ ಕೊಡುಗೆ ನೀಡಿದ ಅಮೆರಿಕ

|

ನವದೆಹಲಿ, ಜೂನ್‌ 16: ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವು ನೀಡುವ ಸಲುವಾಗಿ ಅಮೆರಿಕವು ಯುಎಸ್‌ಎಐಡಿ ಮೂಲಕ 100 ಹೊಚ್ಚಹೊಸ, ಅತ್ಯಾಧುನಿಕ ತಂತ್ರಜ್ಞಾನದ ವೆಂಟಿಲೇಟರ್‌ಗಳನ್ನು ಕೊಡುಗೆ ನೀಡಿದೆ. ಜಾಗತಿಕ ಆರೋಗ್ಯ ವಿಪತ್ತಿನ ವಿರುದ್ಧದ ಭಾರತದ ಹೋರಾಟಕ್ಕೆ ಅಮೆರಿಕದ ಅಧ್ಯಕ್ಷ ಟ್ರಂಪ್‌ ಅವರು ನೀಡಿದ ತುರ್ತು ಪ್ರತಿಕ್ರಿಯೆಯ ಫಲ ಇದಾಗಿದೆ.

   ದೇಶದಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳಿಗೆ ಕರೆಕೊಟ್ಟ ಮೋದಿ | Oneindia Kannada

   ಅಮೆರಿಕದಲ್ಲಿ ತಯಾರಿಸಲಾಗಿರುವ ಈ ವೆಂಟಿಲೇಟರ್‌ಗಳು ಅತ್ಯಾಧುನಿಕ ಮತ್ತು ಅತ್ಯಂತ ಬೇಡಿಕೆಯಲ್ಲಿರುವ ತಂತ್ರಜ್ಞಾನವನ್ನು ಹೊಂದಿವೆ. ಇವು ಚಿಕ್ಕದಾಗಿದ್ದು, ಅಗತ್ಯವಿದ್ದಕಡೆಗಳಲ್ಲಿ ನಿಯೋಜಿಸಬಹುದಾದ್ದರಿಂದ ಕೋವಿಡ್‌-೧೯ ವೈರಸ್‌ ಸೋಂಕಿತರ ಚಿಕಿತ್ಸೆ ನೀಡಲು ಭಾರತಕ್ಕೆ ಸಹಾಯಕವಾಗುತ್ತವೆ.

   ಭಾರತಕ್ಕೆ 2.9 ಮಿಲಿಯನ್ ಡಾಲರ್ ನೆರವು ಘೋಷಿಸಿದ ಅಮೆರಿಕ

   ದೇಶಾದ್ಯಂತ ಇರುವ ಆಸ್ಪತ್ರೆಗಳಲ್ಲಿ ಕೆಲವನ್ನು ಆಯ್ದು, ಅಲ್ಲಿಗೆ ವೆಂಟಿಲೇಟರ್‌ಗಳ ಸಾಗಣೆ ಮತ್ತು ಅಳವಡಿಕೆಗೆ ಅನುವಾಗುವಂತೆ ಯುಎಸ್‌ಎಐಡಿಯು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಹಾಗೂ ಭಾರತ ಮತ್ತು ಅಮೆರಿಕದಲ್ಲಿರುವ ಸಹಭಾಗಿಗಳೊಂದಿಗೆ ಅವಿರತವಾಗಿ ಕೆಲಸ ಮಾಡುತ್ತಿದೆ.

   ರಾಯಭಾರಿ ಕೆನ್ನೆತ್‌ ಐ. ಜಸ್ಟರ್‌

   ರಾಯಭಾರಿ ಕೆನ್ನೆತ್‌ ಐ. ಜಸ್ಟರ್‌

   ವೆಂಟಿಲೇಟರ್‌ಗಳ ಆಗಮನದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕದ ರಾಯಭಾರಿ ಕೆನ್ನೆತ್‌ ಐ. ಜಸ್ಟರ್‌, ''ಕೋವಿಡ್‌-19ಸಾಂಕ್ರಾಮಿಕವು ಹಿಂದೆಂದೂ ಕಂಡರಿಯದ ಜಾಗತಿಕ ಆರೋಗ್ಯ ಆಪತ್ತನ್ನು ತಂದೊಡ್ಡಿದೆ. ಕೇವಲ ಸಹಭಾಗಿತ್ವ ಮತ್ತು ಸಹಕಾರಗಳ ಮೂಲಕ ಮಾತ್ರ ನಾವು ಜಗತ್ತಿನಾದ್ಯಂತ ಎಲ್ಲರಿಗೂ ಆರೋಗ್ಯಪೂರ್ಣ ಭವಿಷ್ಯವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಈ ಸಹಕಾರತತ್ತ್ವದ ಹಿನ್ನೆಲೆಯಲ್ಲಿ, ಭಾರತದ ಜನರಿಗೆ ವೆಂಟಿಲೇಟರ್‌ ದೇಣಿಗೆ ನೀಡುತ್ತಿರುವುದು ಅಮೆರಿಕಕ್ಕೆ ಸಂತಸ ತಂದಿದೆ. ಇದು ಸಾಧ್ಯವಾಗಿದ್ದು, ಅಮೆರಿಕದ ಜನತೆಯ ಔದಾರ್ಯ ಮತ್ತು ಅಮೆರಿಕದ ಖಾಸಗಿ ಉದ್ಯಮಗಳ ಆವಿಷ್ಕಾರದಿಂದ''

   ವೆಂಟಿಲೇಟರ್‌ಗಳ ಮೌಲ್ಯ 1.2 ಮಿಲಿಯನ್‌ ಡಾಲರ್‌

   ವೆಂಟಿಲೇಟರ್‌ಗಳ ಮೌಲ್ಯ 1.2 ಮಿಲಿಯನ್‌ ಡಾಲರ್‌

   ಈ ನೂರು ವೆಂಟಿಲೇಟರ್‌ಗಳ ಒಟ್ಟಾರೆ ಮೌಲ್ಯವು ಸುಮಾರು 1.2 ಮಿಲಿಯನ್‌ ಡಾಲರ್‌ಗಳಾಗಿದೆ. ಅದಲ್ಲದೆ ಯುಎಸ್‌ಎಐಡಿ ಹೆಚ್ಚುವರಿಯಾಗಿ ಅವುಗಳ ಸಾಗಣೆ, ತಾಂತ್ರಿಕ ನೆರವು, ಸಲಕರಣೆಗಳ ಜೊತೆಗೆ ಬೇಕಾಗುವ ವೈದ್ಯಕೀಯ ಅಗತ್ಯವಸ್ತುಗಳ ವೆಚ್ಚವನ್ನು ಭರಿಸಲು ಪ್ರತ್ಯೇಕ ಪ್ಯಾಕೇಜ್‌ ಅನ್ನು ಕೊಡುತ್ತಿದೆ. ಇವುಗಳ ಮೌಲ್ಯವು 9.5 ಮಿಲಿಯನ್‌ ಡಾಲರ್‌ಗಳಾಗಲಿದೆ. ಇದಲ್ಲದೆ ಯುಎಸ್‌ ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಅಂಡ್‌ ಪ್ರಿವೆನ್ಶನ್‌ ಸಂಸ್ಥೆಯು, ಶುಶ್ರೂಷೆ, ಅಗತ್ಯ ಆರೋಗ್ಯ ಸಂದೇಶಗಳ ವಿತರಣೆ, ರೋಗದ ಸರ್ವೇಕ್ಷಣೆ ಸೇರಿದಂತೆ ಹಲವು ವಿಧದಲ್ಲಿ ಭಾರತಕ್ಕೆ ಸಹಾಯಹಸ್ತ ಚಾಚುತ್ತಿದೆ.

   ಯುಎಸ್ ಎಐಡಿ ಹೊಸ ಯೋಜನಾ ನಿರ್ದೇಶಕ ಮಾರ್ಕ್ ಎ ವೈಟ್

   ದ್ವಿಪಕ್ಷೀಯ ಆರೋಗ್ಯ ನೆರವು

   ದ್ವಿಪಕ್ಷೀಯ ಆರೋಗ್ಯ ನೆರವು

   ಅಮೆರಿಕವು ಹಲವು ದಶಕಗಳಿಂದ ಅತ್ಯಂತ ಹೆಚ್ಚು ದ್ವಿಪಕ್ಷೀಯ ಆರೋಗ್ಯ ನೆರವು ನೀಡುತ್ತಿರುವ ರಾಷ್ಟ್ರವಾಗಿದೆ. ಅಮೆರಿಕದ ತೆರಿಗೆದಾರರು 2009 ರಿಂದ ಇಲ್ಲಿಯವರೆಗೆ ಆರೋಗ್ಯ ನೆರವಿಗಾಗಿ 100 ಬಿಲಿಯನ್‌ ಡಾಲರ್‌ಗಳನ್ನು ಉದಾರವಾಗಿ ದೇಣಿಗೆ ನೀಡಿದ್ದಾರೆ ಹಾಗೂ ಸುಮಾರು 70 ಬಿಲಿಯನ್‌ ಡಾಲರ್‌ಗಳನ್ನು ಮಾನವೀಯ ಕಾರ್ಯಗಳಿಗಾಗಿ ನೆರವು ನೀಡಿದ್ದಾರೆ.

   ದೇಣಿಗೆ ನೀಡುವಂತೆ ಅಮೆರಿಕ ಕರೆ

   ದೇಣಿಗೆ ನೀಡುವಂತೆ ಅಮೆರಿಕ ಕರೆ

   ಭಾರತ ಸರ್ಕಾರ ಮತ್ತು ಇತರ ಸಹಭಾಗಿಗಳಿಗೆ ಆದ್ಯ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಹಾಗೂ ಜೀವರಕ್ಷಕ ನೆರವು ನೀಡುವ ನಿಟ್ಟಿನಲ್ಲಿ ನೀಡಿವೆ. ಸಾಂಕ್ರಾಮಿಕ ರೋಗದ ಭೀತಿ ಎಲ್ಲಿಂದ ಹೇಗೆ ಬೇರಕಾದರೂ ಬರಬಹುದು ಹಾಗಾಗಿ ಕೋವಿಡ್‌-19 ವಿರುದ್ಧ ಹೋರಾಡಲು ಜಗತ್ತಿನ ಎಲ್ಲರೂ ಕೈಜೋಡಿಸಿ, ದೇಣಿಗೆ ನೀಡುವಂತೆ ಅಮೆರಿಕ ಕರೆ ನೀಡುತ್ತದೆ. ಕೋವಿಡ್‌-19 ನಿಗ್ರಹಕ್ಕಾಗಿ ಅಮೆರಿಕ ಕೈಗೊಂಡಿರುವ ಉಪಕ್ರಮಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಭೇಟಿ ನೀಡಿ: https://www.state.gov/coronavirus

   https://www.usaid.gov/coronavirus

   English summary
   On March 28, the U.S. Government, through the U.S. Agency for International Development (USAID), announced $2.9 million to support India in its response to the novel coronavirus disease, COVID-19.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X