ಎಚ್1ಬಿ ವೀಸಾ : ಭಾರತದ ಐಟಿ ಇಂಡಸ್ಟ್ರಿಗೆ ಕೆಟ್ಟ ಸುದ್ದಿ
ಬೆಂಗಳೂರು, ಮಾರ್ಚ್ 04 : ಎಚ್1ಬಿ ವೀಸಾಗೆ ಸಂಬಂಧಿಸಿದಂತೆ ಭಾರತದ ಐಟಿ ಇಂಡಸ್ಟ್ರಿಗೆ ಕೆಟ್ಟ ಸುದ್ದಿಯೊಂದು ಬಂದಿದೆ.
ಅದೇನೆಂದರೆ, ಏಪ್ರಿಲ್ 3ರಿಂದ ಎಚ್1ಬಿ ವೀಸಾ ತ್ವರಿತ ವಿಲೇವಾರಿಗಾಗಿ ಪ್ರೀಮಿಯಂ ಪ್ರೊಸೆಸಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ (USCIS) ಪ್ರಕಟಿಸಿದೆ. ಇದು ಸುಮಾರ್ 6 ತಿಂಗಳು ಜಾರಿಯಲ್ಲಿರಲಿದೆ. [ಏನಿದು ಎಚ್1ಬಿ ವೀಸಾ ತಿದ್ದುಪಡಿ ಕಾಯ್ದೆ? ಇದ್ಹೇಗೆ ಟೆಕ್ಕಿಗಳಿಗೆ ಮಾರಕ?]

ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಈ ಕ್ರಮದಿಂದಾಗಿ ಆಡಳಿತಕ್ಕೆ ಸಾಕಷ್ಟು ಸಹಾಯವಾಗಲಿದೆ ಮತ್ತು ಎಚ್1ಬಿ ವೀಸಾ ವಿಲೇವಾರಿ ಮಾಡುವ ಒಟ್ಟಾರೆ ಸಮಯದ ಉಳಿತಾಯವಾಗಲಿದೆ ಎಂದು ಯುಎಸ್ಸಿಐಎಸ್ ಪ್ರಕಟಣೆಯಲ್ಲಿ ತಿಳಿಸಿದೆ. [ಹೆಚ್ 1ಬಿ ವೀಸಾ ಬಳಕೆ ನಿಲ್ಲಲಿ: ನಾರಾಯಣ ಮೂರ್ತಿ ಸಲಹೆ]
ಅಲ್ಲದೆ, ಎಚ್1ಬಿ ವೀಸಾಗೆ ಸಲ್ಲಿಸಲಾಗಿರುವ ಅರ್ಜಿಗಳು ಹನುಮಂತನ ಬಾಲದಷ್ಟು ಇರುವುದರಿಂದ, ವಿಲೇವಾರಿಯಾಗದೆ ಉಳಿದಿರುವ ಎಚ್1ಬಿ ವೀಸಾ ಅರ್ಜಿಗಳನ್ನು ವಿಲೇವಾರಿ ಮಾಡಲು ಈ ಕ್ರಮ ಸಹಾಯವಾಗುತ್ತದೆ ಎಂದು ಹೇಳಲಾಗಿದೆ.
ಈ ಕ್ರಮದಿಂದಾಗಿ ಎಚ್1ಬಿ ವೀಸಾವನ್ನು ತ್ವರಿತಗತಿಯಾಗಿ ಪಡೆಯಲಿಚ್ಛಿಸುವವರು ಫಾರ್ಮ್ ಐ-907 ಅನ್ನು ಸಲ್ಲಿಸುವಂತಿಲ್ಲ. ಅಲ್ಲದೆ, ನಾನ್ ಇಮಿಗ್ರಂಟ್ ವಿಭಾಗದಲ್ಲಿ ವಲಸೆರಹಿತ ನೌಕರರು ಕೂಡ ಫಾರ್ಮ್ ಐ-129 ಅನ್ನು ಸಲ್ಲಿಸವ ಹಾಗಿಲ್ಲ. [ಮೇ ತಿಂಗಳಲ್ಲಿ ಮೋದಿ, ಟ್ರಂಪ್ ಭೇಟಿ: ಎಚ್ 1ಬಿ ವೀಸಾ ಕಗ್ಗಂಟು ಸಡಿಲ?]
Thank you @realDonaldTrump
— P. J. (@Portosj81) March 4, 2017
U.S. Citizens for U.S. jobs, not foreign H-1B workers. https://t.co/rEcgy2FfV6
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications