ಪಂಜಾಬ್‌ಗೆ ಬಂದಿಳಿದ ಅಮೇರಿಕಾದಿಂದ ಗಡಿಪಾರಾದ 205 ಭಾರತೀಯರು
ಅಮೇರಿಕಾ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ಅಕ್ರಮ ವಲಸಿಗರ ಮೇಲೆ ಪ್ರತಾಪ ತೋರಿದ್ದಾರೆ. ಈ ಹಿನ್ನೆಲೆ ಅಮೇರಿಕಾದಲ್ಲಿದ್ದ ಭಾರತೀಯರನ್ನು ಸಹ ಗಡಿಪಾರು ಮಾಡಲಾಗಿದೆ. ಸದ್ಯ ಅಮೇರಿಕಾದಿಂದ ಗಡಿಪಾರಾದ 205 ಭಾರತೀಯ ಪ್ರಜೆಗಳು ಪಂಜಾಬ್‌ನ ಅಮೃತಸರದಲ್ಲಿ ಬಂದಿಳಿದಿದ್ದಾರೆ. ಗಡಿಪಾರಾದ ಭಾರತೀಯರನ್ನು ಅಮೇರಿಕಾ ವಿಮಾನ ಹೊತ್ತು ಭಾರತಕ್ಕೆ ಕರೆತಂದಿದೆ.
ಅಮೃತಸರದ ಶ್ರೀ ಗುರುರಾಮದಾಸ್ ಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಅಮೇರಿಕಾ ವಿಮಾನದಲ್ಲಿ 205 ಭಾರತೀಯರು ಇಂದು ಭಾರತಕ್ಕೆ ಮರಳಿದ್ದಾರೆ. ಈ ಹಿನ್ನೆಲೆ ಅಮೃತಸರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಾಯುಪಡೆಯ ನೆಲೆಗೆ ಹೋಗುವ ಮಾರ್ಗಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ. ಭದ್ರತೆಗಾಗಿ ಪಂಜಾಬ್ ಪೊಲೀಸರು ಮತ್ತು ಸಿಐಎಸ್ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಗಡಿಪಾರು ಮಾಡಿದ ವ್ಯಕ್ತಿಗಳನ್ನು ಅವರ ಮನೆಗಳಿಗೆ ಕಳಿಸಿಕೊಡಲು ಅನುಕೂಲವಾಗುವಂತೆ ಅಲ್ಲಿನ ಸರ್ಕಾರವು ವಿಮಾನ ನಿಲ್ದಾಣದ ಆವರಣದಲ್ಲಿ ಬಸ್ ಹಾಗೂ ಇತರ ವಾಹನಗಳ ವ್ಯವಸ್ಥೆ ಮಾಡಿದೆ. ಅಮೃತಸರ ವಿಮಾನ ನಿಲ್ದಾಣಕ್ಕೆ ಅಮೇರಿಕಾದ ಸೇನಾ ವಿಮಾನ, C-17 ಬಂದಿದೆ. ವಿಮಾನದಲ್ಲಿ ಗಡೀಪಾರು ಮಾಡಿದವರ 205 ವ್ಯಕ್ತಿಗಳನ್ನು ಅಮೇರಿಕಾ ವಿಮಾನದ ಮೂಲಕ ಸ್ವದೇಶಕ್ಕೆ ಕಳುಹಿಸಲಾಗುತ್ತಿದೆ ಎಂದು ಹೇಳಿತ್ತು.
ಮೂಲಗಳ ಪ್ರಕಾರ ಗಡಿಪಾರು ಮಾಡಿದವರಲ್ಲಿ 33 ಮಂದಿ ಹರಿಯಾಣ ಮತ್ತು ಗುಜರಾತ್‌ನವರು, 30 ಮಂದಿ ಪಂಜಾಬ್‌ನಿಂದ ಮತ್ತು ವಿವಿಧ ರಾಜ್ಯಗಳಿಂದ ಬಂದವರು ಎನ್ನಲಾಗಿದೆ. ಇವರನ್ನು ಹೊತ್ತು ತಂದ ವಿಮಾನವು ಅಮೇರಿಕಾದ ಸ್ಯಾನ್ ಆಂಟೋನಿಯೊದಿಂದ ಹೊರಟು ಇಂದು ಮಧ್ಯಾಹ್ನ ಅಮೃತಸರದಲ್ಲಿ ಇಳಿದಿದೆ.
ಅಮೇರಿಕಾದಿಂದ ಗಡಿಪಾರು ಆದವರು ಮೊದಲಿಗೆ ಮಂಗಳವಾರ ಸಂಜೆಯೇ ಬರಬೇಕಿತ್ತು. ಆದರೆ ನಂತರ ವೇಳಾಪಟ್ಟಿಯನ್ನು ಪರಿಷ್ಕರಿಸಿದೆವು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳ ಹೇಳಿದ್ದಾರೆ. ವಿಮಾನದಲ್ಲಿ ಬಂದಿಳಿದ ವ್ಯಕ್ತಿಗಳ ಪಟ್ಟಿಯನ್ನು ಸ್ವೀಕರಿಸಲಾಗಿದೆ ಎಂದು ಭದ್ರತಾ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಪ್ರಾಥಮಿಕ ಪರಿಶೀಲನೆಯಲ್ಲಿ ಇವರಲ್ಲಿ ಯಾವುದೇ ಕುಖ್ಯಾತ ಅಪರಾಧಿಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

ಗಡಿಪಾರಾಗಿರುವ ಭಾರತೀಯರ ಪೈಕಿ ಯಾವುದೇ ಸಂಬಂಧಿಗಳು ವಿಮಾನ ನಿಲ್ದಾಣದಲ್ಲಿ ಕಂಡುಬಂದಿಲ್ಲ. ಪೊಲೀಸರು ಅವರ ಸಂಚಾರವನ್ನು ನಿರ್ಬಂಧಿಸಿದ್ದಾರೆ. ವಲಸೆ ಮತ್ತು ಕಸ್ಟಮ್ಸ್ ಕಾರ್ಯವಿಧಾನಗಳ ನಂತರ ಗಡಿಪಾರು ಮಾಡಿದ ಭಾರತೀಯರ ನಿರ್ಗಮನಕ್ಕೆ ಅನುಮತಿಸಲಾಗುವುದು. ಬಳಿಕ ಅವರನ್ನು ಪಂಜಾಬ್ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ ಎಂದು ತಿಳಿದುಬಂದಿದೆ.
VIDEO | Punjab: US aircraft carrying deported Indian immigrants lands at Amritsar Airport.
— Press Trust of India (@PTI_News) February 5, 2025
(Source: Third Party)
(Full video available on PTI Videos - https://t.co/n147TvrpG7) pic.twitter.com/Lza2pRDvvg
ಪಂಜಾಬ್ ಎನ್‌ಆರ್‌ಐ ವ್ಯವಹಾರಗಳ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅವರು ಅಮೇರಿಕಾ ಸರ್ಕಾರದ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಮೇರಿಕಾ ದೇಶದ ಆರ್ಥಿಕತೆಗೆ ಕೊಡುಗೆ ನೀಡಿದ ನಮ್ಮ ಭಾರತೀಯರನ್ನು ಗಡಿಪಾರು ಮಾಡುವ ಬದಲು ಶಾಶ್ವತ ನಿವಾಸವನ್ನು ನೀಡಬೇಕಾಗಿತ್ತು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ಅಮೇರಿಕಾಗೆ ತೆರಳಿರುವ ಮೊದಲೇ ಭಾರತೀಯ ಪ್ರಜೆಗಳ ಮೊದಲ ಸುತ್ತಿನ ಗಡಿಪಾರು ನಡೆದಿದೆ. ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೋದಿ ಮೊದಲ ಬಾರಿಗೆ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಇದಕ್ಕೂ ಮುನ್ನವೇ ಭಾರತೀಯರ ಮೇಲೆ ಟ್ರಂಪ್ ಈ ಪ್ರತಾಪ ತಾಳಿದ್ದಾರೆ.












Click it and Unblock the Notifications