ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ರಾಯಭಾರ ಕಚೇರಿಯಿಂದ ವಿಶ್ವ ಭೂಮಿ ದಿನಕ್ಕಾಗಿ ವಿಡಿಯೋ ಸ್ಪರ್ಧೆ

ತಮಿಳುನಾಡು, ಪುದುಚೆರಿ, ಕೇರಳ, ಕರ್ನಾಟಕ ಮತ್ತು ಅಂಡಮಾನ್-ನಿಕೋಬಾರ್ ನಲ್ಲಿ ವಾಸವಿರುವ ಹದಿನೆಂಟು ವರ್ಷ ಮೇಲ್ಪಟ್ಟವರಿಗಾಗಿ ಭೂಮಿ ದಿನದ ಅಂಗವಾಗಿ ವಿಡಿಯೋ ಸ್ಪರ್ಧೆಯನ್ನು ಅಮೆರಿಕ ರಾಯಭಾರ ಕಚೇರಿ ಆಯೋಜಿಸಿದೆ.

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 24: ವಿಶ್ವ ಭೂಮಿ ದಿನದ ಅಂಗವಾಗಿ ಚೆನ್ನೈನಲ್ಲಿರುವ ರಾಯಭಾರ ಕಚೇರಿಯು ವಿಡಿಯೋ ಸ್ಪರ್ಧೆ ಆಯೋಜಿಸಿದೆ. ತಮಿಳುನಾಡು, ಪುದುಚೆರಿ, ಕೇರಳ, ಕರ್ನಾಟಕ ಮತ್ತು ಅಂಡಮಾನ್-ನಿಕೋಬಾರ್ ನ ಹದಿನೆಂಟು ವರ್ಷ ಮೇಲ್ಪಟ್ಟವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಪರಿಸರ ಜಾಗೃತಿ ಮೂಡಿಸುವ, ಪ್ರೇರಣೆ ನೀಡುವ 60ರಿಂದ 90 ಸೆಕೆಂಡ್ ಗಳ ಉತ್ತಮ ಗುಣಮಟ್ಟದ ವಿಡಿಯೋ ಸ್ಟೋರಿಗಳನ್ನು ಆಹ್ವಾನಿಸಲಾಗಿದೆ. ನವೀಕೃತ ಅಥವಾ ಪರ್ಯಾಯ ಇಂಧನ, ಪರಿಸರ ಸಾಕ್ಷರತೆ, ಹಸಿರು, ನೀರು ಮತ್ತು ನೀರಿನ ಸೆಲೆಗಳು ಮತ್ತು ಪ್ರಕೃತಿ ವಿಕೋಪ ನಿರ್ವಹಣೆ ವಿಷಯಗಳನ್ನು ಮುಖ್ಯವಾಗಿಟ್ಟುಕೊಂಡು ವಿಡಿಯೋಗಳನ್ನು ಮಾಡಿರಬೇಕು.[ಸುಪ್ರ ಸುಂದರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ]

US consulate general welcome entries for video contest

ಇಮೇಲ್ ಮೂಲಕ ವಿಡಿಯೋಗಳನ್ನು ಸಲ್ಲಿಸಬೇಕು. ಅಂದಹಾಗೆ ಏಪ್ರಿಲ್ 25, 2017ರ ಸಂಜೆ 5 ಗಂಟೆಯೊಳಗೆ ವಿಡಿಯೋಗಳನ್ನು ಸಲ್ಲಿಸಬೇಕು. ಇ ಮೇಲ್ ವಿಳಾಸ [email protected]. ಈ ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವುದಕ್ಕೆ ಈ ಫೇಸ್ ಬುಕ್ ಪೇಜ್ ನ ನೋಡಿ.

ಮೊದಲ ಮೂರು ಅತ್ಯುತ್ತಮ ವಿಡಿಯೋ ಎಂದು ತೀರ್ಪುಗಾರರು ಆರಿಸಿದ್ದಕ್ಕೆ ಅತ್ಯುತ್ತಮ ಬಹುಮಾನಗಳನ್ನು ನೀಡಲಾಗುವುದು. ಅಂತಿಮವಾಗಿ ಆಯ್ಕೆಯಾದ ವಿಡಿಯೋಗಳನ್ನು ರಾಯಭಾರ ಕಚೇರಿಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರ ಪಡಿಸಲಾಗುವುದು. ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು.

English summary
In commemoration of Earth Day 2017, the U.S. Consulate General Chennai has launched “Care, Conserve, Capture,” a video contest for residents of Tamil Nadu, Puducherry, Kerala, Karnataka, and Andaman and Nicobar Islands aged 18 years and above.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X