ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳು ರಾಜ್ಯಗಳ ವಿಧಾನಸಭೆ ಉಪಚುನಾವಣೆ ಫಲಿತಾಂಶ

ತಮಿಳುನಾಡು ಸೇರಿದಂತೆ ಏಳು ರಾಜ್ಯಗಳ ಉಪ ಚುನಾವಣೆ ಫಲಿತಾಂಶ ಮಂಗಳವಾರ ಹೊರಬರಲಿದೆ. ಯಾವ ರಾಜ್ಯದಲ್ಲಿ ಯಾವ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ? ಎಲ್ಲಾ ಮಾಹಿತಿಗಳ ಅಪ್ಡೇಟ್ ಇಲ್ಲಿ ಪಡೆಯಿರಿ...

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 22: ತಮಿಳುನಾಡು ಸೇರಿದಂತೆ ಏಳು ರಾಜ್ಯಗಳ ಉಪ ಚುನಾವಣೆ ಫಲಿತಾಂಶ ಮಂಗಳವಾರ ಹೊರಬರಲಿದೆ. ಯಾವ ರಾಜ್ಯದಲ್ಲಿ ಯಾವ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ? ತಮಿಳುನಾಡಿನಲ್ಲಿ ಕಮಲ ಅರಳುವುದೇ? ಎಲ್ಲಾ ಮಾಹಿತಿಗಳ ಅಪ್ಡೇಟ್ ಇಲ್ಲಿದೆ..

ಅಸ್ಸಾಂ, ಅರುಣಾಚಲಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಲ, ಮಹಾರಾಷ್ಟ್ರ, ತ್ರಿಪುರ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.
* ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ನಲ್ಲಿತೋಪೆ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ್ದಾರೆ.
* ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಎಲ್ಲ ಮೂರು ಕ್ಷೇತ್ರಗಳಲ್ಲಿ ಜಯಭೇರಿ. ಕೂಚ್ ಬೆಹಾರ್ ಮತ್ತು ಟಮ್ಲುಕ್ ಲೋಕಸಭಾ ಕ್ಷೇತ್ರಗಳಲ್ಲಿ ಪಾರ್ಥಪ್ರತಿಮ್ ರಾಯ್ ಮತ್ತು ದಿವ್ಯೇಂದು ಅಧಿಕಾರಿಗೆ ಜಯ
* ಮಧ್ಯಪ್ರದೇಶದಲ್ಲಿ ನೇಪಾನಗರದಲ್ಲಿ ಬಿಜೆಪಿ ಅಭ್ಯರ್ಥಿ ಮಂಜುದಾದುಗೆ ಜಯ.
* ಈಶಾನ್ಯ ಭಾರತದ ತ್ರಿಪುರ ರಾಜ್ಯದಲ್ಲಿ ಬಾಜರ್ಲ ಮತ್ತು ಖೋವೈ ವಿಧಾನಸಭಾ ಕ್ಷೇತ್ರಗಳು ಸಿಪಿಎಂ ಐ ಪಾಲು. ಜುಮು ಸರ್ಕಾರ್ ಮತ್ತು ಬಿಸ್ವಜಿತ್ ದತ್ತಾಗೆ ಜಯ.

ನವೆಂಬರ್ 8ರಂದು 500, 1000 ರೂಪಾಯಿ ನೋಟುಗಳು ಬ್ಯಾನ್ ಆದ ಮೇಲೆ ಹೊರ ಬರುತ್ತಿರುವ ಮೊದಲ ಚುನಾವಣೆ ಫಲಿತಾಂಶ ಇದಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಗಳಿಗೆ ಮುನ್ನುಡಿ ಬರಲಿದೆ.

Live updates: CPIM wins both Barjala and Khowai assembly seats in Tripura

6.30: ಅರುಣಾಚಾಲ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗೆ 944 ಮತಗಳ ಅಂತರದಿಂದ ಗೆಲುವು

6.15: ಎಲ್ಲಾ ಮೂರು ಅಸೆಂಬ್ಲಿ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ ಎಐಎಡಿಎಂಕೆ ಪಕ್ಷ. ಮತದಾರರಿಗೆ ಧನ್ಯವಾದ ಅರ್ಪಿಸಿದ ಸಿಎಂ ಜಯಲಲಿತಾ.

J Jayalalithaa thanks voters for victory,

3.45: ಪಶ್ಚಿಮ ಬಂಗಾಲದ ಕೂಚ್ ಬೆಹಾರ್ ಲೋಕಸಭಾ ಸ್ಥಾನ ಗೆದ್ದ ಟಿಎಂಸಿ ಅಭ್ಯರ್ಥಿ ಪಾರ್ಥ ಪ್ರತಿಮ್ ರಾಯ್.

14.15: ಮಧ್ಯಪ್ರದೇಶದ ಶಾಹ್ದೋಲ್ ಲೋಕಸಭಾ ಕ್ಷೇತ್ರ ಗೆದ್ದ ಬಿಜೆಪಿಯ ಗ್ಯಾನ್ ಸಿಂಗ್.

13.45: ತಂಜಾವೂರಿನಲ್ಲಿ 26,483 ಅಂತರದಿಂದ ಗೆಲುವು ದಾಖಲಿಸಿದ ಎಐಎಡಿಎಂಕೆ ಅಭ್ಯರ್ಥಿ.

13.30: ಪಶ್ಚಿಮ ಬಂಗಾಲ: ಟಿಎಂಸಿಯ ದಿವ್ಯೇಂದು ಅಧಿಕಾರಿ ಅವರಿಗೆ ತಮ್ಲುಕ್ ಲೋಕಸಭಾ ಕ್ಷೇತ್ರದಲ್ಲಿ ಗೆಲುವು.


13.05: ತಂಜಾವೂರು ಅಸೆಂಬ್ಲಿ ಕ್ಷೇತ್ರವನ್ನು ತನ್ನದಾಗಿಸಿಕೊಂಡ ಎಐಎಡಿಎಂಕೆ.

13.00: ತ್ರಿಪುರದಲ್ಲಿ ಬರ್ಜಾಲ ಹಾಗೂ ಖೋವಾಯಿ ಎರಡು ಅಸೆಂಬ್ಲಿ ಕ್ಷೇತ್ರವನ್ನು ಗೆದ್ದ ಸಿಪಿಐ-ಎಂ, ಕಾಂಗ್ರೆಸ್, ಟಿಎಂಸಿಗೆ ಮುಖಭಂಗ

12.05: ತಮಿಳುನಾಡಿನ ಅರವಕುರಿಚ್ಚಿ ಅಸೆಂಬ್ಲಿ ಕ್ಷೇತ್ರದ ಮರು ಎಣಿಕೆಗೆ ಆಗ್ರಹಿಸಿ ಬಿಜೆಪಿಯ ತಮಿಳಿ ಇಸೈ ಸೌಂದರ್ ರಾಜನ್ ಅವರಿಂದ ಚುನಾವಣಾ ಆಯೋಗಕ್ಕೆ ಮನವಿ.

Madhyapradesh
12.00: ಪಶ್ಚಿಮ ಬಂಗಾಲದ ಕೂಚ್ ಬೆಹಾರ್ ಲೋಕಸಭಾ ಕ್ಷೇತ್ರದಲ್ಲಿ ಟಿಎಂಸಿ ಮುನ್ನಡೆ, ಮಧ್ಯಪ್ರದೇಶದ ಶಾಹ್ದೊಲ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ.

11.55: ಅಸ್ಸಾಂನಲ್ಲಿ ಬಿಜೆಪಿಗೆ ಲಖಿಂಪುರ ಲೋಕಸಭೆ ಸ್ಥಾನ ದಕ್ಕುವ ಸಾಧ್ಯತೆ, 24,312 ಮತಗಳಿಂದ ಮುನ್ನಡೆ.

11.50: ತಮಿಳುನಾಡಿನಲ್ಲಿ ತಿರುಪರನ್ಕುಡ್ರಮ್ ಹಾಗೂ ಅರವಕುರಿಚ್ಚಿ ಅಸೆಂಬ್ಲಿ
ಕ್ಷೇತ್ರದಲ್ಲಿ ಎಐಎಡಿಎಂಕೆ ಮುನ್ನಡೆ.

11.45: ಮಧ್ಯಪ್ರದೇಶದಲ್ಲಿ ಬಿಜೆಪಿಯ ಮಂಜು ದಾದುಗೆ ಗೆಲುವು, ನೆಪಾನಗರ್ ಅಸೆಂಬ್ಲಿಯನ್ನು 40600 ಮತಗಳ ಅಂತರದಿಂದ ಗೆದ್ದ ಮಂಜು.

11.30: ಪುದುಚೇರಿಯಲ್ಲಿ ಸಿಎಂ ನಾರಾಯಣ ಸ್ವಾಮಿಗೆ 11155 ಅಂತರದ ಮತಗಳಿಂದ ಗೆಲುವು.

11.25: ಅಸ್ಸಾಂನ ಲಖಿಂಪುರ್ ಲೋಕಸಭೆ ಸ್ಥಾನ ಫಲಿತಾಂಶ: ಬಿಜೆಪಿ ಅಭ್ಯರ್ಥಿಗೆ ಭಾರಿ ಅಂತರದ ಮತಗಳಿಂದ ಮುನ್ನಡೆ.

11.20: ತಮಿಳುನಾಡಿನಲ್ಲಿ ಎರಡು ಅಸೆಂಬ್ಲಿ ಕ್ಷೇತ್ರದಲ್ಲಿ ಎಐಎಡಿಎಂಕೆ ಮುನ್ನಡೆ. ಮಧ್ಯಪ್ರದೇಶದ ನೆಪನಾಗರ್ ಅಸೆಂಬ್ಲಿಯಲ್ಲಿ ಬಿಜೆಪಿ ಮುನ್ನಡೆ

11.15: ಪಶ್ಚಿಮ ಬಂಗಾಲದಲ್ಲಿ ಕೂಚ್ ಬೆಹಾರ್ ಲೋಕಸಭಾ ಸ್ಥಾನ-ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ.

11.00: ಮಹಾರಾಷ್ಟ್ರದಲ್ಲಿ 6 ಅಸೆಂಬ್ಲಿ ಸ್ಥಾನಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ತಲಾ 2, ಎನ್ ಸಿಪಿ ಹಾಗೂ ಶಿವಸೇನಾಗೆ ತಲಾ 1 ಸ್ಥಾನ ಲಭಿಸಿದೆ.

English summary
Counting of votes began in three assembly constituencies in Tamil Nadu and in Nellithoppu constituency in Puducherry and Lok Sabha seats of Tamluk and Cooch Behar and the Assembly constituency of Monteshwar in West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X