ಜೂ.18: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಜೂ.18: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
5.45: ಮನಾಲಿಯ ಬಿಯಾಸ್ ನದಿ ದುರಂತಕ್ಕೆ ಸಂಬಂಧಿಸಿದಂತೆ ಲಾರ್ಜಿ ಜಲವಿದ್ಯುತ್ ಯೋಜನೆ ಅಧಿಕಾರಿಗಳಿಗೆ ಹಿಮಾಚಲ ಪ್ರದೇಶ ವಿದ್ಯುತ್ಛಕ್ತಿ ಮಂಡಳಿ ಕ್ಲೀನ್ ಚಿಟ್ ನೀಡಿದೆ. ಮುನ್ಸೂಚನೆ ನೀಡದೆ ನೀರು ಬಿಟ್ಟಿರುವುದಕ್ಕೆ ಸಮರ್ಥನೆ ಸಿಕ್ಕಿದ್ದು, ಎಂದಿನಂತೆ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ನಿರ್ದೇಶಕ ಪಿ.ಸಿ ನೇಗಿ ಹೇಳಿದ್ದಾರೆ.
5.30 : ಇರಾಕಿನಲ್ಲಿ 40 ಭಾರತೀಯರನ್ನು ಅಪಹರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
4.45: ದೆಹಲಿ ಸಂತ ಸ್ಟೀಫನ್ ಕಾಲೇಜಿನ ಕಟ್ ಆಫ್ ಮಾರ್ಕ್ಸ್ 98%.
3.30 : ನೆಸ್ ವಾಡಿಯಾ ತಂದೆ ನುಸ್ಲಿ ವಾಡಿಯಾ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಅವರಿಂದ ಬೆದರಿಕೆ ಕರೆ ಬಂದಿದೆ.
12.45: ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರಿಗೆ ಹಲ್ಲೆ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದೆ.
10.15: ಇರಾಕಿನಲ್ಲಿರುವ ಸುಮಾರು 18,000ಕ್ಕೂ ಅಧಿಕ ಭಾರತೀಯರ ರಕ್ಷಣೆ ಹಾಗೂ ಅಲ್ಲಿನ ಆಡಳಿತ ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಬಾಗ್ದಾದಿಗೆ ಭಾರತದ ಮಾಜಿ ರಾಯಭಾರಿ ಸುರೇಶ್ ರೆಡ್ಡಿ ತೆರಳಿದ್ದಾರೆ.
10.00 : ಇರಾಕಿನಲ್ಲಿರುವ ಭಾರತೀಯರ ರಕ್ಷಣೆಗೆ ಭಾರತ ಬದ್ಧವಾಗಿದ್ದು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ: ವಿದೇಶಾಂಗ ಸಚಿವಾಲಯ.

9.55: ಮೊಸಲ್ ನಗರದಿಂದ ಸುಮಾರು 40ಕ್ಕೂ ಅಧಿಕ ಭಾರತೀಯರು ನಾಪತ್ತೆಯಾಗಿರುವ ಸುದ್ದಿ ಬಂದಿದೆ.[ಇರಾಕಿನಲ್ಲಿ ಬಾಂಬ್ ಬಿದ್ರೆ, ಭಾರತದಲ್ಲೇಕೆ ನಡುಕ]
9.45: ರಸಗೊಬ್ಬರ ಖಾತೆ ರಾಜ್ಯ ಸಚಿವ ನಿಹಾಲ್ ಚಂದ್ ಅವರ ಮೇಲೆ ಅತ್ಯಾಚಾರ ಆರೋಪ ಹೊರೆಸಿರುವ ಮಹಿಳೆ ನ್ಯಾಯ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ,[ಮೋದಿ ಸಂಪುಟದ ಸಚಿವನಿಗೆ ಸಮನ್ಸ್]
9.30: ಮಲೇಷಿಯಾದಲ್ಲಿ ಹಡಗು ಮುಳುಗಡೆ ದುರಂತದಿಂದ ಸುಮಾರು 97ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
9.00: ಅಫ್ಘಾನಿಸ್ತಾನದ ಅಪಹರಣಕಾರರ ವಶದಲ್ಲಿರುವ ತಮಿಳುನಾಡು ಮೂಲದ ಅಲೆಕ್ಸಿಸ್ ಪ್ರೇಮ್ ಕುಮಾರ್ ರಕ್ಷಣೆಗೆ ಭಾರತ ಕ್ರಮ ಕೈಗೊಂಡಿದೆ.












Click it and Unblock the Notifications