ಅ.26: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್
ಬೆಂಗಳೂರು, ಅ.26: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
18.30: ಪ್ರಧಾನಿ ಮೋದಿ ಅವರು ನೀಡಿದ ಚಹಾಕೂಟದ ನಂತರ ಮಾತನಾಡಿದ ಮಹಾರಾಷ್ಟ್ರದ ಬಿಜೆಪಿ ಶಾಸಕ ವಿನೋದ್ ತಾವ್ಡೆ: ಶಿವಸೇನಾ ಜೊತೆ ಬಿಜೆಪಿ ಮರು ಮೈತ್ರಿಯನ್ನು ಜನತೆ ಬಯಸಿದ್ದಾರೆ. ಸಿಎಂ ಸ್ಥಾನಕ್ಕೆ ಯಾರೂ ರೇಸ್ ನಡೆಸಿಲ್ಲ. ಈ ಬಗ್ಗೆ ಹಿರಿಯ ನಾಯಕರು ನಿರ್ಧರಿಸಲಿದ್ದಾರೆ ಎಂದಿದ್ದಾರೆ.
18.10: ಸಂಸದರಿಗೆ ದೀಪಾವಳಿ ಪ್ರಯುಕ್ತ ಪ್ರಧಾನಿ ಮೋದಿ ಅವರು ನೀಡಿದ ಚಹಾಕೂಟ ಸಂಪನ್ನಗೊಂಡಿದೆ.
17.30: ಪ್ರಧಾನಿ ಮೋದಿ ಅವರು ಸಂಸದರನ್ನು ರಿಪೋರ್ಟ್ ಕಾರ್ಡ್ ತೋರಿಸಿ ಎಂದಿದ್ದಾರಂತೆ. ನಿಮ್ಮ ಪ್ರಗತಿ ಬಗ್ಗೆ ಪರಿಶೀಲನಾ ವರದಿಯನ್ನು ನೀವೆ ಒಪ್ಪಿಸಬೇಕು ಎಂದು ಮೋದಿ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
16.15: ಪ್ರಧಾನಿ ಮೋದಿ ಕರೆದಿರುವ ಚಹಾಕೂಟದಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಸೇರಿದಂತೆ ಪ್ರಮುಖ ಎನ್ ಡಿಎ ಮುಖಂಡರು ಪಾಲ್ಗೊಂಡಿದ್ದಾರೆ.
16.05: ಮೋದಿ ನಿವಾಸದಲ್ಲಿ ಸಂಸದರ ಚಹಾಕೂಟ 7 ರೇಸ್ ಕೋರ್ಸ್ ರಸ್ತೆ ನಿವಾಸದಲ್ಲಿ ಆರಂಭವಾಗಿದೆ. ಕೇಂದ್ರ ಸಚಿವ ಅನಂತ ಗೀತೆ ನೇತೃತ್ವದಲ್ಲಿ ಶಿವಸೇನಾ ಸಂಸದರು ಪಾಲ್ಗೊಂಡಿದ್ದಾರೆ.

15.30: ಸಾನಿಯಾ ಮಿರ್ಜಾ ಅವರು ಕ್ಲಾರಾ ಬ್ಲ್ಯಾಕ್ ಜೊತೆಯಾಗಿ ಡಬ್ಲ್ಯೂಟಿಎ ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಸಾನಿಯಾ ಅವರ ತಂದೆ ನೀಡಿದ ಪ್ರತಿಕ್ರಿಯೆ.
Amazing victory,one of her biggest wins as she becomes only Indian female to achieve that:Imran Mirza, Sania's father pic.twitter.com/Pynav66Dky
— ANI (@ANI_news) October 26, 2014 14.05: ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮ ಮಿತ್ರರ ಜೊತೆ ಚಹಾಕೂಟ ನಡೆಸಿದ ಬೆನ್ನಲ್ಲೇ ಎನ್ ಡಿಎ ಮಿತ್ರಪಕ್ಷಗಳ ಸಂಸದರ ಜೊತೆ ಭಾನುವಾರ ಚಹಾಕೂಟ ನಡೆಸಲಿದ್ದಾರೆ. ಅದರೆ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಆಹ್ವಾನ ಸಿಕ್ಕಿಲ್ಲ ಎಂದು ಸೇನೆ ಕಾರ್ಯಕರ್ತರು ಟೀಕಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಬಿಜೆಪಿ, ಉದ್ಧವ್ ಸಂಸದರಲ್ಲ, ಇಂದು ಸಂಸದರಿಗೆ ಮಾತ್ರ ಆಹ್ವಾನ ಸಿಕ್ಕಿದೆ ಎಂದಿದೆ. ಶಿವಸೇನಾ ಮುಖಂಡರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Uddhav Thackeray is not a MP, Sanjay Raut is and he is coming to the tea party: Krupal Tumane, Shiv Sena
— ANI (@ANI_news) October 26, 2014 12.15: ಅಸ್ಸಾಂ ಬಸ್ ದುರಂತದಲ್ಲಿ ಕರ್ನಾಟಕದ ಗದಗ್ ಮೂಲದ ಯೋಧ ಬಸವರಾಜ್(32) ಸಾವನ್ನಪ್ಪಿರುವ ಸುದ್ದಿ ಬಂದಿದೆ. ಕಳೆದ ತಿಂಗಳಷ್ಟೇ ಮದುವೆಯಾಗಿದ್ದ ಬಸವರಾಜ್ ಅವರು ಜೋಧ್ ಪುರದಲ್ಲಿ ಸೇನಾ ತರಬೇತಿ ಕ್ಯಾಂಪಿನಲ್ಲಿದ್ದರು.
12.00: ಅಕ್ರಮ ಆಸ್ತಿ ಗಳಿಕೆ ಆರೋಪ ನಿರಾಕರಿಸಿರುವ ರೈಲ್ವೆ ಸಚಿವ ಸದಾನಂದ ಗೌಡ ಅವರು ಮಂಗಳೂರಿನ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
11.45: ಹರ್ಯಾಣದಲ್ಲಿ ಸಿಎಂ ಆಗಿ ಮನೋಹರ್ ಲಾಲ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಮಾರಂಭಕ್ಕೆ ಬಂದಿದ್ದ ಅತಿಥಿಗಳ ಚಿತ್ರ
Sushma Swaraj, LK Advani, PM Modi, Amit Shah & Rajnath Singh at ML Khattar's oath taking ceremony in Panchkula pic.twitter.com/iADfLzju24
— ANI (@ANI_news) October 26, 2014 11.30: ಹರ್ಯಾಣದ ಪಂಚಕುಲದಲ್ಲಿ ಹರ್ಯಾಣದ ಪ್ರಪ್ರಥಮ ಬಿಜೆಪಿ ಮುಖ್ಯಮಂತ್ರಿಯಾಗಿ ಮನೋಹರ್ ಲಾಲ್ ಖಟ್ಟರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.[ಖಟ್ಟರ್ ವ್ಯಕ್ತಿಚಿತ್ರ ಓದಿ]
10.25: ಬೆಂಗಳೂರಿನಲ್ಲಿ ಬಿದ್ದಿರುವ ಭಾರಿ ಮಳೆಗೆ ಗೋಡೆ ಕುಸಿದು ಒಂದು ಮಗು ಹಾಗೂ ಮೂವರಿಗೆ ಗಾಯಗಳಾಗಿವೆ. ಭಾನುವಾರ ಕೂಡಾ ನಗರದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರೆದಿದೆ.
10.20: ಹರ್ಯಾಣದ ನೂತನ ಸಿಎಂ ಆಗಿ ಮನೋಹರ್ ಲಾಲ್ ಖಟ್ಟರ್ ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಸಮಾರಂಭಕ್ಕೆ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ, ಬಾಬಾ ರಾಮ್ ದೇವ್, ರಾಮ್ ರಹಿಂ ಅವರನ್ನು ಆಹ್ವಾನಿಸಲಿದ್ದಾರೆ.

10.10: ಜಾರ್ಖಂಡಿನ ಬೊಕರೊದಲ್ಲಿ ಭಾನುವಾರ ಮುಂಜಾನೆ ಅಗ್ನಿ ಆಕಸ್ಮಿಕ ಸಂಭವಿಸಿದೆ.
Fire broke out in a market in Bokaro (Jharkhand) in the early hours of morning pic.twitter.com/yG8UsPkQef
— ANI (@ANI_news) October 26, 2014 10.00: ಪ್ರಧಾನಿ ಮೋದಿ ಅವರು ಉದ್ದೇಶಿತ ಶ್ರೀಲಂಕಾ ಪ್ರವಾಸಕ್ಕೆ ಎಂಡಿಎಂಕೆ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
NDA should not follow the dangerous path of UPA,we have opposed it: MDMK Chief Vaiko on PM's proposed Sri Lanka visit pic.twitter.com/nqyaFzdI31
— ANI (@ANI_news) October 25, 2014 -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications