ಅ.13: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

ಬೆಂಗಳೂರು, ಅ.13: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

17.05: ಅಕ್ಟೋಬರ್ 15 ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್ ಗೆ 1 ರು ಇಳಿಕೆಯಾಗಲಿದೆ.

Updates India, International News in Brief Oct 13

4.45: ಆರ್ಥಿಕ ಕ್ಷೇತ್ರದ ನೊಬೆಲ್ ಪ್ರಶಸ್ತಿಗೆ ಈ ಬಾರಿ ಫ್ರೆಂಚ್ ಆರ್ಥಿಕ ತಜ್ಞ ಜೀನ್ ಟಿರೋಲೆ ಆಯ್ಕೆಯಾಗಿದ್ದಾರೆ.

12.15: ಹುಡ್ ಹುಡ್ ಚಂಡಮಾರುತದಿಂದ ಹಾನಿಯಾದ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಕೈಗೊಳ್ಳಲಿದ್ದಾರೆ. ಮೊದಲಿಗೆ ವಿಶಾಖಪಟ್ಟಣಂಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಚಂಡಮಾರುತದಿಂದ ಹಾನಿಯಾದ ಪ್ರದೇಶಗಳನ್ನು ಪರಿಶೀಲಿಸಲಿದ್ದಾರೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.

11.55: ನಾಲ್ಕು ವರ್ಷದ ಬಾಲಕಿಯೊಬ್ಬಳು ತೆರೆದ ಬೋರ್​​ವೆಲ್​ಗೆ ಬಿದ್ದಿದ್ದಾಳೆ. ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

11.30: ಸುನಂದಾ ಪುಷ್ಕರ್ ಗೆ ಸಂಬಂಧಿಸಿದ ಸ್ಥಿರಾಸ್ತಿಯಾಗಲಿ, ಚರಾಸ್ಥಿಯನ್ನಾಗಲಿ ನಾನು ಪಡೆದುಕೊಂಡಿಲ್ಲ. ನಾನು ಈ ಬಗ್ಗೆ ಆಕೆಯ ಮಗನನ್ನು ಕೇಳಿಲ್ಲ. ಸುನಂದಾ ಸಾವಿನ ಬಗ್ಗೆ ಯಾವುದೇ ತನಿಖೆ ನಡೆದರೂ ನಾನೇನು ಅಡ್ಡಿಪಡಿಸಲ್ಲ ಎಂದು ಕೇಂದ್ರ ಮಾಜಿ ಸಚಿವ ಶಶಿ ತರೂರ್ ಅವರು ಕೇರಳದ ಕೋರ್ಟಿಗೆ ಹೇಳಿದ್ದಾರೆ.

Shashi Tharoor

11.15: ಪ್ರಧಾನಿ ಮೋದಿ ಅವರು ಯುದ್ಧಪೀಡಿತ ದೇಶಗಳಲ್ಲಿ ವೃತ್ತಿ ನಿರತ ಕೇರಳ ಮೂಲದ ನರ್ಸ್ ಗಳನ್ನು ಸುರಕ್ಷಿತವಾಗಿ ಕರೆತರುವ ಜವಾಬ್ದಾರಿ ನಮ್ಮ ಮೇಲಿದೆ ಎಂದಿದ್ದಾರೆ.

11.00: ಕೇಂದ್ರದ ಮಾಜಿ ಸಚಿವ ಕಮಲ್ ನಾಥ್ ಅವರಿದ್ದ ಹೆಲಿಕಾಪ್ಟರ್ ಕಳೆದ ರಾತ್ರಿ ತುರ್ತು ಭೂಸ್ಪರ್ಶ ಮಾಡಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಗೊಂಡಿಯಾ ಎಂಬಲ್ಲಿ ಕಮಲ್ ನಾಥ್ ಅವರಿದ್ದ ಕಾಪ್ಟರ್ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಭೂಸ್ಪರ್ಶಿಸಬೇಕಾಯಿತು.

10.45: ಹುಡ್ ಹುಡ್ ಚಂಡ ಮಾರುತದಿಂದ ಉಂಟಾದ ಹಾನಿಯನ್ನು ಸದ್ಯಕ್ಕೆ ಲೆಕ್ಕ ಹಾಕಲು ಸಾಧ್ಯವಾಗುತ್ತಿಲ್ಲ. ಸುಮಾರು 2 ಸಾವಿರ ಕೋಟಿ ರು ಪರಿಹಾರ ಕೇಂದ್ರದಿಂದ ನಿರೀಕ್ಷಿಸಲಾಗಿದೆ. ಸುಮಾರು ಶೇ 70ರಷ್ಟು ಮೊಬೈಲ್ ಟವರ್ ಗಳು ಹಾನಿಗೊಳಗಾಗಿವೆ ಎಂದು ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

10.30: ಹುಡ್ ಹುಡ್ ಚಂಡಮಾರುತ ದಾಳಿಗೆ ಸಿಲುಕಿರುವ ವಿಶಾಖಪಟ್ಟಣಂ, ಶ್ರೀಕಾಕುಳಂ ನಲ್ಲಿ ಭಾರಿ ವರ್ಷಧಾರೆಯಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+