ನ.5: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ

ಬೆಂಗಳೂರು, ನ.5: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

15.15: ಎಎನ್ಎ ಸಂಪಾದಕಿ ಸ್ಮಿತಾ ಪ್ರಕಾಶ್ ಅವರಿಗೆ ನೀಡಿದ ಸಂದರ್ಶನದ ಮಾತನಾಡಿದ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಮುಂದಿನ ಸರ್ಕಾರ ಆಮ್ ಅದ್ಮಿ ಪಕ್ಷದ್ದೇ ಆಗಿರುತ್ತದೆ ಎಂದಿದ್ದಾರೆ.

15.00: ಬಹುಮತದೊಂದಿಗೆ ದೆಹಲಿಯಲ್ಲಿ ಸರ್ಕಾರ ಸ್ಥಾಪಿಸುತ್ತೇವೆ. VAT ಮುಂತಾದ ಕೆಲವು ನೀತಿಗಳನ್ನು ಸರಳಗೊಳಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

14.40: ಅಜಂಖಾನ್ ರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ಬಿಜೆಪಿಯ ಯೋಗಿ ಆದಿತ್ಯಾನಂದ್ ಹೇಳಿಕೆ ನೀಡಿದ್ದಾರೆ.


14.00: ಸಲ್ಮಾನ್ ಖಾನ್ ಅವರ ಹಿಟ್ ಅಂಡ್ ರನ್ ಕೇಸ್ ಮುಂದಿನ ವಿಚಾರಣೆಯನ್ನು ನ.24ಕ್ಕೆ ಸುಪ್ರೀಂಕೋರ್ಟ್ ಮುಂದೂಡಿದೆ.

12.50: ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಸರಣಿಯನ್ನು ಖಂಡಿಸಿ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸಿದೆ.


Updates India, International News in Brief Nov 5

12.05: ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಮುನ್ನ ಸಂಪುಟ ವಿಸ್ತರಣೆ ಕಾರ್ಯ ಮುಗಿಸಲು ಮುಂದಾಗಿದ್ದಾರೆ. ಹೀಗಾಗಿ ಮನೋಹರ್ ಪರಿಕ್ಕಾರ್ ಜೊತೆಗೆ ಯಶವಂತ್ ಸಿನ್ಹಾ ಅವರ ಪುತ್ರ ಜಯಂತ್ ಸಿನ್ಹಾ ಅವರು ಮೋದಿ ಸಂಪುಟ ಸೇರುವ ಸಾಧ್ಯತೆಯಿದೆ.

Manohar Parikkar
12.00: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕಾರ್ ಅವರನ್ನು ಕೇಂದ್ರ ರಕ್ಷಣಾ ಖಾತೆ ಸಚಿವರಾಗಿ ನೇಮಿಸಲು ಪ್ರಧಾನಿ ನರೇಂದ್ರ ಮೋದಿ ಒಲವು ತೋರಿದ್ದಾರೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ರಕ್ಷಣಾ ಖಾತೆಯನ್ನು ಹೆಚ್ಚುವರಿಯಾಗಿ ಹೊಂದಿದ್ದಾರೆ.

11.00: ಬುರ್ಡ್ವಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನನ್ನು ಆಸ್ಸಾಂನ ಹಳ್ಳಿಯಲ್ಲಿ ಎನ್ಐಎ ತಂಡ ಬಂಧಿಸಿದೆ.

Manmohan Singh

10.50: ಪ್ರಧಾನಿ ಮನಮೋಹನ್ ಸಿಂಗ್ ಅವರು ದಿ ಗ್ರಾಂಡ್ ಕಾರ್ಡನ್ ಆಫ್ ದಿ ಆರ್ಡರ್ ಆಫ್ ಪಾಲ್ವೊನಿಯಾ ಫ್ಲವರ್ಸ್' ಜಪಾನಿನ ಅತ್ಯುನ್ನ್ತತ ಗೌರವವನ್ನು ಟೋಕಿಯೋದಲ್ಲಿ ಪಡೆದುಕೊಂಡಿದ್ದಾರೆ.

10.25: ತೆಲಂಗಾಣ ಮೊದಲ ಬಜೆಟ್ ಮಂಡಿಸಲಿರುವ ಟಿಆರ್ ಎಸ್ ಪಕ್ಷ.
10.00: ಜಾರ್ಖಂಡ್ ನಲ್ಲಿ ಲಾಲೂ ಹಾಗೂ ನಿತೀಶ್ ಕುಮಾರ್ ಅವರು ಜಂಟಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+