ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣ ಕಾರು, ಸ್ವದೇಶಿ ಫೋನು, ಫ್ರಿಜ್ ಟಿವಿ ಬೆಲೆ ಇಳಿಕೆ

By Mahesh
|
Google Oneindia Kannada News

ನವದೆಹಲಿ, ಫೆ.17: ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ವಿತ್ತ ಸಚಿವರು ಬಜೆಟ್ ಮಂಡನೆಗೂ ಮುನ್ನ ಮಾಡುವ ಭಾಷಣ ರದ್ದುಪಡಿಸಲಾಗಿದೆ. ತೆಲಂಗಾಣ ಸಂಸದರ ಗಲಾಟೆ ಭೀತಿಯ ಹಿನ್ನೆಲೆಯಲ್ಲಿ ಯುಪಿಎ -2 ಕೊನೆ ಬಜೆಟ್ ಮಂಡನೆಯಾಗಿದೆ.

ವಿತ್ತ ಸಚಿವ ಪಿ ಚಿದಂಬರಂ ಅವರು 2014-15ನೇ ಸಾಲಿನ ಮಧ್ಯಂತರ ಬಜೆಟ್ ನ ಲೇಖಾನುದಾನ ಮಂಡಿಸಿದ್ದಾರೆ. ನಾಲ್ಕು ತಿಂಗಳ ಅವಧಿಗೆ ಲೇಖಾನುದಾನ ಮಂಡನೆಯಾಗಿದೆ. ಇನ್ನಷ್ಟು ಅಪ್ಡೇಟ್ ಮುಂದೆ ಓದಿ ...

ಸಮಯ 12.00: ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
* ಪರೋಕ್ಷ ತೆರಿಗೆಯಲ್ಲಿ ಬದಲಾವಣೆ ಘೋಷಿಸಿದ ಚಿದು

ಬೆಲೆ ಏರಿಕೆ/ಇಳಿಕೆ:
* ವಿದೇಶದಿಂದ ಪುರುಷರು ತರುವ 50 ಸಾವಿರ ಹಾಗೂ ಸ್ತ್ರೀಯರು ತರುವ 1 ಲಕ್ಷ ರುಪಾಯಿ ಮೌಲ್ಯದ ಚಿನ್ನಕ್ಕೆ ಸುಂಕ ವಿನಾಯ್ತಿ.
* ಅಕ್ಕಿ ಸಂಗ್ರಹಣಾ ಗೋದಾಮುಗಳ ಮೇಲಿನ ಸೇವಾ ತೆರಿಗೆ ವಿನಾಯಿತಿ
* ಬ್ಲಡ್ ಬ್ಯಾಂಕ್ ಗಳ ಸೇವಾ ತೆರಿಗೆ ವಿನಾಯಿತಿ.
* ನೋಟು ಮುದ್ರಣ ಹಾಗೂ ಇನ್ನಿತರ ಭದ್ರತಾ ಖಾಲಿ ಕಾಗದ ಪತ್ರಗಳ ದೇಶಿ ಉತ್ಪಾದನೆಗೆ ಉತ್ತೇಜನ ಶೇ5 ರಷ್ಟು ಅಬಕಾರಿ ಸುಂಕ ಇಳಿಕೆ.
* ಸ್ವದೇಶಿ ಮೊಬೈಲ್ ಫೋನ್ ಹ್ಯಾಂಡ್ ಸೆಟ್(ಮೈಕ್ರೋ ಮ್ಯಾಕ್ಸ್, ಕಾರ್ಬನ್, ಲಾವಾ..ಇತ್ಯಾದಿ), ರೆಫ್ರಿಜರೇಟರ್, ಸಾಬೂನು, ಟೆಲಿವಿಷನ್ ಬೆಲೆ ಇಳಿಕೆ
* ಅಬಕಾರಿ ಸುಂಕ ಇಳಿಕೆ: ಸಣ್ಣ ಕಾರು, ಸ್ಕೂಟರ್ ಸುಂಕ ಶೇ 12 ರಿಂದ 10ಕ್ಕೆ, ಬೈಕ್ ಸುಂಕ ಶೇ 12ರಿಂದ 8ಕ್ಕೆ ಇಳಿಕೆ
* ಕಾರುಗಳ ಮಾರಾಟ ದರ, SUV ವಾಹನಗಳ ದರ ಇಳಿಕೆ
* ಕಳೆದ ವರ್ಷ ಮಹಿಳಾ ಬ್ಯಾಂಕ್ ಸ್ಥಾಪನೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ.
* ವಿಮಾ ಮಸೂದೆ ಅನುಮೋದನೆಯಾಗದಿರುವುದು ಬೇಸರ ತರಿಸಿದೆ.

ಸಮಯ 11.50: ಆಧಾರ್ ಕಾರ್ಡ್ ಯೋಜನೆ ಜಾರಿಯಲ್ಲಿದೆ. 57-60 ಸಾವಿರ ಕೋಟಿ ರು ವಿತರಣೆಯಾಗಿದೆ.
* ಪರಿಶಿಷ್ಟ ಜಾತಿ ಉಪಯೋಗಕ್ಕಾಗಿ 48 ಸಾವಿರ ಕೋಟಿ ರು
* ಹಿಮಾಚಲ ಪ್ರದೇಶ, ಉತ್ತರಾಖಂಡ್ ರಾಜ್ಯಗಳಿಗೆ 1 ಸಾವಿರ ಕೋಟಿ ರು
* ರಕ್ಷಣಾ ಇಲಾಖೆ ಅನುದಾನ ಶೇ 10 ರಷ್ಟು ಏರಿಕೆ 2.24 ಲಕ್ಷ ಕೋಟಿ ರು
* ರಕ್ಷಣಾ ಇಲಾಖೆಯಲ್ಲಿ One rank. One pension ಜಾರಿಗೆ
* ಶಿಕ್ಷಣ ಇಲಾಖೆಗೆ 79,251 ಕೋಟಿ ರು ಮೀಸಲು
* ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿಗಾಗಿ 1000 ಕೋಟಿ ರು

Union Budget 2014-15 Highlights

ಸಮಯ 11.45: ಹೊಸ ಕೈಗಾರಿಕಾ ಕಾರಿಡಾರ್: ಚೆನ್ನೈ-ಬೆಂಗಳೂರು, ಬೆಂಗಳೂರು-ಮುಂಬೈ ಹಾಗೂ ಅಮೃತಸರ್-ಕೋಲ್ಕತ್ತಾ
* 29 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ
* ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ 21 ಸಾವಿರ ಕೋಟಿ ರು
* ಗ್ರಾಮೀಣಾಭಿವೃದ್ಧಿ ಇಲಾಖೆಗೆ 82,202 ಕೋಟಿ ರು
* ಯೋಜನೇತರ ವೆಚ್ಚ 5 ಸಾವಿರ ಕೋಟಿ ರು

ಸಮಯ 11.35 : ನಿರ್ಭಯ ನಿಧಿಗೆ 1000 ಕೋಟಿ ರು ಮೀಸಲು
*
ಸಮುದಾಯ ರೆಡಿಯೋ ಅಭಿವೃದ್ಧಿಗೆ 100 ಕೋಟಿ ರು
* ವಿಶೇಷ ಸಹಾಯ, ಸೌಲಭ್ಯಗಾಗಿ 100 ಕೋಟಿ ರು
*
ಮೂರು ಹೊಸ ಕೈಗಾರಿಕಾ ಕಾರಿಡಾರ್ ಘೋಷಣೆ

ಸಮಯ 11.27: ಮುಂದಿನ ಹತ್ತು ವರ್ಷಗಳಲ್ಲಿ ಹತ್ತು ಲಕ್ಷ ಉದ್ಯೋಗ ಅವಕಾಶ ಸೃಷ್ಟಿ ಭರವಸೆ
* ದೆಹಲಿ ಮುಂಬೈ ಕಾರಿಡಾರ್ ನಲ್ಲಿ ದೇಶದ 8 ಕಡೆ ಉತ್ಪಾದನಾ ವಲಯ ಸ್ಥಾಪನೆ
* 7 ಹೊಸ ವಿಮಾನ ನಿಲ್ದಾಣ ನಿರ್ಮಾಣ ಹಂತದಲ್ಲಿದೆ.
* ಭಾರತದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ರಫ್ತು ಪ್ರಮಾಣ ಹೆಚ್ಚಳವಾಗಿದೆ.

ಸಮಯ 11.20: ಸೀಮಾಂಧ್ರ ಭಾಗದ ಸಂಸದರ ಗದ್ದಲದ ನಡುವೆ ಚಿದಂಬರಂ ಲೇಖಾನುದಾನ ಮಂಡನೆ
* 2013-14 ರಲ್ಲಿ ಶೇ 4.6 ರಷ್ಟು ವಿತ್ತೀಯ ಕೊರತೆ
* ಚಿದಂಬರಂ ಅವರ ಕಳೆದ ಬಜೆಟ್ 30 ಪುಟಗಳಷ್ಟಿತ್ತು ಈ ಬಾರಿ 12 ರಿಂದ 18 ಪುಟಕ್ಕೆ ಸೀಮಿತ

Union Budget 2014-15 Highlights

ಚಿದು ಬಜೆಟ್ ಸಾಧ್ಯತೆಗಳು ಮಧ್ಯಂತರ ಬಜೆಟ್ ಮಂಡಿಸುವವರು ತೆರಿಗೆಗಳ ತಂಟೆಗೆ ಹೋಗುವುದಿಲ್ಲ. ನೀತಿ ನಿಯಮ ಘೋಷಣೆಗೂ ಕೈ ಹಾಕುವುದಿಲ್ಲ. 3-4 ತಿಂಗಳುಗಳ ಯೋಜನಾ ವೆಚ್ಚಕ್ಕೆ ಸಂಸತ್ತಿನ ಅನುಮೋದನೆ ಪಡೆಯಲಾಗುತ್ತದೆ. ಉಳಿದ ಜವಾಬ್ದಾರಿಯನ್ನು ಹೊಸ ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ. ಆದರೆ, ಚಿದು ಈ ಎರಡನ್ನೂ ಮಾಡುವ ನಿರೀಕ್ಷೆ ಇದೆ. [ಬಜೆಟ್ ಗೆ ಅನಂತ್ ಕುಮಾರ್ ಪ್ರತಿಕ್ರಿಯೆ]

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ಪ್ರಯತ್ನ ಮಾಡಬಹುದು. ಜತೆಗೆ ಘೋಷಿತ ಜನೋಪಯೋಗಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬಹುದು. ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪಡಿತರ ಸಬ್ಸಿಡಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡಬಹುದು. [ರೈಲ್ವೆ ಬಜೆಟ್: ಕರ್ನಾಟಕ ಕೇಳಿದ್ದೇನು? ಸಿಕ್ಕಿದ್ದೇನು?]

ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಇರುವುದರಿಂದ ಜನೋಪಯೋಗಿ ಯೋಜನೆಗಳಿಗೆ ಅನುದಾನ ಒದಗಿಸಲು ರಕ್ಷಣೆ, ಮೂಲಭೂತ ಸೌಲಭ್ಯ ಕ್ಷೇತ್ರಗಳಿಗೆ ನೀಡುತ್ತಿರುವ ಅನುದಾನ ಕಡಿತ ಮಾಡಬಹುದು. ಜತೆಗೆ ಚುನಾವಣೆಗೆ ಹೋಗುವ ಮುನ್ನ ದೇಶದ ಆರ್ಥಿಕ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬುದನ್ನು ತೋರಿಸಿಕೊಳ್ಳಲು ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಪ್ರಮಾಣವನ್ನು ತಗ್ಗಿಸಬೇಕಿದೆ.

English summary
After the disastrous rail budget last week, apprehensions are rife as to whether the minister would be allowed to present his budget this time. An interim budget is a stand by account of expenses that the government may incur till the new government is in place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X