ಕಾಶ್ಮೀರದಲ್ಲಿ ಎಟಿಎಂ ಲೂಟಿ ಮಾಡಲು ಲಷ್ಕರ್ ಪಡೆಯಿಂದ ಐನಾತಿ ಪ್ಲ್ಯಾನ್
ಶ್ರೀನಗರ, ಜುಲೈ 10 : ಜಮ್ಮು ಮತ್ತು ಕಾಶ್ಮೀರದ ಎಟಿಎಂ ಲೂಟಿ ಮಾಡಲು ಬೇರೆ ರಾಜ್ಯದ ವ್ಯಕ್ತಿಯೊಬ್ಬನನ್ನು ಲಷ್ಕರ್ ಉಗ್ರ ಸಂಘಟನೆ ಬಳಸಿಕೊಂಡಿದೆ.
ಉತ್ತರಪ್ರದೇಶದ ಮೂಲದ ಸಂದೀಪ್ ಎಂಬಾತನನ್ನು ಬಳಸಿಕೊಂಡು ಎಟಿಎಂ ಲೂಟಿ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಜಮ್ಮು ಮತ್ತು ಕಾಶ್ಮೀರದದ ಐಜಿಪಿ ಮುನೀರ್ ಖಾನ್ ಹೇಳಿದ್ದಾರೆ.

ಲಷ್ಕರ್ ಇ ತೋಯ್ಬಾದ ಉಗ್ರ ಬಷೀರ್ ಲಷ್ಕರ್ ನೆಲೆಸಿದ್ದ ಮನೆಯಲ್ಲೇ ಆರೋಪಿ ಸಂದೀಪ್ ಕೂಡಾ ವಾಸವಾಗಿದ್ದ. ಇತ್ತೀಚೆಗೆ ಲಷ್ಕರ್ ಉಗ್ರ ಬಷೀರ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಯಿತು. ಆನಂತರ ಸಂದೀಪ್ ಕೂಡಾ ನಾಪತ್ತೆಯಾಗಿದ್ದ.
ಸ್ಥಳೀಯರು ಹಾಗೂ ಪೊಲೀಸರ ಫೈಲಿನಲ್ಲಿ ಇರುವ ಶಂಕಿತರನ್ನು ಬಳಸಿಕೊಂಡು ದುಷ್ಕೃತ್ಯ ಎಸಗುವುದಕ್ಕಿಂತ ಹೊಸಬರನ್ನು ಕಣಕ್ಕಿಳಿಸುವುದು ಲಷ್ಕರ್ ಕಾರ್ಯತಂತ್ರವಾಗಿದೆ.
ಅದರಂತೆ ಸಂದೀಪ್ ಎಂಬಾತನನ್ನು ಬಳಸಿಕೊಂಡು ಎಟಿಎಂ ಲೂಟಿ ಸೇರಿದಂತೆ ಅನೇಕ ಕೃತ್ಯಗಳನ್ನು ಎಸಗಿರುವ ಸಾಧ್ಯತೆಯಿದೆ ಎಂದು ಮುನೀರ್ ಖಾನ್ ಹೇಳಿದರು. ಸದ್ಯ ಸಂದೀಪ್ ನನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.












Click it and Unblock the Notifications