UP Municipal Corporation Election: ಸಹರನ್‌ಪುರದಿಂದಲೇ ಸಿಎಂ ಯೋಗಿ ಪ್ರಚಾರ ಆರಂಭಿಸುವುದೇಕೆ?
ಲಕ್ನೋ ಏಪ್ರಿಲ್ 27: ಉತ್ತರ ಪ್ರದೇಶ ನಗರಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಲ್ಲಾ ಪಕ್ಷಗಳು ಮೊದಲ ಹಂತದ ಚುನಾವಣಾ ಪ್ರಚಾರದಲ್ಲಿ ತಮ್ಮ ಬಲ ಪ್ರದರ್ಶನ ನಡೆಸಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಹರಾನ್‌ಪುರದಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು.
ಸಿಎಂ ಯೋಗಿ ಯಾವಾಗಲೂ ತಮ್ಮ ಚುನಾವಣಾ ಪ್ರಚಾರವನ್ನು ಸಹರಾನ್‌ಪುರದಿಂದ ಏಕೆ ಪ್ರಾರಂಭಿಸುತ್ತಾರೆ? ಲೋಕಸಭೆ ಅಥವಾ ವಿಧಾನಸಭೆ ಚುನಾವಣೆ ಯಾವುದೇ ಆಗಿರಲಿ, ಯೋಗಿ ಆದಿತ್ಯನಾಥ್ ಅವರು ಸಹರಾನ್‌ಪುರದಿಂದ ಪ್ರಚಾರವನ್ನು ಆರಂಭಿಸುತ್ತಾರೆ. ಈ ಹಿಂದೆ ಅವರು 2019 ರ ಲೋಕಸಭೆ ಮತ್ತು 2022 ರ ವಿಧಾನಸಭಾ ಚುನಾವಣೆಗಳಿಗೆ ಸಹರಾನ್‌ಪುರದಿಂದ ಪ್ರಚಾರವನ್ನು ಪ್ರಾರಂಭಿಸಿದ್ದರು.

ನಂತರ ಬಿಜೆಪಿಗೆ ಭರ್ಜರಿ ಯಶಸ್ಸು ಸಿಕ್ಕಿತು. ಈ ಕ್ಷೇತ್ರದಿಂದ ಪ್ರಚಾರ ಆರಂಭಿಸಿದರೆ ಮತ್ತೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆಯಾ? ಅಥವಾ ಯೋಗಿ ಆದಿತ್ಯನಾಥ್ ಅವರಿಗೆ ಮೂಢನಂಬಿಕೆ ಇದಿಯಾ? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಸಿಎಂ ಯೋಗಿ ಅವರಿಗೆ ಸಹರಾನ್‌ಪುರದಲ್ಲಿರುವ ಶಾಕುಂಭಾರಿ ದೇವಿಯಲ್ಲಿ ಅಪಾರ ನಂಬಿಕೆ ಇದೆ. ಇದರಿಂದಾಗಿ ಅವರು ಸಹರಾನ್‌ಪುರದಿಂದಲೇ ಪ್ರಚಾರ ಆರಂಭಿಸುತ್ತಾರೆ ಎಂದು ಮುಖ್ಯಮಂತ್ರಿಯ ಆಪ್ತ ನಾಯಕರೊಬ್ಬರು ಹೇಳಿದ್ದಾರೆ. ಯೋಗಿ ಅವರು ಶಕುಂಭರಿ ದೇವಿಯ ಭಕ್ತರು. ಹೀಗಾಗಿ ಆಕೆಯ ಆಶೀರ್ವಾದದೊಂದಿಗೆ ಯಾವುದೇ ಪ್ರಮುಖ ಕೆಲಸವನ್ನು ಪ್ರಾರಂಭಿಸಲು ಅವರು ಬಯಸುತ್ತಾರೆ ಎಂದರು.
2019ರ ಲೋಕಸಭೆ ಚುನಾವಣೆ ವೇಳೆ ಸಿಎಂ ಯೋಗಿ ಸಹರಾನ್‌ಪುರದಿಂದ ಚುನಾವಣಾ ಪ್ರಚಾರ ಆರಂಭಿಸಿದ್ದರು. 2019ರ ಲೋಕಸಭೆ ಚುನಾವಣೆಗೆ ಸಹರಾನ್‌ಪುರದಿಂದ ಪ್ರಚಾರ ಆರಂಭಿಸುವುದಾಗಿ ಅವರೇ ಟ್ವೀಟ್‌ನಲ್ಲಿ ತಿಳಿಸಿದ್ದರು. ಶಾಕುಂಬರಿಯ ಆಶೀರ್ವಾದದೊಂದಿಗೆ ರಾಜ್ಯವನ್ನು ವಂಶಾಡಳಿತದ ರಾಜಕಾರಣದಿಂದ ಮುಕ್ತಗೊಳಿಸುವ ಸವಾಲನ್ನು ಸ್ವೀಕರಿಸುತ್ತೇನೆ ಎಂದು ಯೋಗಿ ಹೇಳಿದ್ದರು. 'ಮರದ ಕೆತ್ತನೆಗೆ ಹೆಸರಾದ ಈ ಜಿಲ್ಲೆಯಿಂದಲೇ ಬಿಜೆಪಿ ಚುನಾವಣಾ ಪ್ರಚಾರ ಆರಂಭಿಸುತ್ತೇನೆ. ಇಲ್ಲಿನ ಜನರು ನಮ್ಮ ಗೆಲುವನ್ನು ಖಚಿತಪಡಿಸುತ್ತಾರೆ ಎಂಬ ವಿಶ್ವಾಸ ನನಗಿದೆ' ಎಂದಿದ್ದರು.
2024ರ ಲೋಕಸಭೆ ಚುನಾವಣೆಗೂ ಮುನ್ನ ಯುಪಿಯಲ್ಲಿ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಿಜೆಪಿಗೆ ಮಹತ್ವದ್ದಾಗಿದೆ. ಕಳೆದ ನಾಗರಿಕ ಚುನಾವಣೆಯಲ್ಲಿ ಬಿಜೆಪಿ 16 ಮೇಯರ್ ಸ್ಥಾನಗಳ ಪೈಕಿ 14 ಸ್ಥಾನಗಳನ್ನು ಗೆದ್ದುಕೊಂಡಿತು.

ಬಿಜೆಪಿಯ ಉನ್ನತ ನಾಯಕತ್ವವು ಎಲ್ಲಾ 17 ನಗರ ಪಾಲಿಕೆಗಳು ಹಾಗೂ ಪುರಸಭೆಗಳು ಮತ್ತು ಪಟ್ಟಣ ಪಂಚಾಯತ್‌ಗಳಲ್ಲಿ ಗೆಲುವಿನ ಜವಾಬ್ದಾರಿಯನ್ನು ಸಿಎಂ ಯೋಗಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ಅವರಿಗೆ ವಹಿಸಿದೆ. 17 ಮಹಾನಗರ ಪಾಲಿಕೆಗಳು, 199 ಮುನ್ಸಿಪಲ್ ಕೌನ್ಸಿಲ್‌ಗಳು ಮತ್ತು 517 ನಗರ ಪಂಚಾಯತ್‌ಗಳಿಗೆ ಚುನಾವಣೆಗಳು ನಡೆಯಲಿವೆ.
ಜಿಲ್ಲೆಯಲ್ಲಿ ಶೇ.41.96ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಇನ್ನೊಂದು ಪ್ರಮುಖ ಕಾರಣವೆಂದರೆ ದಾರುಲ್ ಉಲೂಮ್ ದೇವಬಂದ್ ಇಲ್ಲೇ (ಸಹರಾನ್‌ಪುರ) ಇದೆ. ಇದು ಏಷ್ಯಾದಲ್ಲಿ ಇಸ್ಲಾಮಿಕ್ ಕಲಿಕೆಯ ಪ್ರಮುಖ ಕೇಂದ್ರಗಳ ಸ್ಥಾನಮಾನವನ್ನು ಹೊಂದಿದೆ. ದಾರುಲ್ ಉಲೂಮ್ ದಿಯೋಬಂದ್‌ನಲ್ಲಿ ಕಲಿಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು ದೇಶಾದ್ಯಂತ ಮತ್ತು ವಿದೇಶಗಳಲ್ಲಿಯೂ ಹರಡಿಕೊಂಡಿದ್ದಾರೆ.

ರಾಜಕೀಯದಿಂದ ಅಂತರ ಕಾಯ್ದುಕೊಂಡರೂ ನಾಯಕರು ದಾರುಲ್ ಉಲೂಮ್ ಗೆ ಬಂದು ಹೋಗುತ್ತಿರುವುದಕ್ಕೆ ಇದೇ ಕಾರಣ. ಮೂರನೆಯ ಕಾರಣ ಶಕುಂಭರಿ ದೇವಿಯ ಸಿದ್ಧಪೀಠ. ಯೋಗಿ ಸದಾ ಈ ಸಿದ್ಧ ಪೀಠದಿಂದಲೇ ಚುನಾವಣಾ ಪ್ರಚಾರ ಆರಂಭಿಸುತ್ತಾರೆ.












Click it and Unblock the Notifications