ಉಪ್ರ ಎರಡನೇ ಹಂತದ ವಿಧಾನಸಭೆ ಚುನಾವಣೆಯಲ್ಲಿ 256 ಕೋಟ್ಯಧೀಶರು

By: ವಿಕಾಸ್ ನಂಜಪ್ಪ
Subscribe to Oneindia Kannada

ಲಖನೌ, ಫೆಬ್ರವರಿ 10: ಉತ್ತರ ಪ್ರದೇಶದಲ್ಲಿ ನಡೆಯುವ ಎರಡನೇ ಹಂತದ ವಿಧಾನ ಸಭೆ ಚುನಾವಣೆ ಕಣದಲ್ಲಿ 256 ಕೋಟ್ಯಧಿಪತಿಗಳಿದ್ದಾರೆ ಮತ್ತು 107 ಅಭ್ಯರ್ಥಿಗಳು ಅಪರಾಧ ಹಿನ್ನೆಲೆ ಇರುವವರು. ಫೆಬ್ರವರಿ 15ರಂದು ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ 719 ಮಂದಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ನಿಂದ ವರದಿಯೊಂದನ್ನು ಸಿದ್ಧಪಡಿಸಿದ್ದು, ಅಪರಾಧ ಹಿನ್ನೆಲೆಯಿರುವ 107 ಅಭ್ಯರ್ಥಿಗಳ ಪೈಕಿ 84 ಮಂದಿ ವಿರುದ್ಧ ಗಂಭೀರ ಆರೋಪಗಳಿವೆ. ಅಪರಾಧ ಹಿನ್ನೆಲೆ ಬಗ್ಗೆ ಇರುವ ಸಂಖ್ಯೆಗಳನ್ನು ವರದಿ ಬಹಿರಂಗಪಡಿಸಿದ್ದು, ಅದು ಹೀಗಿದೆ.[ಉತ್ತರಪ್ರದೇಶ ಚುನಾವಣಾ ಸಮೀಕ್ಷೆ: ಜಾತಿ ಲೆಕ್ಕಾಚಾರದಲ್ಲಿ ಯಾರು ಮುಂದೆ?]

uttar pradesh

* ಒಟ್ಟು 719 ಅಭ್ಯರ್ಥಿಗಳಲ್ಲಿ 107 (ಶೇ 15) ಅಭ್ಯರ್ಥಿಗಳು ತಮ್ಮ ವಿರುದ್ಧ ಇರುವ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ

* 84 (ಶೇ 12) ಅಭ್ಯರ್ಥಿಗಳು ಗಂಭೀರ ಪ್ರಕರಣಗಳನ್ನು ಘೋಷಿಸಿದ್ದು, ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧ ಅಪರಾಧ ಎಸಗಿದ ಪ್ರಕರಣಗಳಿವೆ

* 6 ಅಭ್ಯರ್ಥಿಗಳ ವಿರುದ್ಧ ಕೊಲೆ ಪ್ರಕರಣ ಇದೆ

* 15 ಅಭ್ಯರ್ಥಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ಇದೆ (ಭಾರತೀಯ ದಂಡ ಸಂಹಿತೆ -307)

* 5 ಅಭ್ಯರ್ಥಿಗಳ ವಿರುದ್ಧ ಹಲ್ಲೆ, ಮಹಿಳೆಯರ ವಿರುದ್ಧದ ಕ್ರಿಮಿನಲ್ ಪ್ರಕರಣ (ಭಾರತೀಯ ದಂಡ ಸಂಹಿತೆ 354) ಇದೆ

* 7 ಅಭ್ಯರ್ಥಿಗಳ ವಿರುದ್ಧ ಹಭಕ್ಕಾಗಿ ಅಪಹರಣ ಮತ್ತಿತರ ಪ್ರಕರಣ ಇದೆ (ಭಾರತೀಯ ದಂಡ ಸಂಹಿತೆ 364, 364A, 365)

* ಬಿಜೆಪಿಯಿಂದ 16, ಬಿಎಸ್ ಪಿ 25, ಎಸ್ ಪಿ 6, ಕಾಂಗ್ರೆಸ್ 18 ಮತ್ತು ಆರ್ ಎಲ್ ಡಿಯಿಂದ 6 ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯವರು ಕಣದಲ್ಲಿದ್ದಾರೆ.

* 15 ರೆಡ್ ಅಲರ್ಟ್ ವಿಧಾನಸಭೆ ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಮೂರು ಅಥವಾ ಮೂರಕ್ಕಿಂತ ಹೆಚ್ಚು ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯವರು.

* ಇನ್ನು 256 ಕೋಟ್ಯಧಿಪತಿಗಳು ಸ್ಪರ್ಧಿಸುತ್ತಿದ್ದಾರೆ

* ಬಿಎಸ್ ಪಿ 58, ಬಿಜೆಪಿ 50, ಎಸ್ ಪಿ 45, ಕಾಂಗ್ರೆಸ್ 13 ಹಾಗೂ ಆರ್ ಎಲ್ ಡಿಯಿಂದ 6 ಕೋಟ್ಯಧೀಶ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

* ಉತ್ತರ ಪ್ರದೇಶದ ಎರಡನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಸರಾಸರಿ ಆಸ್ತಿ 2.01 ಕೋಟಿ.

* ಮೂವರು ಅಭ್ಯರ್ಥಿಗಳು ತಮ್ಮ ಬಳಿ ಯಾವುದೇ ಆಸ್ತಿಯಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The second phase of the Uttar Pradesh Assembly elections 2017 would witness 256 crorepatis and 107 candidates with a criminal background contesting. 719 candidates have been analysed from 92 political parties who will be contesting the second phase of the UP assembly elections on February 15.
Please Wait while comments are loading...