ಕಮ್ಯೂನಿಸ್ಟರು ರಾಜಕೀಯ ಕೊಲೆಗಳನ್ನು ನಿಲ್ಲಿಸಬೇಕು : ಆದಿತ್ಯನಾಥ್

ಕಣ್ಣೂರು, ಅಕ್ಟೋಬರ್ 4: ಕೇರಳ ರಾಜ್ಯ ಬಿಜೆಪಿ ಘಟಕದ ವತಿಯಿಂದ ನಡೆಯುತ್ತಿರುವ ಜನರಕ್ಷಾ ಯಾತ್ರೆಯಲ್ಲಿ ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಂಡಿದ್ದಾರೆ.

ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆ ಖಂಡಿಸಿ ಈ ಜನರಕ್ಷಾ ಪಾದಯಾತ್ರೆ ನಡೆಯುತ್ತಿದೆ. ಇದರಲ್ಲಿ ಕೇಚೇರಿಯಿಂದ ಕಣ್ಣೂರುವರೆಗಿನ ಪಾದಯಾತ್ರೆಯ ನೇತೃತ್ವವನ್ನು ಯೋಗಿ ವಹಿಸಿದ್ದಾರೆ.

UP CM Yogi Adityanath takes part in Jana Raksha Yatra in Kannur

ನಿನ್ನೆ ರಾತ್ರಿ ಲಕ್ನೋದಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿ ನಂತರ ರಸ್ತೆ ಮಾರ್ಗವಾಗಿ ಕೇರಳಕ್ಕೆ ತೆರಳಿದ ಯೋಗಿ ಆದಿತ್ಯನಾಥ್ ಇಂದು ಬೆಳಿಗ್ಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಪಾದಯಾತ್ರೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, "ಕೇರಳ, ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿರುವ ಕಮ್ಯೂನಿಸ್ಟ್ ಸರಕಾರಗಳಿಗೆ ಈ ಯಾತ್ರೆ ಕನ್ನಡಿ ಹಿಡಿದಂತಿದೆ. ಅವರು ರಾಜಕೀಯ ಹತ್ಯೆಗಳಿಗೆ ಕೊನೆ ಹಾಡಲೇಬೇಕಾಗಿದೆ," ಎಂದು ಕಮ್ಯೂನಿಸ್ಟರನ್ನು ಒತ್ತಾಯಿಸಿದರು.

"ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಅವಕಾಶವಿಲ್ಲ. ಆದರೆ ಇಲ್ಲಿ ರಾಜಕೀಯ ಕೊಲೆಗಳು ಮುಂದುವರಿದಿವೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಚೇರಿಯಿಂದ ಆರಂಭವಾದ ಪಾದಯಾತ್ರೆ ಇದೀಗ ಕಣ್ಣೂರಿನತ್ತ ಹೊರಟಿದೆ. ಇನ್ನು ನಿನ್ನೆ ಪಯ್ಯನೂರಿನಲ್ಲಿ ಪಾದಯಾತ್ರೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚಾಲನೆ ನೀಡಿದ್ದರು. 15 ದಿನಗಳ ಕಾಲ ನಡೆಯಲಿರುವ ಪಾದಯಾತ್ರೆ ಅಕ್ಟೋಬರ್ 17ರಂದು ಕಣ್ಣೂರಿನಲ್ಲಿ ಸಮಾರೋಪಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+