Get Updates
Get notified of breaking news, exclusive insights, and must-see stories!

ಯುಪಿಯಲ್ಲಿ ಎಎಪಿ ಚಮತ್ಕಾರ, 11 ಸ್ಥಾನಗಳಲ್ಲಿ ಅಚ್ಚರಿಯ ಗೆಲುವು

ಲಕ್ನೋ, ಡಿಸೆಂಬರ್ 2: ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳಂಥ ದೊಡ್ಡ ದೊಡ್ಡ ಪಕ್ಷಗಳೇ ಮಕಾಡೆ ಮಲಗಿದ್ದರೆ ಎಎಪಿ ಅಚ್ಚರಿಯ ಫಲಿತಾಂಶ ದಾಖಲಿಸಿದೆ.

ಸದ್ದಿಲ್ಲದೆ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿ ರಾಜಕೀಯ ಪಂಡಿತರನ್ನು ಅಚ್ಚರಿಯಲ್ಲಿ ಕೆಡವಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಒಂದು ನಗರ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ಗೆದ್ದಿದ್ದರೆ, ಇಬ್ಬರು ಕಾರ್ಪೊರೇಟರ್ ಗಳು ಮಹಾನಗರ ನಗರ ಪಾಲಿಕೆ ಚುಣಾವಣೆಯಲ್ಲಿ ಗೆದ್ದಿದ್ದಾರೆ. ಇನ್ನು 8 ಜನ ನಗರ ಪಂಚಾಯತ್ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ.

UP Civic Poll results: Kejriwal's AAP wins 11 seats, makes headway silently

ಯಾರೊಬ್ಬರೂ ನಿರೀಕ್ಷೆ ಮಾಡದ ರೀತಿಯಲ್ಲಿ ಎಎಪಿ ಚಮತ್ಕಾರ ತೋರಿದ್ದು ರಾಷ್ಟ್ರೀಯ ಪಕ್ಷಗಳನ್ನೇ ಹುಬ್ಬೇರಿಸಿದೆ. ಜತೆಗೆ ಎಎಪಿ ಪಾಲಿಗೆ ಉತ್ತರ ಪ್ರದೇಶದಲ್ಲಿ ಪಕ್ಷ ಬೆಳೆಸುವ ಉತ್ಸಾಹವನ್ನು ಮತ್ತಷ್ಟು ವೃದ್ಧಿಸಿದೆ.

ಉತ್ತರ ಪ್ರದೇಶದಲ್ಲಿ ಖಾತೆ ತೆರೆದಿರುವ ಎಎಪಿ ಗುಜರಾತಿನಲ್ಲೂ ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಇಲ್ಲೂ ಖಾತೆ ತೆರೆಯಬಹುದು ಎಂಬ ನಂಬಿಕೆ 'ಪೊರಕೆ' ಪಕ್ಷದ ನಾಯಕರಲ್ಲಿ ಮನೆ ಮಾಡಿದೆ.

ಇನ್ನು ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ್ದು 16ರಲ್ಲಿ 14 ಮೇಯರ್ ಸ್ಥಾನಗಳನ್ನು ಗೆದ್ದುಕೊಂಡಿದೆ. ಉಳಿದೆರಡು ಸ್ಥಾನಗಳು ಬಿಎಸ್ಪಿ ಪಾಲಾಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+