ಯುಪಿ ಪಾಲಿಕೆ ಫಲಿತಾಂಶ: 198 ಪೈಕಿ 79ರಲ್ಲಿ ಬಿಜೆಪಿ ಮುನ್ನಡೆ

Posted By:
Subscribe to Oneindia Kannada

ಲಕ್ನೋ, ಡಿಸೆಂಬರ್ 01: ಯೋಗಿ ಆದಿತ್ಯನಾಥ್ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಕ್ಕೆ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದು, ಶುಕ್ರವಾರದಂದು ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಇದರ ನೇರ್ ಅಪ್ಡೇಟ್ಸ್ ಇಲ್ಲಿದೆ....

26 ಜಿಲ್ಲೆಗಳ 652 ಪಾಲಿಕೆಗಳಿಗೆ ಮೂರು ಸುತ್ತಿನಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ ಶೇ 53ರಷ್ಟು, ನವೆಂಬರ್ 22 ಹಾಗೂ 26ರಂದು ಶೇ52.49ರಷ್ಟು ಹಾಗೂ ಶೇ 49.3ರಷ್ಟು ಮತದಾನ ನಡೆದಿತ್ತು.

UP Civic Poll counting LIVE: BJP leading in Aligarh, BSP second

ಉತ್ತರಪ್ರದೇಶದ ನಗರ ಪಾಲಿಕೆ ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ಸ್ :

15.00: 16 ನಗರ ಪಾಲಿಕೆ: 10 ಬಿಜೆಪಿ ಅಭ್ಯರ್ಥಿ ಗೆಲುವು, 4ರಲ್ಲಿ ಮುನ್ನಡೆ

13.25: ಮುನ್ಸಿಪಲ್ ಕೌನ್ಸಿಲ್ (ನಗರ ಪಾಲಿಕೆ) ಸ್ಥಾನಮಾನ: 198 ಸೀಟುಗಳು
ಬಿಜೆಪಿ 79
ಬಿಎಸ್ ಪಿ 41
ಎಸ್ ಪಿ: 47
ಕಾಂಗ್ರೆಸ್ : 11
ಇತರೆ: 20

13.00 : ಬರೇಲಿ ಮುನ್ಸಿಪಲ್ ಕಾರ್ಪೊರೇಷನ್ (ನಗರ ನಿಗಮ): ಬಿಜೆಪಿ ಅಭ್ಯರ್ಥಿ ಉಮೇಶ್ ಗೌತಮ್ ಅವರು 12,752 ಮತಗಳಿಂದ ಮುನ್ನಡೆ ಪಡೆದುಕೊಂಡಿದ್ದಾರೆ.

12.45: ಅಮೇಥಿ ಮುನ್ಸಿಪಲ್ ಕೌನ್ಸಿಲ್ (ನಗರ ಪಾಲಿಕೆ) : ಸಮಾಜವಾದಿ ಪಕ್ಶದ ಅಭ್ಯರ್ಥಿ ಗೌರಿಗಂಜ್ ನಲ್ಲಿ ಮುನ್ನಡೆ, ಬಿಜೆಪಿ ಜಾಯಿಸ್ ನಲ್ಲಿ ಮುನ್ನಡೆ
12.30:
ಬಿಜೆಪಿ ಅಭ್ಯರ್ಥಿ ಮೀರಾ ಆಗರವಾಲ್ ಅವರು ಲಕ್ಕಿ ಡ್ರಾ ಮೂಲಕ ವಿಜೇತೆ. ಮಥುರಾದ ವಾರ್ಡ್ 56ರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ(874ಮತಗಳು) ಸಾಧಿಸಿದ್ದವು.

11.10:16 ಪಾಲಿಕೆಗಳಲ್ಲಿ ಬಿಜೆಪಿಗೆ 13ರಲ್ಲಿ ಮುನ್ನಡೆ

10.05: ಬದಲಾದ ಟ್ರೆಂಡ್: ಮೀರತ್ ನಲ್ಲಿ ಬಿಎಸ್ ಪಿ ಮುನ್ನಡೆ
10.00 : ಗೋರಖ್ ಪುರ ಮೇಯರ್ ಸ್ಥಾನದ ಬಿಜೆಪಿ ಅಭ್ಯರ್ಥಿ ಸೀತಾರಮ್ ಜೈಸ್ವಾಲ್ ಮುನ್ನಡೆ
9.50: ಬಿಜೆಪಿ ಮುನ್ನಡೆ: ವಾರಣಾಸಿ, ಅಲಹಾಬಾದ್, ಲಕ್ನೋ, ಕಾನ್ಪುರ್, ಗಾಜಿಯಬಾದ್, ಮೀರತ್, ಗೋರಖ್ ಪುರ್, ಮೊರಾದಾಬಾದ್, ಬರೇಲಿ, ಅಯೋಧ್ಯಾ
9.45: ಬಿಎಸ್ಪಿ ಮುನ್ನಡೆ: ಫಿರೋಜಾಬಾದ್, ಸರಹನಪುರ್, ಅಲಿಘರ್, ಝಾನ್ಸಿ, ಆಗ್ರಾ
9.30: ಮಥುರಾದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Counting of votes to begins
English summary
The crucial verdict in the UP civic polls 2017 will be out today. Counting in the state of Uttar Pradesh which is ruled by the Bharatiya Janata Party will be a closely watched affair.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ