ಸಚಿವ ಖರ್ಗೆ ಆತುರಾತುರದ ಬಜೆಟ್ ಮುಗಿದೇ ಹೋಯ್ತು!
ನವದೆಹಲಿ, ಫೆ.12- ಹಿರಿಯ ಕಾಂಗ್ರೆಸ್ಸಿಗ, ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂದು ರೈಲ್ವೆ ಬಜೆಟ್ ಮಂಡಿಸಿದ್ದಾರೆ. ಖರ್ಗೆ ಅವರಿಗೆ ಇದು ಚೊಚ್ಚಲ ರೈಲ್ವೆ ಬಜೆಟ್. ಈ ತಾತ್ಕಾಲಿಕ ಬಜೆಟ್ (ಲೇಖಾನುದಾನ) ಜೂನ್ ತಿಂಗಳವರೆಗೂ ಚಾಲ್ತಿಯಲ್ಲಿರುತ್ತದೆ.[ಮಲ್ಲಿಕಾರ್ಜುನ ಖರ್ಗೆ ಕೊಡುಗೆ : 72 ಹೊಸ ರೈಲು]
ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿ ಪವನ್ ಕುಮಾರ್ ಬನ್ಸಾಲ್ ಅವರು ರಾಜೀನಾಮೆ ನೀಡಿದ ಬಳಿಕ ಗುಲ್ಬರ್ಗಾದವರಾದ ಖರ್ಗೆ ಅವರು 2013 ಜೂನ್ ತಿಂಗಳಲ್ಲಿ ರೈಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಂದಹಾಗೆ ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕು ಸಚಿವರು ರೈಲ್ವೆ ಬಜೆಟ್ ಮಂಡಿಸಿದ್ದಾರೆ. ಅಲ್ಲಿಗೆ ಯುಪಿಎ-2 ಆಡಳಿತದಲ್ಲಿ 5 ವರ್ಷಕ್ಕೆ 5 ಮಂದಿ ಬಜೆಟ್ ಮಂಡಿಸಿದಂತಾಗಿದೆ.

[ಚುನಾವಣೆ ಹಳಿಯ ಮೇಲೆ ಓಡುವ ಖರ್ಗೆ ರೈಲು]
[ರೈಲ್ವೆ ಬಜೆಟ್ ನಲ್ಲಿ ಕರ್ನಾಟಕದ ನಿರೀಕ್ಷೆಗಳೇನು?]
ಬಜೆಟ್ ಮುಖ್ಯಾಂಶ ಹೀಗಿದೆ:
* 12 ಗಂಟೆಗೆ ಬಜೆಟ್ ಭಾಷಣ ಆರಂಭವಾಗಿದ್ದು, 30 ನಿಮಿಷದಲ್ಲೇ ಮುಗಿಯುವ ಅಂದಾಜಿದೆ.
* ತೆಲಂಗಾಣ ರಚನೆ ವಿಚಾರವಾಗಿ ಲೋಕಸಭೆಯಲ್ಲಿ ಭಾರಿ ಗದ್ದಲ-ಗೊಂದಲ ಏರ್ಪಟ್ಟಿದೆ.
* ಸಚಿವ ಖರ್ಗೆ ಆತುರಾತುರವಾಗಿ ಬಜೆಟ್ ಮಂಡಿಸುತ್ತಿದ್ದಾರೆ. ತೆಲಂಗಾಣ ವಿಷಯವಾಗಿ ರಾಜ್ಯಸಭೆ ಈಗಾಗಲೇ ಮುಂದೂಡಲ್ಪಟ್ಟಿದೆ.
* ಸಚಿವ ಖರ್ಗೆ ಆತುರಾತುರ ಬಜೆಟ್ ಮುಗಿದೇ ಹೋಯ್ತು!
* ಯುಪಿಎ-2 ಸರಕಾರದ ಕೊನೆಯ ಅಧಿವೇಶನದಲ್ಲಿ 8ನೇ ದಿನವೂ ತೆಲಂಗಾಣ ಗದ್ದಲ.
* ಲೋಕಸಭೆ ಕಲಾಪ ನಾಳೆಗೆ ಮುಂದೂಡಿಕೆ.
* ಮುಖ್ಯವಾಗಿ ಪ್ರಯಾಣ ದರ ಏರಿಕೆ ಇಲ್ಲ.
* 17 ಹೊಸ ಹವಾನಿಯಂತ್ರಿ ರೈಲುಗಳ ಘೋಷಣೆ.
* 68 ಹೊಸ ರೈಲುಗಳ ಘೋಷಣೆ.
* ಸಚಿವರ ಪ್ರಾಸ್ತಾವಿಕ ಭಾಷಣ ನಂತರ ಬಜೆಟ್ ಪ್ರತಿಗಳ ಹಂಚಿಕೆ.
* ರೈಲ್ವೆ ಬಜೆಟ್ ಪ್ರತಿಗಳನ್ನು ಹರಿದೆಸೆದ ಸೀಮಾಂಧ್ರ ಪ್ರದೇಶದ ಸಂಸದರು.
* 'ಕಳಬೇಡ, ಕೊಲ ಬೇಡ, ಹುಸಿಯ ನುಡಿಯಲು ಬೇಡ' ಎಂಬ ಬಸವಣ್ಣನವರ ವಚನ ಪಠಿಸಿದ ಖರ್ಗೆ.


Click it and Unblock the Notifications
