India & China: ಚೀನಾ ವಿರುದ್ಧ ಕಿರಣ್ ರಿಜಿಜು ತೀವ್ರ ಆಕ್ರೋಶ
ಚೀನಾದ ಹ್ಯಾಂಗ್‌ಝೌನಲ್ಲಿ ಆಯೋಜಿಸಿರುವ 19ನೇ ಏಷ್ಯನ್ ಗೇಮ್ಸ್‌ಗೆ, ಅರುಣಾಚಲದ ಕ್ರೀಡಾಪಟುಗಳಿಗೆ ಪ್ರವೇಶ ನಿರಾಕರಿಸಿರುವ ಆರೋಪ ಹಿನ್ನೆಲೆ ಭಾರತ ಆಕ್ರೋಶ ಹೊರ ಹಾಕಿದೆ. ಇದೇ ವೇಳೆ ಚೀನಾ ಈ ವಿಚಾರದಲ್ಲಿ ಬೇಕು ಅಂತಲೇ ತಾರತಮ್ಯ ಮಾಡಿದೆ ಎಂಬ ಆರೋಪವೂ ಕೇಳಿಬಂದಿದೆ. ಈಗ ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಚೀನಾ ವಿರುದ್ಧ ಗರಂ ಆಗಿದ್ದಾರೆ.
ಈಗಾಗಲೇ ಚೀನಾ ಮತ್ತು ಭಾರತ ಸಂಬಂಧ ಗಡಿ ವಿವಾದದ ಕಾರಣಕ್ಕೆ ಹಳಸಿದೆ. ಈ ಮಧ್ಯೆ ಮತ್ತೊಂದು ವಿವಾದ ಕೂಡ ಎರಡೂ ದೇಶಗಳ ಸಂಬಂಧಕ್ಕೆ ಅಡ್ಡಿಯಾಗುವ ಮುನ್ಸೂಚನೆ ನೀಡಿದೆ. ಅದರಲ್ಲೂ ಈಗಾಗಲೇ ಕೇಂದ್ರ ಸಚಿವ ಅನುರಾಗ್ ಠಾಕೂರ್, ಚೀನಾ ಪ್ರವಾಸ ರದ್ದು ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಪ್ರತಿಕ್ರಿಯೆ ಕೂಡ ಗಮನ ಸೆಳೆದಿದೆ. ಹಾಗೇ ಚೀನಾ & ಭಾರತದ ಸಂಬಂಧ ಮತ್ತೆ ಕೈಮೀರಿ ಹೋಗುವ ಸೂಚನೆ ಸಿಕ್ಕಂತಾಗಿದೆ.

ಕೇಂದ್ರ ಸಚಿವ ರಿಜಿಜು ಹೇಳಿದ್ದೇನು?
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಚೀನಾ ನಡೆದ ಖಂಡಿಸಿ ಕಿರಣ್ ರಿಜಿಜು ಈಗ ಪೋಸ್ಟ್ ಹಾಕಿದ್ದು, ಅರುಣಾಚಲ ಪ್ರದೇಶ ವಿವಾದಿತ ಪ್ರದೇಶವಲ್ಲ. ಭಾರತದ ಅವಿಭಾಜ್ಯ ಅಂಗ ಎಂದು ಹೇಳುವ ಮೂಲಕ ಚೀನಾಗೆ ತಿರುಗೇಟು ನೀಡಿದ್ದಾರೆ. ಹಾಗೇ ಚೀನಾದ ಕ್ರಮವು ಕ್ರೀಡಾಸ್ಪೂರ್ತಿ & ಏಷ್ಯನ್ ಗೇಮ್ಸ್ ಶಿಷ್ಟಾಚಾರ ನೀತಿ ಉಲ್ಲಂಘನೆಯಾಗಿದೆ. ಇದು ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುವ ಸದಸ್ಯ ದೇಶಗಳ ವಿರುದ್ಧ ತಾರತಮ್ಯ ಧೋರಣೆ ಎಂದು ಕೂಡ ರಿಜಿಜು ಆರೋಪ ಮಾಡಿದ್ದಾರೆ.
I strongly condemn this act by China to deny visas to our Wushu Athletes from Arunachal Pradesh who were to participate in the 19th Asian Games in Hangzhou. This violates both the spirit of Sports & also the Rules governing the conduct of Asian Games, which explicitly prohibits…
— Kiren Rijiju (@KirenRijiju) September 22, 2023
ಚೀನಾ ವಿರುದ್ಧ ಕ್ರಮಕ್ಕೆ ಆಗ್ರಹ
ಅರುಣಾಚಲ ಪ್ರದೇಶದ ಮೂವರು ವುಶು ಅಥ್ಲೀಟ್‌ಗಳಿಗೆ ವೀಸಾ ನಿರಾಕರಣೆ ಮಾಡಿರುವ ಚೀನಾದ ಕ್ರಮವನ್ನು ಬಲವಾಗಿ ಖಂಡಿಸುವುದಾಗಿ ಅವರು ಹೇಳಿರುವ ಅವರು, ಚೀನಾದ ನಿಲುವನ್ನು ಅರುಣಾಚಲ ಪ್ರದೇಶದ ಜನ ವಿರೋಧಿಸುತ್ತಾರೆ. ಚೀನಾ ನಡೆಯ ವಿರುದ್ಧ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಕೇಂದ್ರ ಸಚಿವ ಕಿರಣ್ ರಿಜಿಜು ಒತ್ತಾಯಿಸಿದ್ದಾರೆ. ಈ ಮೂಲಕ ಜಿ20 ಶೃಂಗಸಭೆಯ ಬೆನ್ನಲ್ಲೇ ಭಾರತ ಮತ್ತು ಚೀನಾ ಸಂಬಂಧ ಮತ್ತಷ್ಟು ಹದಗೆಡುತ್ತಿದೆ.
ಇನ್ನು ಜಿ20 ಶೃಂಗಸಭೆಗೂ ಚೀನಾ ಅಧ್ಯಕ್ಷರು ಬಂದಿರಲಿಲ್ಲ, ಇದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಬ್ರಿಕ್ಸ್ ಶೃಂಗಸಭೆಯ ವೇಳೆ ಭಾರತ ಮತ್ತು ಚೀನಾ ನಡುವೆ ನಡೆದ ಮಾತುಕತೆ ವಿಚಾರ ಕೂಡ ವಿವಾದ ಹುಟ್ಟುಹಾಕಿತ್ತು. ಮಾತುಕತೆಗೆ ನಾವು ಕರೆದಿಲ್ಲ, ಅವರೇ ಕರೆದಿದ್ದು ಎಂದು ಎರಡೂ ರಾಷ್ಟ್ರಗಳ ನಡುವೆ ಆರೋಪ & ಪ್ರತ್ಯಾರೋಪ ನಡೆದಿತ್ತು. ಈಗ ನೋಡಿದರೆ ಭಾರತದ ಕ್ರೀಡಾಪಟುಗಳಿಗೆ ವೀಸಾದ ನಿರಾಕರಣೆ ದೊಡ್ಡ ಚರ್ಚೆ ಹುಟ್ಟುಹಾಕಿದೆ.












Click it and Unblock the Notifications