ಆಟೋ ಬಿಡಿಭಾಗ; ಸ್ವಾವಲಂಬನೆ ಸಾಧಿಸಲು ಉದ್ಯಮಕ್ಕೆ ಸಲಹೆ ನೀಡಿದ ಹೆಚ್.ಡಿ.ಕುಮಾರಸ್ವಾಮಿ
ನವದೆಹಲಿ, ಸೆಪ್ಟೆಂಬರ್ 09: ಆಟೋ ಬಿಡಿಭಾಗಗಳ ಮೇಲೆ ಇತರೆ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅಟೋ ಉದ್ಯಮಕ್ಕೆ ಸಲಹೆ ನೀಡಿದ ಕೇಂದ್ರ ಭಾರೀ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಈ ನಿಟ್ಟಿನಲ್ಲಿ ಸ್ವಾವಲಂಬನೆ ಸಾಧಿಸಲು ದೊಡ್ಡ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು.
ನವದೆಹಲಿಯಲ್ಲಿ ACMA (The Automotive Component Manufacturers Association of India) 64ನೇ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು; ಅಟೋ ಉದ್ಯಮ ಬಿಡಿಭಾಗಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲೇಬೇಕು, ಹಾಗೂ ಫೇಮ್ 3 (FAME-III) ಜಾರಿಗೆ ಬರುವ ತನಕ EMPS (Electric Mobility Promotion Scheme) ಯೋಜನೆಯನ್ನು ಮುಂದುವರಿಸಲಾಗುವುದು ಎಂದರು.

ಸದ್ಯಕ್ಕೆ ಆಟೋ ಬಿಡಿಭಾಗ ತಯಾರಿಕಾ ಘಟಕಗಳು ಜಿಡಿಪಿಗೆ 2.7%ರಷ್ಟು ಕೊಡುಗೆ ನೀಡುತ್ತಿವೆ ಹಾಗೂ ಐದು ದಶಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿವೆ ಎಂದ ಅವರು; ಈ ಕ್ಷೇತ್ರದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಲು ಅವಕಾಶ ಇದೆ. ಪ್ರಧಾನ ಮಂತ್ರಿಗಳ ಆತ್ಮನಿರ್ಭರ್ ಭಾರತ್ ಹಾಗೂ ಮೆಕ್ ಇನ್ ಇಂಡಿಯಾ ಪರಿಕಲ್ಪನೆಗಳ ಪ್ರಕಾರ ನಾವು ವಿಕಸಿತ್ ಭಾರತ್ 2047 ಗುರಿಯನ್ನು ಮುಟ್ಟಲು ಸಾಧ್ಯವಿದೆ ಎಂದು ಅವರು ಹೇಳಿದರು.
ಜಾಗತಿಕ ಮಟ್ಟದಲ್ಲಿ ದೇಶೀಯ ಆಟೋ ಬಿಡಿಭಾಗ ಉದ್ಯಮ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅಲ್ಲದೆ, ದುಬಾರಿ ಸಾರಿಗೆ, ವೆಚ್ಚಗಳ ಒತ್ತಡಕ್ಕೆ ಸಿಲುಕಿದೆ. ಇಷ್ಟಾದರೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಕ್ಷೇತ್ರದ ರಪ್ತು ವಹಿವಾಟು ಬೆಳವಣಿಗೆಯನ್ನು ಕಂಡಿದೆ ಇಂದು ಅವರು ಹೇಳಿದರು.
ಈ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ, ಉತ್ಪಾದನಾ ಸಂಪರ್ಕ ಉಪಕ್ರಮ (PLI) ಗಳನ್ನು ಸಾಕಷ್ಟು ಕೈಗೊಂಡಿದೆ. ಈ ಮೂಲಕ ₹74,850 ಕೋಟಿ ಹೂಡಿಕೆಯನ್ನು ಉತ್ತೇಜಿಸಲಾಗಿದೆ. ಈ ಪೈಕಿ ₹17,836 ಮೊತ್ತ 2024 ಮಾರ್ಚ್ ಹೊತ್ತಿಗೆ ಹೂಡಿಕೆ ಆಗಿದೆ. ಇದರ ಪರಿಣಾಮವಾಗಿ 30,500 ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ. ಇದು ಉದ್ಯಮಕ್ಕೆ ದೊಡ್ಡ ಶಕ್ತಿಯನ್ನು ತುಂಬಿದೆ ಎಂದು ಸಚಿವರು ಹೇಳಿದರು.
ಫೇಮ್ 3 ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು. ಅದುವರೆಗೂ ಆಟೋ ಕ್ಷೇತ್ರಕ್ಕೆ ಉತ್ತಜನ ನೀಡಲು EMPS ಯೋಜನೆಯನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು. ಸಮಾವೇಶದಲ್ಲಿ ACMA ಅಧ್ಯಕ್ಷೆ ಶ್ರದ್ಧಾ ಸೂರಿ ಮರ್ವಾಹ್, SIAM ಅಧ್ಯಕ್ಷ ವಿನೋದ ಅಗರ್ವಾಲ್, CII ಅಧ್ಯಕ್ಷ ಮತ್ತು ITC ವ್ಯವಸ್ಥಾಪಕ ನಿರ್ದೇಶಕ ಸಂಜೀವ ಪೂರಿ, ಮಾರುತಿ ಸುಜುಕಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹಿಸಾಶಿ ತಕೇಚಿ ಮತ್ತು SCALE ಅಧ್ಯಕ್ಷ ಡಾ. ಪವನ್ ಗೋಯಂಕ ಸೇರಿದಂತೆ ಉದ್ಯಮದ ಗಣ್ಯರು ಹಾಜರಿದ್ದರು.
-
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ: ಸಿದ್ದರಾಮಯ್ಯ ಹೇಳಿಕೆ -
ತಮಿಳುನಾಡಿನಲ್ಲಿ ರಂಗೇರಿದ ಅಖಾಡ: ಹೊಸ ಶಕ್ತಿಯಾಗಿ ವಿಜಯ್ ಪ್ರವೇಶ, ಪ್ರಮುಖ ಪಕ್ಷಗಳು, ಚರ್ಚೆಯ ವಿಷಯಗಳು -
By Election: ಒಬ್ಬರಿಂದ ಪಕ್ಷ ಗೆಲ್ಲಲ್ಲ, ಇದು ಕಾಂಗ್ರೆಸ್ ಸಿದ್ಧಾಂತಕ್ಕೆ ಸಿಗುವ ಜಯ: ಸಲೀಂ ಅಹ್ಮದ್ ಟಾಂಗ್ ಕೊಟ್ಟಿದ್ಯಾರಿಗೆ? -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ












Click it and Unblock the Notifications