ಸ್ಮೃತಿ ಇರಾನಿ ಶೈಕ್ಷಣಿಕ ದಾಖಲೆ ಸಲ್ಲಿಸುವಂತೆ ಕೋರ್ಟ್ ಆದೇಶ

Posted By:
Subscribe to Oneindia Kannada

ನವದೆಹಲಿ, ಮಾ 17 (ಪಿಟಿಐ): ಕೇಂದ್ರ ಮಾನವ ಸಂಪನ್ಮೂಲ ಖಾತೆಯ ಸಚಿವೆ ಸ್ಮೃತಿ ಇರಾನಿ ಪದವಿ ಅರ್ಹತೆಗೆ ಸ೦ಬ೦ಧಿಸಿ ಪ್ರಮಾಣಪತ್ರ ಸಲ್ಲಿಸುವ೦ತೆ ದೆಹಲಿ ವಿವಿ ಮತ್ತು ಚುನಾವಣಾ ಆಯೋಗಕ್ಕೆ ದೆಹಲಿ ಕೋರ್ಟ್ ಆದೇಶಿಸಿದೆ.

ಸಚಿವೆ ಇರಾನಿಯ ವಿದ್ಯಾರ್ಹತೆಯ ವಿಚಾರದಲ್ಲಿರುವ ಗೊಂದಲಗಳ ನಡುವೆ, ಕಳೆದ ಲೋಕಸಭಾ ಚುನಾವಣೆಯ ವೇಳೆ ಇರಾನಿ ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದರು ಎಂದು ಅಹ್ಮರ್ ಖಾನ್ ಎನ್ನುವವರು ದೂರು ದಾಖಲಿಸಿದ್ದರು.(ಅಂದು ಮೋದಿ ರಾಜೀನಾಮೆ ಕೇಳಿದ್ದ ಸ್ಮೃತಿ)

Union HRD minister Smriti Irani degree row, Magistrate court asks records from EC and DU

ಹೋದ ವರ್ಷ ನವೆಂಬರ್ ತಿಂಗಳಲ್ಲಿ ದೂರು ಸ್ವೀಕರಿಸಿದ್ದ ಮೆಟ್ರೋಪಾಲಿಟನ್ ಕೋರ್ಟ್, ಚುನಾವಣಾ ಆಯೋಗ ಮತ್ತು ದೆಹಲಿ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ದಾಖಲೆ ಸಲ್ಲಿಸುವಂತೆ ಸೂಚಿಸಿತ್ತು.

ನ್ಯಾಯಾಲಯದ ಆದೇಶದಂತೆ ಆಯೋಗ ಮತ್ತು ವಿವಿಯ ಅಧಿಕಾರಿಗಳು ಕೋರ್ಟ್ ನಲ್ಲಿ ಬುಧವಾರ (ಮಾ 16) ದಾಖಲೆ ಸಲ್ಲಿಸಿದ್ದರೂ, ಇನ್ನೂ ಹೆಚ್ಚಿನ ದಾಖಲೆಯ ಜೊತೆ ಮಾಹಿತಿ ನೀಡುವಂತೆ ಆದೇಶಿಸಿ, ಮೇ ಮೂರಕ್ಕೆ ಕೇಸನ್ನು ಕೋರ್ಟ್ ಮುಂದೂಡಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಿಂದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ, ಉದ್ದೇಶಪೂರ್ವಕವಾಗಿ ಸುಳ್ಳು ಶೈಕ್ಷಣಿಕ ಸರ್ಟಿಫಿಕೇಟ್ ಸಲ್ಲಿಸಿದ್ದರೆಂದು ಅಹ್ಮರ್ ಖಾನ್ ಕೋರ್ಟ್ ಮೆಟ್ಟಲೇರಿದ್ದರು.

ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಶೈಕ್ಷಣಿಕ ಮಾಹಿತಿಯಲ್ಲಿ ದೆಹಲಿ ವಿವಿಯ ಮೂಲಕ ಬಿಕಾಂ ಪದವೀಧರೆ (ಪಾರ್ಟ್ 1) ಎಂದು ಸಚಿವೆ ಸ್ಮೃತಿ ಇರಾನಿ ಮಾಹಿತಿ ಸಲ್ಲಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Magistrate Court asked Election Commission and Delhi University to submit more documents related to records of educational qualification of Union HRD Minister Smriti Irani against whom a complaint was filed for allegedly giving false information in affidavits to the poll panel.
Please Wait while comments are loading...