Amit Shah: ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಅಮಿತ್ ಶಾ: ಪೊಲಿಟಿಕಲ್ ಬಿಟ್ಟು ಮುಂದೆ ಏನು ಮಾಡ್ತಾರಂತೆ ಗೊತ್ತಾ..?
ರಾಷ್ಟ್ರ ರಾಜಕೀಯದಲ್ಲಿ ಪ್ರಧಾನಿ ಮೋದಿಯ ನಂತರ ಪ್ರಬಲವಾಗಿ ಕೇಳಿ ಬರುವ ಹೆಸರು ಅಂದ್ರೆ, ಅದು ಬಿಜೆಪಿಯ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ.. ಯಾವುದೇ ಚುನಾವಣೆಯ ಸಂದರ್ಭದಲ್ಲೂ ಅಮಿತ್ ಶಾ ಅವರ ಪಾತ್ರ ಸಾಕಷ್ಟು ಮಹತ್ವವನ್ನ ಪಡೆದಿರುತ್ತದೆ. ಚುನಾವಣೆಯ ಸಂದರ್ಭದಲ್ಲಿ ಅಮಿತ್ ಶಾ ಮ್ಯಾಜಿಕ್ ಪ್ರತಿಪಕ್ಷದ ಸ್ಪರ್ಧಿಗಳಿಗೆ ನಡುಕ ಶುರು ಮಾಡುತ್ತದೆ. ಇತ್ತ ಅಧಿಕಾರದಲ್ಲೂ ಅಮಿತ್ ಶಾ ಅವರ ಶಕ್ತಿ ಪ್ರದರ್ಶನ ನಡೆದಿದೆ. ಆದರೆ ಅಮಿತ್ ಶಾ ಪಾಲಿಟಿಕ್ಸ್ ಬಿಡ್ತಿದ್ದಾರಾ? ರಾಜಕೀಯ ನಿವೃತ್ತಿ ತೆಗೆದುಕೊಳ್ತಿದ್ದಾರಾ? ಇಂಥದ್ದೊಂದು ಚರ್ಚೆ ಶುರುವಾಗಿದೆ.
ಹೌದು, ಇಂಥದ್ದೊಂದು ಪ್ರಶ್ನೆ ಹುಟ್ಟೋದಕ್ಕೆ ಕಾರಣ ಬೇರು ಅಲ್ಲ ಖುದ್ದು ಅಮಿತ್ ಶಾ ಆಡಿರೋ ಮಾತುಗಳು. ಅಮಿತ್ ಶಾ ಅವರು ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಸಹಜವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ಅಮಿತ್ ಶಾ ಆ ದೊಡ್ಡ ಹುದ್ದೆ ಏರಬಹುದು ಅನ್ನೋ ಚರ್ಚೆಯಲ್ಲಿದೆ. ಈ ನಡುವೆ ಅಚ್ಚರಿ ಎಂಬಂತೆ ಅಮಿತ್ ಶಾ, ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿರೋದು ಬಹುದೊಡ್ಡ ಚರ್ಚೆಗೆ ಕಾರಣವಾಗಿದೆ.

ಅಹಮದಾಬಾದ್ನಲ್ಲಿನ ಸಹಕಾರಿ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ರಾಜಕೀಯ ನಿವೃತ್ತಿ ವಿಚಾರವಾಗಿ ಮಾತನಾಡಿದ್ದಾರೆ. ತಾವು ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರ ಏನ್ಮಾಡಬೇಕು ಅಂದ್ಕೊಂಡಿದ್ದೀನಿ ಅನ್ನೋದನ್ನ ಕಾರ್ಯಕ್ರಮದಲ್ಲಿ ನೆರದಿದ್ದವರಿಗೆ ತಿಳಿಸಿದ್ದಾರೆ. ನಾನು ನಿರ್ಧರಿಸಿದ್ದೇನೆ.. ನಾನು ನಿವೃತ್ತಿ ಆದ್ಮೇಲೆ ಏನ್ಮಾಡಬೇಕು ಅಂತಾ.. ನಾನು ನನ್ನ ಉಳಿದ ಜೀವನವನ್ನು ವೇದಗಳು, ಉಪನಿಷತ್ತುಗಳು ಮತ್ತು ನೈಸರ್ಗಿಕ ಕೃಷಿಗೆ ಮೀಸಲಿಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ಮೂರು ವಿಚಾರಗಳ ಬಗ್ಗೆ ಅಧ್ಯಯನ ಮಾಡುವೆ ಅನ್ನೋ ಮೂಲಕ ಅಲ್ಲಿ ನೆರದಿದ್ದವರ ಅಚ್ಚರಿಯಾಗಿ ಕಣ್ಣು ಅರಳಿಸುವಂತೆ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜಕೀಯ ನಿವೃತ್ತಿ ನಂತರ ತಮ್ಮ ಜೀವನವನ್ನು ವೇದಗಳು, ಉಪನಿಷತ್ತುಗಳು ಮತ್ತು ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳುವ ಯೋಜನೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಅವರು ನಿವೃತ್ತಿ ನಂತರ ರಾಜಕೀಯದಿಂದ ದೂರವಿದ್ದು, ಈ ಮೂರು ಕ್ಷೇತ್ರಗಳ ಅಧ್ಯಯನ ಮತ್ತು ಅಭ್ಯಾಸಕ್ಕೆ ತಮ್ಮ ಸಮಯ ಮೀಸಲಿಡಲಿದ್ದಾರಂತೆ. ಅಮಿತ್ ಶಾ ನೈಸರ್ಗಿಕ ಕೃಷಿಯನ್ನು ವೈಜ್ಞಾನಿಕ ಪ್ರಯೋಗವಾಗಿ ಪರಿಗಣಿಸುತ್ತಿದ್ದಾರೆ ಮತ್ತು ರೈತರ ಸಬಲೀಕರಣಕ್ಕೆ ಸಹಕಾರದ ಮೂಲಕ ಸಮೃದ್ಧಿ ಸಾಧಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.
ನಾನು ನಿವೃತ್ತಿಯಾದ ನಂತರ ನನ್ನ ಉಳಿದ ಜೀವನವನ್ನು ವೇದಗಳು, ಉಪನಿಷತ್ತುಗಳು ಮತ್ತು ನೈಸರ್ಗಿಕ ಕೃಷಿಗೆ ಅರ್ಪಿಸುವ ನಿರ್ಧಾರ ಮಾಡಿಕೊಂಡಿದ್ದೇನೆ. ನನಗೆ ಪುಸ್ತಕ ಓದುವ ಹವ್ಯಾಸವನ್ನು ಹೊಂದಿದ್ದು, ತಮ್ಮ ಬಳಿ 8,000 ಪುಸ್ತಕಗಳಿವೆ ಎಂದು ತಿಳಿಸಿದ್ದಾರೆ. ಆದರೆ ರಾಜಕೀಯ ಕಾರ್ಯಭಾರದಿಂದ ಅವುಗಳನ್ನು ಓದಲು ಸಮಯ ಸಿಗಲಿಲ್ಲ ಎಂದು ತಿಳಿಸಿದ್ದಾರೆ. ನಿವೃತ್ತಿಯ ನಂತರ ಈ ಪುಸ್ತಕಗಳನ್ನು ಓದುತ್ತಾ, ಶ್ರಾವಣ ಸಂಗೀತವನ್ನು ಆನಂದಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ನೈಸರ್ಗಿಕ ಕೃಷಿಯ ಬಗ್ಗೆ ಮಾತನಾಡಿದ ಅವರು, ರಾಸಾಯನಿಕ ಗೊಬ್ಬರ ಬಳಸಿ ಬೆಳೆದ ಗೋಧಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ನೈಸರ್ಗಿಕ ಕೃಷಿಯು ಆರೋಗ್ಯವನ್ನು ಸುಧಾರಿಸಲು ಮತ್ತು ಔಷಧಿಗಳ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವಿವರಿಸಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ ಅವರು, ಸರಿಯಾದ ಆಹಾರ, ನೀರು, ವ್ಯಾಯಾಮ ಮತ್ತು ನಿದ್ರೆ ಮೂಲಕ ಕಳೆದ 4.5 ವರ್ಷಗಳಲ್ಲಿ ಔಷಧಿಗಳನ್ನು ಸಂಪೂರ್ಣವಾಗಿ ಬಿಟ್ಟು ಆರೋಗ್ಯವಂತರಾಗಿದ್ದಾರೆ ಎಂದು ತಿಳಿಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications