ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಕೋವಿಡ್ ಲಸಿಕೆಗೆ ಕೊರತೆ ಉಂಟಾಗಿಲ್ಲ: ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಏಪ್ರಿಲ್ 7: ಕೋವಿಡ್-19 ಲಸಿಕೆಗಳು ಖಾಲಿಯಾಗುತ್ತಿದ್ದು, ಕೆಲವೇ ದಿನಗಳಲ್ಲಿ ಕೊರತೆ ಸನ್ನಿವೇಶ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ಲಸಿಕೆಗಳನ್ನು ರವಾನಿಸುವಂತೆ ಕೇಂದ್ರ ಸರ್ಕಾರವನ್ನು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಕೋರಿಕೊಂಡಿವೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿನ ಕೊರೊನಾ ವೈರಸ್ ಲಸಿಕೆ ಸಂಗ್ರಹದಲ್ಲಿ ಕೊರತೆ ಉಂಟಾಗಿದೆಯೇ ಎಂಬು ಅನುಮಾನ ವ್ಯಕ್ತವಾಗಿದ್ದು, ಅದನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.

ಎಲ್ಲ ರಾಜ್ಯಗಳಿಗೂ ಅವುಗಳಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ. ಯಾವುದೇ ರಾಜ್ಯ ಲಸಿಕೆ ಕೊರತೆ ಎದುರಿಸಲು ಕೇಂದ್ರ ಸರ್ಕಾರ ಬಿಡುವುದಿಲ್ಲ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆ ಖಾಲಿ: ಇರುವ ಸಂಗ್ರಹ ಮೂರು ದಿನದವರೆಗೆ ಮಾತ್ರಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆ ಖಾಲಿ: ಇರುವ ಸಂಗ್ರಹ ಮೂರು ದಿನದವರೆಗೆ ಮಾತ್ರ

'ನಮ್ಮಲ್ಲಿ 14 ಲಕ್ಷ ಡೋಸ್‌ನಷ್ಟು ಲಸಿಕೆ ಮಾತ್ರ ಉಳಿದಿದ್ದು, ಅದು ಮೂರು ದಿನಗಳಿಗಷ್ಟೇ ಸಾಲುತ್ತದೆ. ನಮಗೆ ಪ್ರತಿ ವಾರ 40 ಲಕ್ಷ ಡೋಸ್‌ನಷ್ಟು ಲಸಿಕೆಯ ಸಂಗ್ರಹದ ಅಗತ್ಯವಿದೆ. ಈಗಾಗಲೇ ಲಸಿಕೆ ಇಲ್ಲದೆ ಕೆಲವು ಲಸಿಕೆ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಬಾಕಿ ಉಳಿದ ಲಸಿಕೆಗಳು ಮುಗಿದರೆ ರಾಜ್ಯದಲ್ಲಿ ಲಸಿಕೆ ಕಾರ್ಯಕ್ರಮವೇ ನಿಂತುಹೋಗಲಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ನಡೆದ ಸಭೆಯಲ್ಲಿ ಕಳವಳ ಹಂಚಿಕೊಳ್ಳಲಾಗಿದೆ' ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದರು.

Union Health Minister Harsh Vardhan Clarifies There Is No Shortage Of Covid-19 Vaccines

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹರ್ಷವರ್ಧನ್, ಮಂಗಳವಾರ ನಡೆದ ಸಭೆಯಲ್ಲಿ ಅವರ ಕಳವಳವನ್ನು ಪರಿಗಣಿಸಲಾಗಿದೆ. ಯಾವುದೇ ರಾಜ್ಯವು ಲಸಿಕೆ ಕೊರತೆ ಎದುರಿಸುವುದಿಲ್ಲ. ಕೊರತೆ ಉಂಟಾಗಲು ನಾವು ಅವಕಾಶ ನೀಡುವುದಿಲ್ಲ. ಪ್ರತಿ ರಾಜ್ಯಕ್ಕೂ ಅವುಗಳ ಅಗತ್ಯಕ್ಕೆ ಅನುಗುಣವಾಗಿ ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದಿದ್ದಾರೆ.

English summary
Union Health Minister Harsh Vardhan clarifies that there is no shortage of Covid-19 vaccines as Maharashtra and Andhra Pradesh states send SOS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X