• search

ಪೆಟ್ರೋಲ್‌-ಡೀಸೆಲ್‌ ದರ ನಿಯಂತ್ರಣಕ್ಕೆ 4 ಸೂತ್ರಗಳು ಇಲ್ಲಿವೆ

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿ, ಜೂನ್ 4: ದಿನೇ ದಿನೇ ಪೆಟ್ರೋಲ್ ಏರಿಕೆಯಿಂದಾಗಿ ಜನರು ಆತಂಕಪಡುವಂತಾಗಿದೆ. ಬೆಲೆ ಕಡಿತಗೊಳಿಸಲು ಎಷ್ಟೇ ಪ್ರಯತ್ನಪಟ್ಟರೂ ಬೆಲೆ ಮಾತ್ರ ಹೀಗೆ 1 ಪೈಸೆ ಇಳಿಕೆ ಕಂಡು ಹಾಸ್ಯಕ್ಕೆ ಗುರಿಯಾಗುತ್ತಿದೆ. ಆದರೆ ಈ ನಾಲ್ಕು ಸೂತ್ರಗಳನ್ನು ಅನುಸರಿಸಿದರೆ ಇಂಧನ ಬೆಲೆ ಹೆಚ್ಚಳವನ್ನು ತಗ್ಗಿಸಬಹುದು.

  ಜಿಎಸ್‌ಟಿ: ಟ್ರೇಡ್‌ ಅಸೋಸಿಯೇಷನ್ ಪೆಟ್ರೋಲಿಯಮ್ ಉತ್ಪನ್ನಗಳನ್ನು ಜಿಎಸ್‌ಟಿ ಕಾಯ್ದೆಯಡಿ ತರಲು ಪ್ರಯತ್ನಿಸಿದೆ. ಆದರೆ ಇದುವರೆಗೆ ರಾಜ್ಯ ಸರ್ಕಾರದ ಜತೆಗೆ ಮಾತುಕತೆ ನಡೆದಿಲ್ಲ. ಕಳೆದ ವಾರ ಕೇಂದ್ರ ಸರ್ಕಾರವು ತೈಲ ಉತ್ಪನ್ನಗಳನ್ನು ಜಿಎಸ್‌ಟಿ ಕಾಯ್ದೆಯಡಿ ತರಲು ಪ್ರಯತ್ನ ನಡೆಸಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಇದರಿಂದ ತೆರಿಗೆ ಶೇ.50ರಿಂದ 40ಕ್ಕೆ ಇಳಿಯಲಿದೆ. ಇದರಿಂದ ಬೆಲೆ ನಿಯಂತ್ರಣಕ್ಕೆ ಬರಲಿದೆ.

  16 ದಿನಗಳ ಏರಿಕೆ ನಂತರ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ

  ಭವಿಷ್ಯದ ಟ್ರೇಡಿಂಗ್: ಫ್ಯೂಚರ್‌ ಟ್ರೇಡಿಂಗ್ ಎಂದರೆ ಟ್ರೇಡಿಂಗ್ ಎಂದರೆ ಭವಿಷ್ಯದಲ್ಲಿ ಪೆಟ್ರೋಲ್ ಅಥವಾ ಡೇಸೆಲ್ ಶೇರನ್ನು ಕೊಳ್ಳುವ ಅಥವಾ ಮಾರಾಟ ಮಾಡುವ ಕರಾರಾಗಿದೆ. ಇದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಶೇರಿನ ಬೆಲೆ ಖಾತೆಗೆ ಬೀಳಲಿದೆ. ಈ ಕುರಿತು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಫ್ಯೂಚರ್ ಟ್ರೇಡಿಂಗ್ ಕರಾರು ಮಾಡಲು ಮುಂದಾಗಿದ್ದಾರೆ.

  Union govt eyes on alternatives for cut down fuel price

  ಲಾಭದ ತೆರಿಗೆ: ಭಾರತದಲ್ಲಿ ತೈಲ ಸಂಸ್ಕರಣೆ ಮಾಡುವ ಕಂಪನಿಗಳಿಗೆ ಲಾಭವಾಗಲಿದೆ. ಈ ಲಾಭದ ಮೇಲೆ ತೆರಿಗೆ ವಿಂಡ್‌ಫಾಲ್‌ ತೆರಿಗೆಯಾಗಿರುತ್ತದೆ. ವಿಂಡ್ ಫಾಲ್ ತೆರಿಗೆ ಭಾರಿ ಲಾಭದ ಮೇಲಿನ ತೆರಿಗೆಯನ್ನು ತೈಲೋತ್ಪನ್ನ ಕಂಪನಿಗಳ ಮೇಲೆ ವಿಧಿಸಬಹುದಾಗಿದೆ. ಒಂದೊಮ್ಮೆ ಕಚ್ಚಾತೈಲ ಬೆಲೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾದಾಗ, ಭಾರತದಲ್ಲಿ ತೈಲ ಸಂಸ್ಕರಣೆ ಮಾಡೋ ಕಂಪನಿಗಳಿಗೆ ಬಾರಿ ಲಾಭವಾಗಲಿದೆ.

  ಕಚ್ಚಾ ತೈಲ ಬೆಲೆ ಮೇಲೆ ರಿಯಾಯಿತಿ:
  ವಿದೇಶಗಳನ್ನು ನಮ್ಮ ದೇಶದೊಂದಿಗೆ ಸೇರಿಸಿಕೊಳ್ಳುವ ಯೋಜನೆಯೊಂದನ್ನು ಸರ್ಕಾರ ಹುಟ್ಟುಹಾಕಿದೆ. ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳಿಗೆ ಬರೋ ಕಚ್ಚಾ ತೈಲದ ಬೆಲೆ ಇತರ ಖಂಡಗಳಿಗಿಂತ ಹೆಚ್ಚು. ಇದು ಸಂಪೂರ್ಣವಾಗಿ ಸಾಧ್ಯವಾಗದು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Despite a straight sixth day cut in petrol and diesel prices , rates are still quite high across the country. In the backdrop of this, the government is mulling long-term solutions to address the issue of spiralling fuel prices.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more