ಚಾಯ್ ವಾಲಾ ಪ್ರಧಾನಮಂತ್ರಿಯಾದರೆ ಹೀಗೇ ಆಗೋದು!!

Posted By:
Subscribe to Oneindia Kannada

ಕಾರ್ತಿಕ ಶುದ್ದ ಅಷ್ಠಮಿಯ ದಿನವಾದ ಮಂಗಳವಾರ (ನ 8) ರಾತ್ರಿ ಪ್ರಧಾನಿ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟಿನ ನಿಷೇಧದ ಘೋಷಣೆ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದೆ.

ಗಲ್ಲಿ ಬೀದಿಗಳಲ್ಲಿ ಎಲ್ಲಾ ಒಂದೇ ಮಾತು ಒಂದೇ ಚರ್ಚೆ.. ಮೋದಿ.. ಐನೂರು.. ಸಾವಿರ. ತಮ್ಮ ನೋಟಿನ ಕಥೆಯೇನು ಎನ್ನುವುದೇ ಸಾರ್ವಜನಿಕರ ಗೊಂದಲ. (500, 1000 ರೂ ನೋಟು ಏನು ಮಾಡೋದು, ಪ್ರಶ್ನೋತ್ತರ)

ಪ್ರಧಾನಿ ತಮ್ಮ ಭಾಷಣದಲ್ಲಿ ಯಾರೂ ಆತಂಕ ಪಡಬೇಕಾಗಿಲ್ಲ, ನಿಮ್ಮ ನೋಟುಗಳನ್ನು ಹೇಗೆ ಬದಲಾಯಿಸಿಕೊಳ್ಳಬಹುದು ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದರೂ, ಜನರ ಆತಂಕ ದೂರವಾಗಿಲ್ಲ.

ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಂತೂ, ಮೋದಿ ಪರ, ವಿರೋಧ ಘೋಷಣೆಗಳು ತಾರಕಕ್ಕೇರಿವೆ. ಪ್ರಧಾನಿ ಮೋದಿ ನಿರ್ಧಾರಕ್ಕೆ ಬಹುತೇಕ ಜನ ತಲೆದೂಗಿದ್ದರೂ, ರಾತ್ರೋರಾತ್ರಿ ಹೀಗೆ ಮಾಡಬಾರದಿತ್ತು ಎನ್ನುವುದು ಒಂದಷ್ಟು ಜನರ ನೋವು.

ಚಾಯ್ ವಾಲಾ ಪ್ರಧಾನಿಯಾದರೆ ಇನ್ನೇನು ಆಗುತ್ತೆ.. ಹೀಗೆ.. ಮೋದಿ ಸರಕಾರದ ಐತಿಹಾಸಿಕ ನಿರ್ಧಾರದ ನಂತರ ಸಾಮಾಜಿಕ ತಾಣದಲ್ಲಿ ಕೆಲವೊಂದು ಹಾಸ್ಯಾಸ್ಪದ ಟ್ರೋಲ್ ಗಳು ಎಗ್ಗಿಲ್ಲದಂತೆ ಹರಿದಾಡುತ್ತಿದೆ. ಅದರಲ್ಲಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ಚಾಯ್ ವಾಲ

ಚಾಯ್ ವಾಲ

ಚಾಯ್ ವಾಲಾ ಪ್ರಧಾನಿಯಾದರೆ ಹೀಗೇ ಆಗೋದು, ಚಾಯ್ ವಾಲಾ 5,10,20,50,100 ರೂಪಾಯಿ ಮಾತ್ರ ನೋಡಿರುತ್ತಾನೆ. ಐನೂರು, ಸಾವಿರ ರೂಪಾಯಿ ಎಲ್ಲಿ ನೋಡಿರುವುದಿಲ್ಲ. ಅದಕ್ಕಾಗಿಯೇ ಅದನ್ನು ನಿಷೇಧಿಸಲಾಗಿದೆ.

ಮೋದಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರು ಯಾರು?

ಮೋದಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರು ಯಾರು?

ದೇಶಕ್ಕೆ ಏನೂ ಮಾಡುತ್ತಿಲ್ಲ ಎನ್ನುವರಿಗೆ ಉತ್ತರ

ಮೋದಿ ಸರಕಾರದ ನಿರ್ಧಾರದಿಂದ ಅವರು ದೇಶಕ್ಕೆ ಏನೂ ಮಾಡುತ್ತಿಲ್ಲ ಎನ್ನುವುದಕ್ಕೆ ಉತ್ತರ ಸಿಕ್ಕಿದೆ

ವಿಜಯ್ ಮಲ್ಯ.

ವಿಜಯ್ ಮಲ್ಯ.

ದೇಶಕ್ಕೆ ಈಗ ಬೇಕಾದರೆ ಐನೂರು, ಸಾವಿರ ರೂಪಾಯಿ ನೋಟಿನ ಜೊತೆಗೆ ವಾಪಸ್ ಬರುತ್ತೇನೆ.

ಟ್ರಾಫಿಕ್ ಪೊಲೀಸ್

ಟ್ರಾಫಿಕ್ ಪೊಲೀಸ್

ಇವತ್ತು ಯಾರಾದಾರೂ ಕುಡಿದು ಗಾಡಿ ಓಡಿಸಬಹುದು, ನೂರು ರೂಪಾಯಿ ಮಾತ್ರ ದಂಡ.

500, 1000 ನೋಟು ನಿಷೇಧ

500, 1000 ನೋಟು ನಿಷೇಧದ ನಂತರ ಕಪ್ಪುಹಣದ ವಿನಿಮಯದ ಬಗ್ಗೆ ಹೀಗೊಂದು ಟ್ವೀಟ್

ಹಿಂದೆ ಶ್ರೀಮಂತರು ಬಡವರನ್ನು ನೋಡಿ ನಗುತ್ತಿದ್ದರು, ಈಗ ಅದರ ವಿರುದ್ದವಾಗುತ್ತಿದೆ.

ಹಿಂದೆ ಶ್ರೀಮಂತರು ಬಡವರನ್ನು ನೋಡಿ ನಗುತ್ತಿದ್ದರು, ಈಗ ಅದರ ವಿರುದ್ದವಾಗುತ್ತಿದೆ.

ಮೇರಾ ಪಾಸ್ ನೂರು ರೂಪಾಯಿ ನೋಟ್

ಮೇರಾ ಪಾಸ್ ನೂರು ರೂಪಾಯಿ ನೋಟ್

ಇಬ್ಬರ ನಡುವೆ ಸಂಭಾಷಣೆ

ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ

ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ

ಸತೀಶ್ ಆಚಾರ್ಯ ತಮ್ಮ ಫೇಸ್ ಬುಕ್ ಟೈಂಲೈನಿನಲ್ಲಿ ಹಾಕಿಕೊಂಡ ವ್ಯಂಗ್ಯ ಚಿತ್ರ

ಇನ್ನೊಂದು ವ್ಯಂಗ್ಯ ಚಿತ್ರ

ಇನ್ನೊಂದು ವ್ಯಂಗ್ಯ ಚಿತ್ರ

ರಘುಪತಿ ಶೃಂಗೇರಿಯವರ ವ್ಯಂಗ್ಯಚಿತ್ರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Narendra Modi government's decision to ban Rs.500 and Rs.1000 notes, funny trolls.
Please Wait while comments are loading...