ಜೇಟ್ಲಿ ಅವರಿಂದ ಫೆ. 29ರಂದು ಕೇಂದ್ರ ಬಜೆಟ್ ಮಂಡನೆ

Posted By:
Subscribe to Oneindia Kannada

ನವದೆಹಲಿ, ಜ.14: ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಫೆಬ್ರುವರಿ 29ರಂದು ಬೆಳಗ್ಗೆ ಸಂಸತ್ತಿನಲ್ಲಿ ಎರಡನೇ ಬಾರಿ ಎನ್‌ಡಿಎ ಸರ್ಕಾರದ ಬಜೆಟ್ ಮಂಡಿಸಲಿದ್ದಾರೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರು ಗುರುವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಫೆಬ್ರುವರಿ 29ಕ್ಕೆ 2016-17ನೇ ಸಾಲಿನ ಬಜೆಟ್ ಮಂಡಿಸಲಿದೆ. ಇದಕ್ಕಾಗಿ ಜಯಂತ್ ಸಿನ್ಹಾ, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣ್ಯಯನ್, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಅವರನ್ನೊಳಗೊಂಡ ಜೇಟ್ಲಿ ನೇತೃತ್ವದ ತಂಡ 2016ನೇ ಸಾಲಿನ ಬಜೆಟ್ ಸಿದ್ಧಪಡಿಸುತ್ತಿದೆ.[ಅರುಣ್ ಜೇಟ್ಲಿರಿಂದ ಪೂರ್ಣ ಪ್ರಮಾಣದ ಬಜೆಟ್ ]

Union Budget on Feb 29 by Arun Jaitley

ಜನಪರ ಹಾಗೂ ಮಾರುಕಟ್ಟೆಗೆ ಅನುಗುಣವಾಗಿ ಬಜೆಟ್ ರೂಪಿಸಲಾಗುತ್ತಿದ್ದು, ಜನ ಪರ, ಅಭಿವೃದ್ಧಿ ಪರ, ಉದ್ಯಮಿಗಳ ಸ್ನೇಹಿ ಬಜೆಟ್ ಇದಾಗಲಿದೆ ಎಂಬ ನಿರೀಕ್ಷೆಯಿದೆ. ಜನಸಾಮಾನ್ಯರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. [ಹಲವು ನಿರೀಕ್ಷೆಗಳ ಕನಸಿನಲ್ಲಿ ಬಜೆಟ್ 2015]

ಸರ್ವೇ ಜನಾಃ ಸುಖೀನೋ ಭವಂತು... ಸರ್ವೇ ಸಂತು ನಿರಾಮಯಃ' ಉಪನಿಷತ್‌ವಾಣಿಯೊಂದಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕಳೆದ ಬಜೆಟ್‌ ಭಾಷಣ ಮುಕ್ತಾಯ ಮಾಡಿದ್ದರು. ಆದರೆ, ಅನೇಕ ಯೋಜನೆಗಳು ಜಾರಿಯಾದರೂ ಅದರ ಫಲ ಶ್ರೀಸಾಮಾನ್ಯರಿಗೆ ತಲುಪಿಸುವಲ್ಲಿ ಸರ್ಕಾರದ ತಕ್ಕಮಟ್ಟಿಗೆ ಯಶಸ್ಸು ಕಂಡಿಲ್ಲ.

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ಪ್ರಯತ್ನ ಮಾಡಬಹುದು. ಜತೆಗೆ ಘೋಷಿತ ಜನೋಪಯೋಗಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬಹುದು. ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪಡಿತರ ಸಬ್ಸಿಡಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡಬಹುದು ಎಂಬ ನಿರೀಕ್ಷೆಯಿದೆ.

ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಇರುವುದರಿಂದ ಜನೋಪಯೋಗಿ ಯೋಜನೆಗಳಿಗೆ ಅನುದಾನ ಒದಗಿಸಲು ರಕ್ಷಣೆ, ಮೂಲಭೂತ ಸೌಲಭ್ಯ ಕ್ಷೇತ್ರಗಳಿಗೆ ನೀಡುತ್ತಿರುವ ಅನುದಾನ ಕಡಿತ ಮಾಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Minister of State for Finance Jayant Sinha on Thursday said the government will present the Budget for 2016-17 on February 29, which will set a roadmap for the coming three years.
Please Wait while comments are loading...